About Us Advertise with us Be a Reporter E-Paper

Breaking Newsವಿದೇಶ
Trending

ಇದು ತಂದೆಯೇ ತಾಯಿಯಾದ ಹೃದಯಸ್ಪರ್ಶಿ ಘಟನೆ

ಥೈಲ್ಯಾಂಡ್: ಅಮ್ಮನಿಲ್ಲದ ಮಗುವಿಗೆ ತಂದೆಯೇ ತಾಯಿಯಾಗಿ ಅಮ್ಮಂದಿರ ದಿನದಲ್ಲಿ ಪಾಲ್ಗೊಂಡು ಮಗುವಿನ ಕೊರಗು ನೀಗಿಸಿದ ಮನಮಿಡಿಯುವ ಘಟನೆಯೊಂದು ನಡೆದಿದೆ.

ಥೈಲ್ಯಾಂಡ್‍ನಲ್ಲಿ ಪ್ರತಿ ವರ್ಷ ಆಗಸ್ಟ್ 12ರಂದು ತಾಯಂದಿರ ದಿನಾಚರಣೆ ಮಾಡಲಾಗುತ್ತೆ. ಪ್ರತಿಯೊಂದು ಶಾಲೆಯೂ ತಾಯಂದಿರ ದಿನದ ಪ್ರಯುಕ್ತ ಕಾರ್ಯಕ್ರಮ ಆಯೋಜಿಸುತ್ತೆ. ಆದರೆ ಐದು ವರ್ಷದ ಬಾಲಕನೊಬ್ಬನ ತಂದೆ ತಾಯಿಯ ಸ್ಥಾನವನ್ನು ತಾವೇ ತುಂಬಿದ್ದಾರೆ. ಥೇಟ್ ಮಹಿಳೆಯಂತೆಯೇ ಬಟ್ಟೆ ಧರಿಸಿಕೊಂಡು ಬಂದಿದ್ದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅಂದಹಾಗೆ ಬಾಲಕನ ಪೋಷಕರು ಪರಸ್ಪರ ವಿಚ್ಛೇದನ ಪಡೆದಿದ್ದಾರಂತೆ. ಈತನ ತಾಯಿ ಯುರೋಪ್‍ನಲ್ಲಿ ವಾಸವಾಗಿದ್ದಾಳೆ ಎನ್ನಲಾಗಿದೆ. ಅದೇನೆ ಇರಲಿ ತಾಯಂದಿರ ದಿನದಲ್ಲಿ ತಂದೆ ಪಾಲ್ಗೊಂಡು ತಾಯಿಯಿಲ್ಲದ ಕೊರಗನ್ನು ದೂರ ಮಾಡಿದ್ದಾರೆ. ಈ ಭಾವನಾತ್ಮಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಬನಿ ಮಿಡಿದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close