ವಿಶ್ವವಾಣಿ

ಲದ್ದಿಯಾದರೂ ಗೊಬ್ಬರವಾಗಿ ಉಪಯೋಗ; ಬುದ್ಧಿಜೀವಿ?

ಷ್ಯನ್ ಸಾಹಿತಿ ಟಾಲ್‌ಸ್ಟಾಯ್ ಬರೆದ ಹಲವಾರು ಸರಳ ಕತೆಗಳ ಪೈಕಿ ಮೂರ್ಖ ಇವಾನ್ ಕೂಡ ಒಂದು. ಮೈ ಬಗ್ಗಿಸಿ, ಹಿರಿಯರಿಗೆ ತಲೆತಗ್ಗಿಸಿ ದುಡಿದು ಸಂಪತ್ತು ಗಳಿಸುವ ಓರ್ವ ಮೂರ್ಖನ ಕತೆ ಇದು (ಇದೇ ಕತೆಯನ್ನು ಮಕ್ಕಿಕಾಮಕ್ಕಿ ಜ್ಞಾನಪೀಠಿಗಳೊಬ್ಬರು ಕನ್ನಡ ನಾಟಕವನ್ನೂ ಬರೆದಿದ್ದಾರೆ). ಇಲ್ಲಿ ಮೂರ್ಖ ಎಂಬುದು ಉತ್ಪ್ರೇಕ್ಷೆ ಅಷ್ಟೆ. ಯಾಕೆಂದರೆ ಮೂರ್ಖನೆಂಬ ಅಭಿಧಾನ ಸಂಪಾದಿಸಿದ ಆತ ನಿಜಕ್ಕಾದರೆ ಪ್ರಪಂಚದ ಕೋಟ್ಯಂತರ ಜನಸಾಮಾನ್ಯರ ಪ್ರತಿನಿಧಿ. ತೀರಾ ಸಂಕೀರ್ಣವಾದ ಸಾಮಾಜಿಕೊ ಆರ್ಥಿಕೋ ಧಾರ್ಮಿಕ ರಾಜಕೀಯ ಸಂದಿಗ್ಧಗಳ ಬಗ್ಗೆ ಯಾವ ಬಗೆಯಲ್ಲೂ ತೆಕೆಡಿಸಿಕೊಳ್ಳದ ಮುಗ್ಧ. ಬದುಕಬೇಕು, ಬದುಕಲು ಹೊಟ್ಟೆ ತುಂಬಬೇಕು, ಹೊಟ್ಟೆ ತುಂಬಲು ಆಹಾರ ಬೆಳೆಯಬೇಕು ಎಂಬ ಸರಳ ಜೀವನಧರ್ಮವಿರುವ ವ್ಯಕ್ತಿ ಆತ. ಸರ್ವೇ ಜನಾಃ ಸುಖಿನೋ ಭವಂತು, ಸಂತು ನಿರಾಮಯಾಃ ಎಂದು ಹೇಳುವ; ಎಲ್ಲರಿಗೂ ಒಳ್ಳೆಯದನ್ನೇ ಬಯಸುವ; ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಸರಳ ಸಜ್ಜನ ಇವಾನ್. ಆದರೆ ಪ್ರಪಂಚದಲ್ಲಿ ಇವಾನ್‌ನಂತೆ ಯಾವ ಚಿಂತೆಬೊಂತೆಗಳಿಲ್ಲದೆ ಆರಾಮಾಗಿ ಬದುಕುತ್ತಿರುವವರನ್ನು ನೋಡಿದರೆ ದೇಹವಿಡೀ ಮಿದುಳೇ ಮಾಡಿಕೊಂಡ ಬುದ್ಧಿಜೀವಿಗಳಿಗೆ ಆಗುವುದಿಲ್ಲ. ಹಾಲು ಕಂಡಲ್ಲಿ ಹುಳಿ ಹಿಂಡಬೇಕು, ಗೋಡೆ ಇದ್ದಲ್ಲಿ ಉಚ್ಚೆ ಹುಯ್ಯಬೇಕು, ಸ್ವಚ್ಛ ನೆಲ ಕಂಡಲ್ಲಿ ಅಮೇಧ್ಯ ಹಾಕಬೇಕು. ಹಾಗೆ ಮಾಡಿದರಷ್ಟೇ ತಮ್ಮ ಬುದ್ಧಿಜೀವಿಯೆಂಬ ಪದವಿಗೂ ಸಾರ್ಥಕ್ಯ ಎಂದು ಭಾವಿಸಿದ ಜನ ಇವರು. ಶಾಂತಿ ನೆಮ್ಮದಿ ಸುಖ ಸಂತೋಷಗಳಿವೆಯೋ ಅಲ್ಲೆಲ್ಲ ಅಶಾಂತಿಯ ಬಾಂಬ್ ಹಾಕಲೆಳಸುವ ದರಿದ್ರರೇ ಬುದ್ಧಿಜೀವಿಗಳು. ಜವಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಬಿಟ್ಟಿ ಸೀಟು ಗಿಟ್ಟಿಸಿ, ಸಬ್ಸಿಡಿ ದುಡ್ಡಲ್ಲಿ ಬಿರಿಯಾನಿ ಮೆಲ್ಲುತ್ತ ದೇಶದ ಕೋಟಿ ಜನ ಕಟ್ಟುವ ತೆರಿಗೆ ದುಡ್ಡಲ್ಲಿ ಮಿಂದೇಳುವ ಮಜಾವಾದಿಯೇ ಇಂದಿನ ಕ್ರಾಂತಿಕಾರಿ, ನಾಳಿನ ಬುದ್ಧಿಜೀವಿ.

ಯುರೋಪ್, ಅಮೆರಿಕಾ, ಏಷ್ಯ ಖಂಡಗಳಲ್ಲಿ 16ರಿಂದ 20ನೆಯ ಶತಮಾನದವರೆಗೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಸಂದರ್ಭಗಳಿಗೆ ಪ್ರತಿಕ್ರಿಯೆಯಾಗಿ ಬುದ್ಧಿಜೀವಿಗಳು ಹುಟ್ಟಿಕೊಂಡರು. ಒಂದು ಚರ್ಚಿನ ನಿರಂಕುಶತ್ವವನ್ನು ಪ್ರಶ್ನಿಸಿ ಬುದ್ಧಿಜೀವಿಗಳು ಪ್ರವರ್ಧಮಾನಕ್ಕೆ ಬಂದರೆ ಇನ್ನೊಂದೆಡೆ ರಾಜಪ್ರಭುತ್ವವನ್ನು, ಸರ್ವಾಧಿಕಾರತ್ವವನ್ನು ವಿರೋಧಿಸಿ ಚಿಂತಕರು, ಬುದ್ಧಿಜೀವಿಗಳು ಹುಟ್ಟಿದರು. ತನ್ನದಲ್ಲದ ಸಮಸ್ಯೆಗಳಿಗೂ ಸ್ಪಂದಿಸುವವನೇ ಬುದ್ಧಿಜೀವಿ ಎಂದ ಸಾರ್ತ್ರೆ. ಕಾಲ ಸರಿದಂತೆ, ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಯಾರೂ ಮಾತಾಡದೇ ಇದ್ದಾಗ ಕೂಡ ಜನರೆಲ್ಲರ ಪ್ರತಿನಿಧಿಯಾಗಿ ಪ್ರತಿಭಟಿಸಿ, ಅನ್ಯಾಯ ಮಾಡುತ್ತಿರುವವರ ವಿರುದ್ಧ ಸೆಟೆದು ನಿಲ್ಲುವಂಥ ಶಕ್ತಿಯೇ ಬುದ್ಧಿಜೀವಿ ವರ್ಗ ಎಂಬ ಕಲ್ಪನೆ ಗಟ್ಟಿಯಾಯಿತು. ಸಾಮಾಜಿಕ ಅನ್ಯಾಯಗಳ ವಿರುದ್ಧ, ಚರ್ಚು ಮಾಡುತ್ತಿರುವ ವಿರುದ್ಧ, ಗಂಡುಹೆಣ್ಣಿನ ನಡುವಿನ ತಾರತಮ್ಯದ ವಿರುದ್ಧ, ಚರ್ಮದ ಬಣ್ಣದ ಮೂಲಕ ವ್ಯಕ್ತಿಗಳನ್ನು ಮೇಲುಕೀಳೆಂದು ವಿಂಗಡಿಸುವ ಪರಂಗಿ ಮನಸ್ಥಿತಿಯ ವಿರುದ್ಧ ಬುದ್ಧಿಜೀವಿಗಳು ಹೋರಾಡಿದರು. ಪಾಶ್ಚಾತ್ಯ ಜಗತ್ತಿನಲ್ಲಿ ರಿಲಿಜನ್ ಮತ್ತು ರಾಜಕೀಯ ಶಕ್ತಿಗಳ ದಬ್ಬಾಳಿಕೆಗೆ ಪ್ರತಿಕ್ರಿಯೆಯಾಗಿ ರೂಪುಗೊಂಡ ಚಿಂತಕವರ್ಗವೇ ಬುದ್ಧಿಜೀವಿಗಳು ಎಂದು ಸಂಕ್ಷಿಪ್ತವಾಗಿ ಹೇಳಬಹುದು. ಯಾಕೆ ಪರದೇಶಗಳಲ್ಲೇ ಹೀಗೆ ಬುದ್ಧಿಜೀವಿಗಳು ಬೆಳೆದು ಬಂದರು ಎಂದರೆ ಉತ್ತರ ಅದಕ್ಕೆ ಅಗತ್ಯವಾದ ವಾತಾವರಣ ದೇಶಗಳಲ್ಲಿತ್ತು. ಆದರೆ ಭಾರತದಲ್ಲಿ ಹಿಂದೂ ಧರ್ಮವಾಗಲೀ ಪ್ರಭುತ್ವವಾಗಲೀ ಜನಸಾಮಾನ್ಯರ ಭಾವನೆಗಳಿಗೆ ವಿರುದ್ಧವಾಗಿ ನಡೆಯುವ ಮನೋಭಾವವನ್ನೇ ಪ್ರದರ್ಶಿಸಿರಲಿಲ್ಲ (ಮಡಿವಾಳನ ಮಾತಿಗೆ ಬೆಲೆಕೊಟ್ಟು ಪತ್ನಿಯನ್ನೂ ಬಿಡಬಲ್ಲ ರಾಮನಿದ್ದ ದೇಶ ಇದು ನೋಡಿ!). ಹಾಗಾಗಿ ನಮಗೆ ಬುದ್ಧಿಜೀವಿಗಳ ಅಗತ್ಯ ಬೀಳಲಿಲ್ಲ. ನಮ್ಮಲ್ಲಿ ಸಮಾಜವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸವನ್ನು ಋಷಿಗಳು, ಸಂತರು, ದಾಸರು, ಸಂನ್ಯಾಸಿಗಳು, ಮಠಾಧೀಶರು, ದೇವಸ್ಥಾನಗಳ ಅರ್ಚಕರು, ಊರಲ್ಲಿದ್ದ ವೈದಿಕರು, ವೇದವಿದ್ವಾಂಸರು, ಹರಿಕತೆ ದಾಸರು, ಯಕ್ಷಗಾನದ ಭಾಗವತರು, ಊರ ಪಟೇಲರು, ಹಿರಿಯರು ಮಾಡುತ್ತಿದ್ದರು. ನಮ್ಮಲ್ಲಿ ಮಠ ಅಥವಾ ದೇವಸ್ಥಾನಗಳೆಂದರೆ ವಾರ ಭಕ್ತರ ಹಾಜರಿ ಹಾಕುವ ಜೈಲುಕಟ್ಟೆಗಳಾಗಿರಲಿಲ್ಲ. ವಾರದ ಸಾಮೂಹಿಕ ಪ್ರಾರ್ಥನೆಗೆ ಗೈರಾದವನಿಗೆ ದಂಡ ಹಾಕುವ ಪ್ರವೃತ್ತಿ ಬಿಡಿ, ಯೋಚನೆಯೇ ನಮ್ಮಲ್ಲಿರಲಿಲ್ಲ. ಹಾಗೆಯೇ, ದೇವಸ್ಥಾನಗಳು ಯಾವ ರೀತಿಯಲ್ಲೂ ರಾಜನ ಕೆಲಸಕಾರ್ಯಗಳಲ್ಲಿ ಮೂಗು ತೂರಿಸುವ ಕೆಲಸಕ್ಕೆ ಇಳಿಯುತ್ತಿರಲಿಲ್ಲ. ಮತಾಂತರ ಇರಲೇ ಇಲ್ಲವಾದ್ದರಿಂದ ಸಂತರಿಗೆ, ದಾಸರಿಗೆ ರಾಜಕೀಯಶಕ್ತಿಯ ಬೆಂಬಲ ಬೇಕಾಗೇ ಇರಲಿಲ್ಲ. ಮುಘಲರಿಗಿಂತ ಹಿಂದೆ ಇದ್ದ ರಾಜರುಗಳಲ್ಲಿ ಹೆಚ್ಚಿನವರು ಪ್ರಜಾನುರಾಗಿಗಳೇ ಆಗಿದ್ದುದರಿಂದ ಜನರನ್ನು ಎತ್ತಿಕಟ್ಟುವುದಾದರೂ ಯಾರ ವಿರುದ್ಧ? ಜನ ದಂಗೆಯೇಳುವುದಾದರೂ ಯಾರ ಮೇಲೆ? ದಂಗೆ ಪರಿಸ್ಥಿತಿಯೇ ಇಲ್ಲದೆ ಇರುವಾಗ ಬುದ್ಧಿಜೀವಿಗಳ ಭಾಷಣಗಳನ್ನು ಕೇಳುವವರಾದರೂ ಯಾರು?

ಬುದ್ಧಿಜೀವಿ ಎಂದು ಕರೆಯುವುದೇ ಆದರೆ ನಮ್ಮ ದೇಶದಲ್ಲಿ ಆಗಿಹೋದ ಶಂಕರ, ಮಧ್ವ, ರಾಮಾನುಜರಂಥ ಆಚಾರ್ಯರನ್ನು; ಕಬೀರ, ಪುರಂದರ, ಕನಕ, ಮೀರಾಬಾಯಿಯಂಥ ಆಶುವಿಗಳನ್ನು; ಬಸವಣ್ಣ, ಅಲ್ಲಮ, ಅಕ್ಕರಂಥ ವಚನಕಾರರನ್ನು; ವಿದ್ಯಾರಣ್ಯ, ಸಮರ್ಥ ರಾಮದಾಸರಂಥ ಯತಿಗಳನ್ನು ಕರೆಯಬೇಕಾಗುತ್ತದೆ. ಇವರು ಏಕಕಾಲದಲ್ಲಿ ಜನ ಮತ್ತು ಪ್ರಭುತ್ವದಲ್ಲಿ ವಿವೇಕ, ಸಂಮ್ಯಕ್ ದೃಷ್ಟಿ, ಜ್ಞಾನ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಇವರೆಲ್ಲರ ಜೀವನಗಳೂ ಸಮಾಜಮುಖಿಯಾಗಿದ್ದವು. ತಮಗಾಗಿ, ಕುಟುಂಬಕ್ಕಾಗಿ ದುಗ್ಗಾಣಿಯನ್ನೂ ಇವರ್ಯಾರೂ ಗಳಿಸಿ ಕೂಡಿಡಲಿಲ್ಲ ಎಂಬುದನ್ನು ಗಮನಿಸಬೇಕು. ವ್ಯಕ್ತಿಗಳಲ್ಲಿ ಯಾರೂ ತಮ್ಮ ಹೆಸರು, ಕೀರ್ತಿಗಳನ್ನು ಹರಡಲು ಆಸಕ್ತಿ ತೋರಲಿಲ್ಲ. ರಾಜನ ಅಕ್ಕಪಕ್ಕದಲ್ಲಿ ಕೂರುವುದಕ್ಕಾಗಿ ಹಪಹಪಿಸಲಿಲ್ಲ. ಜನ ಕಟ್ಟಿದ ತೆರಿಗೆ ದುಡ್ಡಲ್ಲಿ ಬಂಗಲೆಗಳನ್ನು ಕಟ್ಟಿಕೊಂಡು ಮೆರೆಯಲಿಲ್ಲ. ತಮ್ಮ ಜೀವನ ಇರುವುದೇ ಸಮಾಜಕ್ಕಾಗಿ ಎಂದು ದೀಕ್ಷೆ ತೊಟ್ಟ ಕ್ಷಣದಿಂದ ಅವರೆಲ್ಲರೂ ಅಕ್ಷರಶಃ ಭಿಕ್ಷುಗಳಂತೆ ಜೀವನ ಮಾಡಿದರು. ಬಹುಶಃ ಇದೇ ಕಾರಣಕ್ಕೆ ಈಗಿನ ಎಡಪಂಥೀಯ ಚಿಂತಕರು ಮೇಲೆ ಉದಾಹರಿಸಿದ ಯಾರನ್ನೂ ಎಂದು ಒಪ್ಪಿಕೊಳ್ಳುವುದಿಲ್ಲ. ಯಾಕೆಂದರೆ ಅವರ ಪ್ರಕಾರ ಬುದ್ಧಿಜೀವಿ, ವ್ಯವಸ್ಥೆಯ ವಿರುದ್ಧ ದಂಗೆ ಏಳಬೇಕು. ಬೀದಿಹೋರಾಟ ಮಾಡಬೇಕು. ಜನರನ್ನು ರಾಜನ ಅಥವಾ ಯಾವುದೇ ರಾಜಕೀಯ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟಬೇಕು. ವರ್ಗಸಂಘರ್ಷ ಹುಟ್ಟುಹಾಕಬೇಕು. ಯಾವುದೋ ಹಳೆ ಕಾಲದಲ್ಲಿ ಮನೆಯಲ್ಲಿ ಶ್ರಾದ್ಧದ ಸಮುದಲ್ಲಿ ತುಂಟ ಬೆಕ್ಕೊಂದು ಬಂದು ಪಿಂಡದ ಅನ್ನಕ್ಕೆ ಬಾಯಿ ಹಾಕುತ್ತಿತ್ತಂತೆ. ಹಾಗಾಗಿ ಬೆಕ್ಕನ್ನು ಮೊದಲು ಕಟ್ಟಿಹಾಕಿ ಪುರೋಹಿತರು ಶ್ರಾದ್ಧಕರ್ಮ ಮಾಡುತ್ತಿದ್ದರಂತೆ. ಕಾಲ ಸರಿಯಿತು. ಪುರೋಹಿತರ ಮಗನ ಕಾಲ ಬಂತು. ಬೆಕ್ಕಿರಲಿಲ್ಲ. ಆದರೆ ಅಪ್ಪನ ವಿಧಿವಿಧಾನ ನೋಡಿದ್ದ ಈತ ಮನೆಯಲ್ಲಿ ಬೆಕ್ಕು ಕಟ್ಟದೆ ಇದ್ದರೆ ಶ್ರಾದ್ಧ ಸಾಧ್ಯವಿಲ್ಲ ಎಂದು ಹಠ ಹಿಡಿದನಂತೆ. ಹಾಗೆ ನಮ್ಮ ಬುದ್ಧಿಜೀವಿಗಳ ಸ್ಥಿತಿ. ಯುರೋಪಿನಲ್ಲಿ ಪ್ರಭುತ್ವ ಮತ್ತು ರಿಲಿಜನ್ ಎರಡೂ ಜನರನ್ನು ಕಿತ್ತು ತಿನ್ನುತ್ತಿದ್ದುದರಿಂದ ಜನ ಅವೆರಡರ ವಿರುದ್ಧ ದಂಗೆಯೇಳುವುದರಲ್ಲಿ ಅರ್ಥವಿತ್ತೆನ್ನೋಣ. ಆದರೆ ಅಂಥ ಸಮಸ್ಯೆಗಳೇ ದೇಶದಲ್ಲಿ ಇಲ್ಲವೆಂದರೆ ಹೋರಾಡುವುದು ಹೇಗೆ? ಬೆಕ್ಕು ಕಟ್ಟಿ ಶ್ರಾದ್ಧ ಮಾಡಿದ ವೈದಿಕನಂತೆ ಇವರು ಮೊದಲು ಸಮಸ್ಯೆ ಸೃಷ್ಟಿಸಿ ನಂತರ ಯೋಚನೆ ಮಾಡಿದರು!

ಪರದೇಶದ ಬುದ್ಧಿಜೀವಿಗಳ ಇತಿಹಾಸದ ಬಗ್ಗೆ ಹೆಚ್ಚು ವಿಶ್ಲೇಷಣೆಗಿಳಿಯದೆ, ಕೇವಲ ನಮ್ಮ ದೇಶದ ಬುದ್ಧಿಜೀವಿಗಳ ಕಡೆಗಷ್ಟೇ ಒಂದು ನೋಟ ಬೀರೋಣ. ಇಲ್ಲಿ ಬುದ್ಧಿಜೀವಿಗಳ ತಳಿ ಹುಟ್ಟಿದ್ದು ನೆಹರೂ ಕಾಲದಲ್ಲಿ. ಯುಎಸ್‌ಎಸ್‌ಆರ್ ಮಾದರಿಯನ್ನು ಎಲ್ಲ ರೀತಿಯಲ್ಲೂ ಅನುಕರಿಸಲು ಹೊರಟಿದ್ದ ನೆಹರೂ ಬುದ್ಧಿಜೀವಿಗಳ ದೊಡ್ಡ ಗುಂಪನ್ನೇ ಸೃಷ್ಟಿಸಿದರು. ಕುಮಾರ್ ಕೇಟ್ಕರ್ ಎಂಬ ಎಡಪಂಥೀಯ ಬುದ್ಧಿಜೀವಿ, ನೆಹರೂ ಕಾಲದಲ್ಲಿ ಹಾಗೆ ಬೆಳೆದುಬಂದ ಇಂಟೆಲೆಕ್ಚ್ಯುಯಲ್‌ಗಳ ಒಂದು ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಹೋಮಿ ಭಾಭಾ, ಪ್ರೀತಂ, ಸತ್ಯಜಿತ್ ರೇ, ನಿಖಿಲ್ ಚಕ್ರವರ್ತಿ, ಜಮಿನಿ ರಾಯ್, ನಂದಲಾಲ್ ಬೋಸ್, ವಿ.ಪಿ. ಮೆನನ್, ಗಿರಿಜಾಶಂಕರ ವಾಜಪೇಯಿ, ದಿಲೀಪ್ ಕುಮಾರ್, ರಾಜ್‌ಕಪೂರ್ ಮೊದಲಾದವರೆಲ್ಲ ನೆಹರೂ ಯುಗದ ಬುದ್ಧಿಜೀವಿಗಳು ಎಂಬುದು ಕೇಟ್ಕರ್ ಅಭಿಪ್ರಾಯ. ಪಟ್ಟಿಯಲ್ಲಿರುವ ಕೆಲವರು ನೆಹರೂ ಎಂಬ ಪ್ರದರ್ಶನದ ಗೊೆಂಯ ಪರಾಕುಪಂಪುಗಳಾಗಿ ಕೆಲಸ ಮಾಡಿ ಬುದ್ಧಿಜೀವಿಗಳೆಂಬ ಪಟ್ಟ ಗಳಿಸಿದವರಾದರೆ ಇನ್ನುಳಿದವರು ತಮ್ಮ ಸ್ವಯಂಪ್ರತಿಭೆಯಿಂದ ಹೆಸರು ಮಾಡಿದವರು. ಭಾಭಾರಂಥ ಪ್ರತಿಭಾನ್ವಿತ ವಿಜ್ಞಾನಿಯನ್ನು ನೆಹರೂ ಬೆಳೆಸಿದ ಬುದ್ಧಿಜೀವಿ ಎನ್ನುವುದು ಭಾಭಾರ ಮಾಡುವ ಅವಮಾನ. ಸ್ವಾತಂತ್ರ್ಯ ಸಿಕ್ಕಾಗ ಇದ್ದ ಮೊದಲ ಪೀಳಿಗೆಯ ಪ್ರತಿಭಾವಂತ ವ್ಯಕ್ತಿಗಳೆಲ್ಲರೂ 60 ದಶಕದ ಹೊತ್ತಿಗೆ ತೆರೆಮರೆಗೆ ಸರಿದರು. ಆಗ, ಕಾಂಗ್ರೆಸ್ ಪಕ್ಷದ ಉತ್ಸವಮೂರ್ತಿಗಳಿಗೆ ಚಾಮರ ಬೀಸುವ ಊಳಿಗದ ಅವಶ್ಯಕತೆ ಬಿತ್ತು. ಅದಕ್ಕೆಂದೇ ಜೆಎನ್ಯು ಎಂಬ ಪ್ರಯೋಗಶಾಲೆಯನ್ನು ತೆರೆಯಲಾಯಿತು. ಜೆಎನ್ಯು ಸೇರುವವರೆಲ್ಲರನ್ನೂ ಅಲ್ಲಿನ ಕ್ಲಾಸ್‌ರೂಮುಗಳೊಳಗೆ ಒಂದೇ ಬಗೆಯಲ್ಲಿ ಕುಟ್ಟಿ ತಟ್ಟಿ ಕಡೆದು ರೂಪುಗೊಳಿಸುವ ಕೆಲಸ ಮಾಡಲಾಯಿತು. ಒಂದೇ ಬಗೆಯ ಆಪರೇಟಿಂಗ್ ಸಿಸ್ಟಮ್ ಅನ್ನು ತುಂಬಿಕೊಂಡು ಅಲ್ಲಿಂದ ಹೊರಬಂದವರನ್ನು ಸರಕಾರವೇ ಲಾಭದಾಯಕ ಸ್ಥಾನಗಳಲ್ಲಿ ಕೂರಿಸಿತು. ಮಾಧ್ಯಮರಂಗ ಚಿಗುರೊಡೆಯುತ್ತಿದ್ದ ಕಾಲವಾದ್ದರಿಂದ ಜೆಎನ್ಯು ಪ್ರಾಡಕ್ಟುಗಳು ಮಾಧ್ಯಮ ಕ್ಷೇತ್ರವನ್ನು ಆರಿಸಿಕೊಂಡರು. ಮನೆ ಸೇರಿದ ಒಂದೇ ಒಂದು ತಿಗಣೆ, ಒಂದು ಹತ್ತಾಗಿ ಹತ್ತು ನೂರಾಗಿ ಕೊನೆಗೆ ಮನೆಯೊಳಗಿನ ಎಲ್ಲವನ್ನೂ ಅಗ್ನಿಗೆ ಆಹುತಿಯಾಗುವಂತೆ ಮಾಡುವುದಿಲ್ಲವೆ? ಹಾಗೆ ಜೆಎನ್ಯು, ಆಲಿಘಡ, ಜಾದವ್‌ಪುರದಂಥ ವಿಶ್ವವಿದ್ಯಾಲಯಗಳಿಂದ ಹೊರಬಂದು ದೇಶ ತುಂಬಿಕೊಂಡ ಪ್ರಭೃತಿಗಳು ಬುದ್ಧಿಜೀವಿಗಳಾಗಿ ದೇಶದ ಬೌದ್ಧಿಕ ಕ್ಷೇತ್ರವನ್ನೆಲ್ಲ ವ್ಯಾಪಿಸಿಕೊಂಡರು.

ಬುದ್ಧಿಜೀವಿ ಎಂಬ ಪರಿಕಲ್ಪನೆ ಭಾರತಕ್ಕೆ ಬಂದದ್ದು ಹೊರಗಿನಿಂದ. ಭಾರತೀಯ ಬುದ್ಧಿಜೀವಿಗಳು ಮಿದುಳುಗಳನ್ನು ತುಂಬಿಸಿಕೊಂಡದ್ದು ಕೂಡ ಪಾಶ್ಚಾತ್ಯ ಚಿಂತನೆಗಳಿಂದಲೇ. ಇವರು ಭಾರತದ ಬಗ್ಗೆ ಓದಿದ ಪುಸ್ತಕಗಳನ್ನು ಬರೆದವರು ಭಾರತಕ್ಕೆ ಒಂದೇ ಒಂದು ಭೇಟಿಯನ್ನೂ ಕೊಡದಿದ್ದ, ಆದರೆ ಭಾರತದ ಬಗ್ಗೆ ಕೇಜಿಗಟ್ಟಲೆ ಬರೆದುಹಾಕಿದ ಕಾರ್ಲ್ ಮಾರ್ಕ್‌ಸ್ನಂಥವರು. ಚರ್ಚಿಗೆ ಸಮಾಂತರವಾಗಿ ಇವರಿಗೆ ಇಲ್ಲಿ ಭಾರತೀಯ ದೇವಸ್ಥಾನಗಳು, ಮಠಗಳು ಸಿಕ್ಕವು. ಪಶ್ಚಿಮದ ರಾಜಪ್ರಭುತ್ವಕ್ಕೆ ಸಮಾಂತರವಾಗಿ ಇವರಿಗೆ ಇಲ್ಲಿ ಸಿಕ್ಕಿದ್ದು ಇಲ್ಲಿನ ವಿಕೇಂದ್ರೀಕೃತ ಅಧಿಕಾರ ವ್ಯವಸ್ಥೆ. ಬುದ್ಧಿಜೀವಿಗಳ ಬೌದ್ಧಿಕತೆಯ ಹೊರಪದರ, ಒಳಹೂರಣ ಎಲ್ಲವೂ ದ್ವೇಷ ಮಾತ್ರವೇ. ತಮ್ಮ ಇರುವುದನ್ನು ದ್ವೇಷಿಸಬೇಕು ಎಂಬುದೇ ಅವರ ಏಮಾತ್ರ ಅಜೆಂಡಾ. ಹಾಗಾಗಿ ಭಾರತವನ್ನು ದ್ವೇಷಿಸಿದರು. ಸಂಸ್ಕೃತವನ್ನು ಬದಿಗಿಟ್ಟರು. ಹಿಂದೂ ಆಚರಣೆ, ಪರಂಪರೆ, ಸಂಪ್ರದಾಯಗಳನ್ನು ತಿರಸ್ಕರಿಸಿದರು. ಯುರೋಪಿನಲ್ಲಿದ್ದ ವರ್ಗಸಂಘರ್ಷದ ಕಾನ್ಸೆಪ್ಟನ್ನು ತರುವುದಕ್ಕಾಗಿ ಇಲ್ಲಿ ಬ್ರಾಹ್ಮಣದಲಿತ ಸಂಘರ್ಷದ ಸಿದ್ಧಾಂತ ಕಟ್ಟಿದರು. ಸಮಾಜವನ್ನು ಎಂದೆಂದೂ ತನ್ನ ಮುಷ್ಟಿಯೊಳಗಿಟ್ಟುಕೊಳ್ಳದ ದೇವಸ್ಥಾನಗಳ ವಿರುದ್ಧವೂ ಇವರು ತಿರುಗಿಬಿದ್ದರು. ಸಮಾಜವನ್ನು ಒಡೆಯಲು ಏನೇನು ಹತ್ಯಾರಗಳು ಬೇಕೋ ಅವೆಲ್ಲವನ್ನೂ ಕೈಗೆ ತೆಗೆದುಕೊಂಡರು. ಹಾಗಾಗಿಯೇ ಬ್ರಿಟಿಷರು ಕಟ್ಟಿದ ಆರ್ಯ ದ್ರಾವಿಡ ಸಿದ್ಧಾಂತ ಇವರಿಗೆ

ಇವರು ಮಾನವೀಯತೆಯ ಪಾಠ ಮಾಡುತ್ತಾರೆ. ಆದರೆ ಸ್ಟಾಲಿನ್ ಕೊಂದುಹಾಕಿದ 5 ಕೋಟಿ ಅಮಾಯಕರ ವಿಷಯದಲ್ಲಿ ಇವರದ್ದು ದಿವ್ಯಮೌನ. ಇವರು ಪರಿಸರ ಪ್ರೇಮದ ಹೋರಾಟಗಳನ್ನು ಸಂಘಟಿಸುತ್ತಾರೆ. ಆದರೆ ಚೀನಾ ಸೃಷ್ಟಿಸಿರುವ ಹಳವಂಡಗಳ ಬಗ್ಗೆ, ಮಾಡಿದ ಪರಿಸರನಾಶದ ಬಗ್ಗೆ ಇವರು ಜಾಣ ಕುರುಡರು. ಧರ್ಮದೇವರುಗಳನ್ನು ಇವರು ಪ್ರಶ್ನಿಸುತ್ತಾರೆ. ಆದರೆ ಅದು ಹಿಂದೂ ಆಗಿದ್ದರೆ ಮಾತ್ರ! ಬುದ್ಧಿಜೀವಿಗಳ ಬುಡಕ್ಕೆ ಬಾಂಬಿಟ್ಟು ಉಡಾಯಿಸುವ ರಿಲಿಜನ್ನುಗಳ ತಂಟೆಗೆ ಇವರು ಅಪ್ಪಿತಪ್ಪಿಯೂ ಹೋಗರು! ಇವರ ದೃಷ್ಟಿಯಲ್ಲಿ ಎಡ ಎಡ ಟಿವಿಗಳಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿಗಳು ಮಾತ್ರ ಚಿಂತಕರು. ವೀರ ಸಾವರ್ಕರ್, ರಾಮ್‌ಸ್ವರೂಪ್, ಸೀತಾರಾಂ ಗೋಯಲ್‌ರಂಥ ಅಥವಾ ಕನ್ನಡದ ಬಾಬು ಕೃಷ್ಣಮೂರ್ತಿ, ಚಿದಾನಂಮೂರ್ತಿಗಳಂಥ ಚಿಂತಕರು ಬರೆದಿರುವ ಸಾಹಿತ್ಯದ ಒಂದೇ ಒಂದು ಶೇಕಡಾ ಕೂಡ ಸತ್ಯಗಳನ್ನು ಬರೆಯದ ರಾಮಚಂದ್ರ ಗುಹಾ, ಸಾಗರಿಕಾ ಘೋಷ್, ವೆಂಡಿ ಡಾನಿಗರ್, ಕರಣ್ ಥಾಪರ್, ಟಿ.ಎಂ. ಕೃಷ್ಣ ಮೊದಲಾದವರೆಲ್ಲ ಇವರ ಪಾಲಿಗೆ ಮಹಾನ್ ಚಿಂತಕರು, ಬೌದ್ಧಿಕ ದೈತ್ಯರು. ಬಲಪಂಥೀಯರಲ್ಲಿ ಬುದ್ಧಿಜೀವಿಗಳು ಎಲ್ಲಿದ್ದಾರೆ ಎಂದು ತಲೆ ಇಲ್ಲದ ಕೇಳಿದಾಗೆಲ್ಲ ಎಲ್ಲೆಲ್ಲಿಂದಲೋ ನಗುವಂತಾಗುತ್ತದೆ.

ಭಾರತೀಯ ಬುದ್ಧಿಜೀವಿಗಳು ಎಂದರೆ ಸಮಾಜ ಒಡೆಯುವ ವಿಧ್ವಂಸಕ ಶಕ್ತಿಗಳು. ಕಾಂಗ್ರೆಸ್‌ನ ಚಪ್ಪಲಿ ನೆಕ್ಕುವ ಶ್ವಾನತಳಿಗಳು. ನೆಹರೂ ಎಂಬ ಒಂದೇ ಒಂದು ಪುತ್ಥಳಿಗೆ ನಾಲ್ಕು ದಶಕದಿಂದ ಹೊಗಳಿಕೆಯ ಅಭಿಷೇಕ ಮಾಡುತ್ತಿರುವ ರಾಮಚಂದ್ರ ಗುಹಾ ಬುದ್ಧಿಜೀವಿಗಳಲ್ಲಿರುವ ಕಾಂಗ್ರಸ್ಸಾರಾಧಕ ಗುಲಾಮೀ ಮನಸ್ಥಿತಿಗೆ ಸಂಕೇತವಾದರೆ, ಎಂ.ಎಸ್. ಸುಬ್ಬುಲಕ್ಷ್ಮಿಯವರನ್ನು ಅಕಾರಣ ನಿಂದಿಸಿ ಮೈಲೇಜ್ ಗಿಟ್ಟಿಸಿಕೊಳ್ಳುತ್ತಿರುವ ಟಿ.ಎಂ. ಕೃಷ್ಣ ಬುದ್ಧಿಜೀವಿಗಳಲ್ಲಿರುವ ಬ್ರಾಹ್ಮಣದ್ವೇಷಕ್ಕೆ ಸಂಕೇತವಾಗುತ್ತಾನೆ. ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದಂದು ಭಾರತದ ಹಾರಾಡಿಸಿದ್ದನ್ನು ಸಮರ್ಥಿಸಿಕೊಂಡಿದ್ದ ಶಿವರಾಮ ಕಾರಂತರ ಸಾವು ಬಯಸಿದ್ದೆ ಎಂದು ಹೇಳುವ ದಿನೇಶ್ ಅಮೀನ್ ಮಟ್ಟು ಎಂಬ ತಿಕ್ಕಲ ಬುದ್ಧಿಜೀವಿ ವಲಯದ ಬುದ್ಧಿದಾರಿದ್ರ್ಯಕ್ಕೂ ಆರೆಸ್ಸೆಸ್ ದ್ವೇಷಕ್ಕೂ ಪ್ರತೀಕವಾಗಿ ನಿಂತರೆ, ಭಗವದ್ಗೀತೆಯನ್ನು ಸುಡಬೇಕು ಎಂಬ ಹುಚ್ಚ ಭಗವಾನ್ ಬುದ್ಧಿಜೀವಿಗಳಲ್ಲಿರುವ ಹಿಂದೂ ದ್ವೇಷವೆಂಬ ಮಾನಸಿಕ ಅಸ್ವಾಸ್ಥ್ಯಕ್ಕೆ ಒಂದು ಉಜ್ಜ್ವಲ ಗುರುತಾಗುತ್ತಾನೆ. ಭಾರತ ಮತ್ತು ಶತ್ರುದೇಶಗಳು ಯುದ್ಧನಿರತವಾಗಿದ್ದಾಗ ಅತ್ಯಂತ ಸೂಕ್ಷ್ಮ ವಿಷಯಗಳನ್ನು ವರದಿಯ ರೂಪದಲ್ಲಿ ಬಿತ್ತರಿಸಿ ಶತ್ರುಗಳಿಗೆ ಸಹಾಯ ಮಾಡುವ ಬರ್ಕಾ ದತ್ ಪತ್ರಕರ್ತೆ ಬುದ್ಧಿಜೀವಿಗಳ ರಾಷ್ಟ್ರದ್ವೇಷಕ್ಕೆ ಒಂದು ಉದಾಹರಣೆಯಾದರೆ, ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂಬ ಹೇಳಿಕೆ ಕೊಟ್ಟಿದ್ದ ಯು.ಆರ್. ಅನಂತಮೂರ್ತಿಯವರು ಬುದ್ಧಿಜೀವಿಗಳಲ್ಲಿರುವ ಮೋದಿದ್ವೇಷವೆಂಬ ತಿಕ್ಕಲುತನದ ಸಾಕಾರಮೂರ್ತಿಯಾಗುತ್ತಾರೆ. ಆರ್ಯರು ಭಾರತಕ್ಕೆ ಬಂದರು, ಇಲ್ಲಿನವರನ್ನು ಓಡಿಸಿದರು ಎಂಬ ಕಪೋಲಕಲ್ಪಿತ ಕತೆಯನ್ನೇ ಐವತ್ತು ವರ್ಷಗಳಿಂದ ಇತಿಹಾಸದ ಹೆಸರಲ್ಲಿ ಪ್ರಚಾರ ಮಾಡಿ, ಪಠ್ಯಪುಸ್ತಕಗಳಲ್ಲಿ ತುಂಬಿಸಿ ದೇಶದ ಜನರಿಗೆ ಮಂಕುಬೂದಿ ಎರಚಿದ ರೋಮಿಲಾ ಥಾಪರ್ ಬುದ್ಧಿಜೀವಿಗಳ ಅತಿಬುದ್ಧಿವಂತಿಕೆಗೆ ಸಂಕೇತವಾದರೆ, ಅಧ್ಯಯನ ಬಿಟ್ಟು ಮಿಕ್ಕೆಲ್ಲ ಕೆಲಸಗಳನ್ನೂ ಮಾಡುತ್ತ ತೆರಿಗೆ ವಿಲಾಸಿ ಜೀವನ ನಡೆಸುವ ಕನ್ಹಯ್ಯ ಕುಮಾರ ಬುದ್ಧಿಜೀವಿ ವಲಯದ ಅರ್ಬನ್ ನಕ್ಸಲಿಸಮ್‌ನ ಮೂರ್ತರೂಪವಾಗಿ ಕಾಣುತ್ತಾನೆ. ಒಟ್ಟಾರೆ ಹೇಳುವುದಾದರೆ ದೇಶಭಂಜನವೇ ಇವರ ಏಕೈಕ ಉದ್ದೇಶ. ದೇಶದಲ್ಲಿ ಯೇನಕೇನ ಪ್ರಕಾರೇಣ ಘಂಡಿ ವಂಶವನ್ನು ಮರುಸ್ಥಾಪಿಸುವುದೇ ಅವರ ಬದುಕಿನ ಸಂಕಲ್ಪ. ಇಂದು ಭಾರತದ ಬುದ್ಧಿಜೀವಿಗಳೆಂದರೆ ಮೋದಿ, ಹಿಂದುತ್ವ, ಭಾರತೀಯತೆ, ರಾಷ್ಟ್ರೀಯತೆ, ಸಮಗ್ರತೆ, ದೇಶದ ಸುರಕ್ಷತೆ ಮುಂತಾದ ಎಲ್ಲವನ್ನೂ ದ್ವೇಷಿಸುವ ಒಂದು ವಿಕ್ಷಿಪ್ತ ತಳಿಯಾಗಿ ಮಾರ್ಪಟ್ಟಿದೆ. ದೇಶದ ಎಲ್ಲಾ ಸಮಸ್ಯೆಗಳ ಬಗ್ಗೆಯೂ ತುಗೆ ಮಾತಾಡಲು ಇದೆ ಎಂದು ಇವರು ಭಾವಿಸಿದ್ದಾರೆ. ಹಾಗೆ ಮಾತಾಡಲು ಹೋಗಿ ಇವರು ದಿನದಿನಕ್ಕೂ ಬೆತ್ತಲಾಗುತ್ತಿದ್ದಾರೆ ಎಂಬುದೂ ಸಂತೋಷದ ವಿಚಾರವೇ!

ಇವರನ್ನು ಬುದ್ಧಿಜೀವಿ ಎಂದು ಕರೆಯುವುದು ಶಬ್ದವನ್ನೇ ಕುಲಗೆಡಿಸಿದಂತೆ. ತಲೆಹಿಡುಕರನ್ನು ಲದ್ದಿಜೀವಿಗಳು ಎಂದು ಕರೆಯುವ ಸಂಪ್ರದಾಯವಿತ್ತು. ಆದರೆ ಲದ್ದಿ ಅಥವಾ ಸೆಗಣಿಯನ್ನು ಹೊಲದಲ್ಲಿ ಗೊಬ್ಬರವಾಗಿಯಾದರೂ ಬಳಸಬಹುದು. ಬೆರಣಿ ತಟ್ಟಿದರೆ ಉರುವಲಾಗಿ ಅದು ಉಪಯೋಗಕ್ಕೆ ಬರುತ್ತದೆ. ಸುಟ್ಟರೆ ನೊಸಲಿಗೆ ವಿಭೂತಿಯಾಗುತ್ತದೆ. ಆದರೆ ಬುದ್ಧಿಜೀವಿಗಳಿಂದ ಏನು ಲಾಭ? ಅವರು ನಡೆದಾಡಿದಲ್ಲಿ ನೀರು ಮೊಳಕೆಯೊಡೆದಿದ್ದ ಬೀಜಗಳು ಕೂಡ ಬುದ್ಧಿಜೀವಿಗಳ ಕಾಲ್ಗುಣದಿಂದ ಸೀದುಹೋದಾವು. ಬುದ್ಧಿಜೀವಿಗಳು ಕಾಲಿಟ್ಟಲೆಲ್ಲ ಶಾಂತಿ ನಾಶವಾಗುತ್ತದೆ. ಸಂಸ್ಕೃತಿ ವಿಕೃತಿಯಾಗುತ್ತದೆ. ಸಾಮರಸ್ಯ ಕದಡುತ್ತದೆ. ದಂಗೆ, ಸಂಘರ್ಷಗಳು ಏಳುತ್ತವೆ. ಹಾಗಾಗಿ ವಿವೇಕ್ ಅಗ್ನಿಹೋತ್ರಿ ಎಂಬ ಚಿತ್ರನಿರ್ದೇಶಕ ಅವರನ್ನು ಅರ್ಬನ್ ನಕ್ಸಲ್‌ಸ್ (ನಗರ ನಕ್ಸಲರು) ಎಂದು ಕರೆದಿದ್ದಾರೆ. ಜಾಲತಾಣದಲ್ಲಿ ಬುದ್ಧಿಜೀವಿಗಳಿಗೆ ಎಗ್‌ಹೆಡ್‌ಸ್ (ಮೊಟ್ಟೆತಲೆಗಳು) ಎಂಬ ಹೊಸ ನಾಮಕರಣವಾಗಿದೆ. ಇವೆರಡೂ ಪದಗಳು ಬುದ್ಧಿಜೀವಿಗಳೆಂಬ ಬುದ್ದುಜೀವಿಗಳ ಸ್ವರೂಪವನ್ನು ಬಹಳ ಸಮರ್ಥವಾಗಿ ಬಿಂಬಿಸುತ್ತಿವೆ ಎನ್ನಬಹುದು.

ಹತ್ತು ಅರ್ಥಗಳನ್ನು ಧ್ವನಿಸುವ ಒಂದು ಕತೆಯೊಂದಿಗೆ ಬರಹ ಮುಗಿಸುತ್ತೇನೆ. ಒಬ್ಬ ಪಂಡಿತ ಎಣ್ಣೆ ತರಲು ಗಾಣಿಗನ ಬಳಿ ಹೋದನಂತೆ. ಕೋಣ ಕಟ್ಟಿ ಗಾಣ ಆಡಿಸುತ್ತಿದ್ದ ಗಾಣಿಗ ಕೋಣದ ಕೊರಳಿಗೆ ಒಂದು ಘಂಟೆ ಕಟ್ಟಿದ್ದುದನ್ನು ಕಂಡ ಪಂಡಿತ, ಕೊರಳಿಗೆ ಘಂಟೆಯೇಕೆ ಎಂದು ವಿಚಾರಿಸಿದನಂತೆ. ಆಗ ಗಾಣಿಗ, ಸ್ವಾಮೀ, ಗಾಣ ಕಟ್ಟಿ ಕೆಲವೊಮ್ಮೆ ಬೇರಾವುದೋ ಕೆಲಸದ ನಿಮಿತ್ತ ಮನೆಯೊಳಗೆ ಹೋಗಿರುತ್ತೇನೆ. ಘಂಟೆಯ ಸದ್ದಾಗುತ್ತಿದ್ದರೆ ಕೋಣ ಗಾಣ ಆಡಿಸುತ್ತಿದೆ ಎಂದು ಗೊತ್ತಾಗತ್ತದೆ. ನಿಂತರೆ ಹೊರಗೆ ಬಂದು ಒಂದು ಹಾಕುತ್ತೇನೆ ಎಂದ. ಉಪಾಯ ಪಂಡಿತನಿಗೆ ಹಿಡಿಸಲಿಲ್ಲ. ಅಲ್ಲಯ್ಯಾ, ಕೋಣ ಸುಮ್ಮನೆ ನಿಂತುಕೊಂಡು ಕತ್ತನ್ನು ಅಲ್ಲಾಡಿಸುತ್ತಿದ್ದರೆ? ಎಂದು ಪ್ರಶ್ನಿಸಿದ. ಆಗ ಗಾಣಿಗ ನಗುತ್ತ ಉತ್ತರಿಸಿದನಂತೆ: ಕೋಣ ನಿಮ್ಮ ಹಾಗೆ ಬುದ್ಧಿಜೀವಿ ಅಲ್ಲ ಸ್ವಾಮೀ!