About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಏಕಕಾಲದಲ್ಲಿ ವ್ಯಾಸಾಂಗ ಮಾಡಿದ್ದ ಅಪ್ಪ-ಮಗ!

ಸ್ವತಂತ್ರ ಚಳವಳಿ ಉನ್ನತಿಯಲ್ಲಿದ್ದ ವೇಳೆ ಕಾನ್ಪುರದ ಡಿ ಎ ವಿ ಕಾಲೇಜಿನಲ್ಲಿ ಕಲಾ ವಿಭಾಗದ ಸ್ನಾತಕೋತ್ತರ ಪದವಿ ಪಡೆಯಲು ವಾಜಪೇಯಿ ದಾಖಲಾಗಿದ್ದರು.

ಇದೇ ವೇಳೆ ವಾಜಪೇಯಿರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಕೂಡಾ ಎಂ ಎ ಪ್ರಥಮ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದರು! ಅಲ್ಲದೇ ಅಪ್ಪ-ಮಗ ಇಬ್ಬರೂ ಹಾಸ್ಟೆಲ್‌ನ ಒಂದೇ ಕೋಣೆಯಲ್ಲಿ ವಾಸವಿದ್ದರು.

ಇದೇ ವಿಚಾರವಾಗಿ ತಂದೆ-ಮಗ ಇಬ್ಬರೂ ಏಕಕಾಲದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿಚಾರ ಎಲ್ಲೆಡೆ ಖ್ಯಾತಿಗಳಿಸಿತ್ತು.

ಈ ವಿಷಯವಾಗಿ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ವಾಜಪೇಯಿ, “1946ರಲ್ಲಿ ಎಂ ಎ ವ್ಯಾಸಾಂಗ ಮಾಡಲು ಕಾನ್ಪುರದ ಡಿ ಎ ವಿ ಕಾಲೇಜಿಗೆ ದಾಖಲಾಗಿದ್ದೆ. ಇದೇ ವೇಳೆ ಎರಡು ವರ್ಷದ ಕಾನೂನು ಕೋರ್ಸ್‌‌ಗೂ ಸೇರಿದ್ದೆ. ಇದೇ ವಿಷಯದಲ್ಲಿ ನನ್ನ ತಂದೆಯೂ ಮೊದಲ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಏಕಕಾಲದಲ್ಲಿ ವ್ಯಾಸಾಂಗ ಮಾಡುತ್ತಿರುವ ಅಪ್ಪ-ಮಗ ಎಂದು ಇಬ್ಬರೂ ಸುದ್ದಿ ಮಾಡಿದ್ದೆವು. ನನ್ನ ತಂದೆ ಕಾನೂನು ಪದವಿಯನ್ನು ಮುಗಿಸಿದರು, ಆದರೆ ಪದವಿ ಮುಗಿಸಲು ಆಗದ ನಾನು ಪಿಎಚ್‌ಡಿ ಮಾಡಲು ಲಖನೌಗೆ ತೆರಳಿದೆ” ಎಂದು ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close