About Us Advertise with us Be a Reporter E-Paper

Breaking Newsದೇಶಪ್ರಚಲಿತ

ಖ್ಯಾತ ಅರ್ಥಶಾಸ್ತ್ರಜ್ಞ, ಪ್ರೊ.ಟಿ.ಎನ್ ಶ್ರೀನಿವಾಸನ್ ನಿಧನ

ಚೆನ್ನೈ:  ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ, ಪ್ರೊ.ಟಿ.ಎನ್ ಶ್ರೀನಿವಾಸನ್ (85) ಅವರು ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಶ್ರೇಷ್ಠ ಅರ್ಥಶಾಸ್ತ್ರಜ್ಞ ತಿರುಕೊದಿಕಾವಲ್ ನೀಲಕಂಠ ಶ್ರೀನಿವಾಸನ್ ಅವರು ಅತ್ಯುತ್ತಮ ಪರಂಪರೆಮ್ ಅಭಿವೃದ್ಧಿ ಅರ್ಥಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಂದ, ವಿದ್ಯಾರ್ಥಿಗಳ ಬೆಳವಣೆಗೆಗಳಿಗೆ ಹೆಸರಾಗಿದ್ದರು ಎಂದು ಭಾರದ ಸರಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ. ಅರವಿಂದ ಸುಬ್ರಹ್ಮಣ್ಯನ್, ಅವರು ಹೇಳಿದ್ದಾರೆ.

ಶ್ರೀನಿವಾಸನ್ ಅವರು ಮಾರ್ಚ್1933ರಲ್ಲಿ ಜನಿಸಿದ ಅವರು ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್‌ನಲ್ಲಿ ಸ್ಟಾಟಿಸ್ಟಿಕ್ಸ್ ವಿಷಯದಲ್ಲಿ ಬಿಎ,ಎಂಎ ಪದವಿ ಪಡೆದಿದ್ದರು.
ವಿಶ್ವ ಬ್ಯಾಂಕ್ ಅಭಿವೃದ್ದಿ ಸಂಶೋಧನಾ ಕೇಂದ್ರದ ವಿಶೇಷ ಸಲಹೆಗಾರರಾಗಿದ್ದ ಶ್ರೀನಿವಾಸ್ ಕಳೆದ ನಾಲ್ಕು ದಶಕಗಳಲ್ಲಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾದ್ಯಾಪಕರಾಗಿ, ಸೇವೆ ಸಲ್ಲಿಸಿದ್ದರು.

ಮನಮೋಹನ್ ಸಿಂಗ್ ಅವರು 1977ರಲ್ಲಿ ಜಾರಿಗೆ ತಂದಿದ್ದ ಆರ್ಥಿಕ ಸುಧಾರಣೆಗಳಿಗೆ ಶ್ರೀನಿವಾಸನ್ ಮಂಡಿಸಿದ್ದ ವಿದೇಶ ವ್ಯಾಪರ ಕ್ಷೇತ್ರದಲ್ಲಿನ ಸುಧಾರಣೆಗಳ ಕುರಿತು ಪ್ರಬಂಧವೇ ಮೂಲವಾಗಿತ್ತು. ವ್ಯಾಪಾರ ವ್ಯವಹಾರಗಳ ಮೇಲೆ ನಿಯಂತ್ರಣಕ್ಕೆ ಸರಕಾರದ ಕ್ರಮ ಮತ್ತು ಪಾತ್ರದ ಬಗ್ಗೆ ಅವರು ತಮ್ಮ ಅಧ್ಯಯಗಳಿಗೆ ಪ್ರತಿಪಾದನೆ ಮಾಡಿದ್ದರು.

ಅರ್ಥಶಾಸ್ತ್ರಕ್ಕೆ ಅವರು ಸಲ್ಲಿಸಿದ್ದ ಸೇವೆ ಪರಿಗಣಿಸಿ ಪದ್ಮಭೂಷಣ ಪ್ರಶಸ್ತಿ ಸಲ್ಲಿಸಿ ಗೌರವಿಸಲಾಗಿತ್ತು. ಶ್ರೀನಿವಾಸನ್ ಅವರ ನಿಧನಕ್ಕೆ ಮಾಜಿ ಸಚಿವ ಜೈರಾಮ್ ರಮೇಶ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close