ಮಗುವನ್ನೇ ಮಾರಲು ಮುಂದಾದ ತಂದೆ

Posted In : ದೇಶ

ಚಂಢೀಗಡ: ಆಗ ತಾನೇ ಹುಟ್ಟಿದ ಮಗುವೊಂದನ್ನು ಚೀಲದಲ್ಲಿ ತುಂಬಿಸಿ ಮಾರುವುದಕ್ಕಾಗಿ ಬಂದಿರುವ ಪ್ರಕರಣ ಹರ್ಯಾಣದ ಮೊಹಾಲಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ಆರೋಪಿಯನ್ನು ಜಸ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಹಸುಗೂಸನ್ನು ಚೀಲದಲ್ಲಿ ಹಾಕಿ, ಆಸ್ಪತ್ರೆಯ ವೈದ್ಯರ ಬಳಿಗೆ ತಂದ ಜಸ್ಪಾಲ್, ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾನು ಆ ಮಗುವನ್ನು ಮಾರುವ ಸಲುವಾಗಿ ಚೀಲದಲ್ಲಿ ತುಂಬಿಸಿ ತಂದಿರುವುದಾಗಿ ತಿಳಿಸಿದ್ದಾನೆ. ವಿಚಾರ ತಿಳಿದ ವೈದ್ಯರು ಮಗುವನ್ನು ಚೀಲದಿಂದ ಹೊರ ತೆಗೆದು ಪರೀಕ್ಷಿಸಿದಾಗ ಮಗು ಹೆಣ್ಣಾಗಿರುವುದು ಗಮನಕ್ಕೆ ಬಂದಿದ್ದು, ಮಗು ವಾಂತಿ ಮಾಡಿಕೊಳ್ಳುತ್ತಿರುವುದನ್ನು ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತಕ್ಷಣವೇ ನೀಡಿದ್ದಾರೆ.

ಪ್ರಕರಣವನ್ನು ಆಸ್ಪತ್ರೆಯ ಸಿಬ್ಭಂದಿ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆಯನ್ನು ನಡೆಸಿದ್ದಾರೆ. ಆರೋಪಿ ಜಸ್ಪಾಲ್‌ಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿರುವ ಕುರಿತು ವಿಚಾರಣೆಯ ಸಂದರ್ಭದಲ್ಲಿ ತಿಳಿದು ಬಂದಿದೆ. ತನ್ನ ಪತ್ನಿಯ ಚಿಕಿತ್ಸೆಗೆ ಹಣ ಹೊಂದಿಕೆ ಮಾಡುವ ಸಲುವಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

13 − ten =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top