ದಾವೂದ್‌ಗೆ ಪಾಕಿಸ್ತಾನ ಆಶ್ರಯ ನೀಡಿದೆ: ಟಕ್ಲಾ

Posted In : ದೇಶ

ದೆಹಲಿ: ಕುಖ್ಯಾತ ಭೂಗತ ಪಾತಕಿ, ಉಗ್ರ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಆಶ್ರಯವನ್ನು ನೀಡಿದೆ ಎಂಬ ಭಾರತದ ಆರೋಪಕ್ಕೆ ಪುಷ್ಟಿ ನೀಡುವ ಮತ್ತಷ್ಟು ಪುರಾವೆಗಳು ಲಭ್ಯವಾಗಿವೆ. ಕಳೆದ ವಾರ ದೆಹಲಿಯಲ್ಲಿ ಬಂಧಿಸಲಾಗಿದ್ದ ದಾವೂದ್ ಬಂಟ, ಫಾರೂಕ್ ಟಕ್ಲಾ ಪಾಕ್‌ನಲ್ಲಿರುವ ದಾವೂದ್‌ನ ವಿಳಾಸ, ನಿವಾಸ, ಮತ್ತು ಆತನ ಭದ್ರತೆ ಕುರಿತು ತನಿಖಾ ಮುಂದೆ ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ.

ಕಮಾಂಡೋಗಳಿಂದ ರಕ್ಷಣೆ: ಪಾಕಿಸ್ತಾನದ ಕರಾಚಿಯ ಶ್ರೀಮಂತರು ಮಾತ್ರ ವಾಸಿಸುವ ಕ್ಲಿಫ್ಟನ್ ಪ್ರದೇಶದಲ್ಲಿ ದಾವೂದ್ ವಾಸವಾಗಿದ್ದಾನೆ. ಆತನ ನಿವಾಸಕ್ಕೆ ಕಮಾಂಡೊಗಳು ರಕ್ಷಣೆಯನ್ನು ನೀಡುತ್ತಿದ್ದಾರೆ. ಭಯೋತ್ಪಾದನೆ ಕುರಿತು ಭಾರತ ಪ್ರತಿ ಬಾರಿ ಪಾಕಿಸ್ತಾನದ ವಿರುದ್ಧ ಒತ್ತಡ ಹೇರಿದಾಗಲೆಲ್ಲಾ ದಾವೂದ್ ಭಾರತದಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಲು ತಂತ್ರವನ್ನು ರೂಪಿಸುತ್ತಿದ್ದ . ಇದೇ ಮಾದರಿಯಲ್ಲಿ 1993ರ ಮುಂಬಯಿ ಬಾಂಬ್ ಸ್ಫೋಟಕ್ಕೆ ಸಂಚನ್ನು ರೂಪಿಸಿದ್ದ ಮಾಹಿತಿಯನ್ನು ಟಕ್ಲಾ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ದಾವೂದ್ ಹಾಗೂ ಆತನ ಪತ್ನಿ ಪಾಕ್‌ನ ಅಂಡಾ ಗ್ರೂಪ್ ದ್ವೀಪಗಳಲ್ಲಿ ವಾಸಿಸುತ್ತಿದ್ದು, ಅಲ್ಲಿ ಅವರಿಬ್ಬರನ್ನು ಬಿಟ್ಟರೆ ಸಂಚರಿಸಲು ಬೇರೆ ಯಾರಿಗೂ ಅವಕಾಶವಿರಲಿಲ್ಲ. ಪಾಕ್‌ನ ಅಧಿಕಾರಿಗಳು ನಿರಂತರವಾಗಿ ದಾವೂದ್ ಜತೆ ಮಾತನಾಡಲು ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಅಗತ್ಯ ಕಂಡು ಬಂದಾಗಲೆಲ್ಲಾ ದುಬೈಗೆ ತೆರಳಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು ಎಂದು ಫಾರೂಕ್ ತಿಳಿಸಿದ್ದಾನೆ. ಪಾಕಿಸ್ತಾನದ ಶತ್ರುಗಳು ಹಾಗೂ ಛೋಟಾ ರಾಜನ್ ತಂಡ 2000-2005ರೊಳಗೆ ದಾವೂದ್‌ನನ್ನು ತೀವ್ರ ಪ್ರಯತ್ನ ನಡೆಸಿದ್ದರ ಬಗ್ಗೆಯೂ ಹೇಳಿದ್ದಾನೆ. ಫಾರೂಕ್ ಟಕ್ಲಾ ದುಬೈನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿದ್ದಾನೆ. ತನ್ನ ತಾಯಿ ಭಾರತದಲ್ಲಿ ವಾಸವಾಗಿದ್ದು ಭಾರತದಲ್ಲಿಯೇ ಕೊನೆಯುಸಿರು ಬಿಡಬೇಕೆಂಬ ಆಸೆಯನ್ನು ಹೇಳಿಕೊಂಡಿದ್ದಾನೆ.

Leave a Reply

Your email address will not be published. Required fields are marked *

1 + 2 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top