About Us Advertise with us Be a Reporter E-Paper

Breaking Newsರಾಜ್ಯ

ಕ್ರಿಮಿನಾಶಕ ಸೇವಿಸಿ, ನೇಣುಬಿಗಿದು ರೈತ ಆತ್ಮಹತ್ಯೆ

ರಾಮನಗರ: ರೇಷ್ಮೆ ಧಾರಣೆ ಕುಸಿತದಿಂದ ನೊಂದಿದ್ದ ರೈತ ಕ್ರಮಿನಾಶಕ ಸೇವಿಸಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದ  ಕಟಮಾನದೊಡ್ಡಿಯಲ್ಲಿ ನಡೆದಿದೆ
 ಮುಖ್ಯಮಂತ್ರಿ ಕುಮಾರಸ್ವಾಮಿ ರೇಷ್ಮೆ ಗೂಡಿಗೆ ಬೆಂಬಲ ಬೆಲೆ ನೀಡುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ರೈತ ಕೆಂಪಯ್ಯ (38) ಕುಮಾರಸ್ವಾಮಿ ಯಾವುದೇ ಕ್ರಮಕೈಗೊಳ್ಳದೇ ಇರುವುದರಿಂದ ಬೇಸತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆ ರೇಷ್ಮೆ ಬೆಳೆ ಬಗ್ಗೆ ರೈತರು, ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಇಂದು ರೇಷ್ಮೆ ದರ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಯಾವುದೇ ನಿರ್ಧಾರ ಕೈಗೊಳ್ಳದೇ ರೈತ ಸಾವಿಗೆ ಕಾರಣರಾಗಿದ್ದಾರೆ.
ಮೃತ ರೈತ ವಿವಿಧ ಬ್ಯಾಂಕುಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ,  ಕೈಸಾಲ, ಒಡವೆ ಸಾಲ ಮಾಡಿಕೊಂಡಿದ್ದನು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.
Tags

Related Articles

Leave a Reply

Your email address will not be published. Required fields are marked *

Language
Close