About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸ್ವಂತ ಮಗಳನ್ನೇ ಅತ್ಯಾಚಾರಗೈದ ಪಾಪಿ ತಂದೆ!

ಲಖನೌ: ಉತ್ತರ ಪ್ರದೇಶಲ್ಲಿ ಅಪ್ರಾಪ್ತೆಯರ ಮೇಲಿನ ದೌರ್ಜನ ದಿನೇ ದಿನೇ ಹೆಚ್ಚಾಗುತ್ತಿದ್ದು, ಸ್ವಂತ ಮಗಳನ್ನೇ ಅತ್ಯಾಚಾರ ಮಾಡಿದ ಘಟನೆ ಇಲ್ಲಿನ ಮಥುರಾದಲ್ಲಿ ನಡೆದಿದೆ. ಕಳೆದ ಹಲವಾರು ತಿಂಗಳಿನಿಂದ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದು, ಮಗಳು 13 ವಾರಗಳ ಗರ್ಭಿಣಿಯಾಗಿದ್ದಾಳೆ.

ಬಾಲಕಿ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಬಾಲಕಿ ತಂದೆಯ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಆ. 8ರಂದು ಆತನನ್ನು ಬಂಧಿಸಲಾಗಿದೆ.  ಅಲ್ಲದೇ  ಸಂತ್ರಸ್ತ ಅಪ್ರಾಪ್ತೆ ಭ್ರೂಣ ತೆಗೆಸಲು ಪೋಕ್ಸೊ ವಿಶೇಷ  ನ್ಯಾಯಾಲಯ ಅನುಮತಿ ನೀಡಿದೆ.

ನ್ಯಾಯಮೂರ್ತಿ ಸರಣ್‌ ತ್ರಿಪಾಟಿ, ತನಿಖಾಧಿಕಾರಿಗಳಿಗೆ ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದು ಗರ್ಭಪಾತ ಮಾಡಿಸುವಂತೆ ಆದೇಶಿಸಿದ್ದಾರೆ ಎಂದು ಎಡಿಜಿಸಿ ವಿರೇಂದ್ರ ಕುಮಾರ್‌ ಲಾವಾನಿಯಾ ತಿಳಿಸಿದ್ದಾರೆ. ಇದಲ್ಲದೆ ಕೋರ್ಟ್‌, ಡಿಎನ್‌ಎ ಪರೀಕ್ಷೆಗಾಗಿ ಭ್ರೂಣವನ್ನು ಸಂರಕ್ಷಿಸಲು ಸೂಚಿಸಿದ್ದು, ಸಂತ್ರಸ್ತೆಯ ಕುಟುಂಬಕ್ಕೆ 2 ಲಕ್ಷ ಪರಿಹಾರವನ್ನು ಕೂಡಲೇ ನೀಡುವಂತೆ ಮಥುರಾದ ಜಿಲ್ಲಾಧಿಕಾರಿಗೆ ಆದೇಶ ನೀಡಿದೆ.

Tags

Related Articles

Leave a Reply

Your email address will not be published. Required fields are marked *

Language
Close