About Us Advertise with us Be a Reporter E-Paper

Breaking Newsದೇಶಪ್ರಚಲಿತ

ಲೈಂಗಿಕ ಕಿರುಕುಳ: ನಾನಾ ಪಾಟೇಕರ್‌‌ ವಿರುದ್ದ ದೂರು ದಾಖಲು

ಮುಂಬೈ: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ಅವರ ವಿರುದ್ಧ ಬಾಲಿವುಡ್ ನಟಿ ತನುಶ್ರೀ ದತ್ತಾ ಎಫ್‌ಐಆರ್ ದಾಖಲಿಸಿದ್ದಾರೆ.

2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಶೂಟಿಂಗ್ ವೇಳೆ ನಾನಾ ಪಾಟೇಕರ್ ಮತ್ತು ಚಿತ್ರದ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಮ್ಮಿ ಸಿದ್ದಿಕಿ ಹಾಗೂ ಗಣೇಶ್ ಆಚಾರ್ಯ ಅವರು ಅನುಚಿತವಾಗಿ ವರ್ತಿಸಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮುಂಬೈನ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಲಿಖಿತ ದೂರು ನೀಡಿದ್ದರು.

ಇವರ ದೂರನ್ನು ಆಧರಿಸಿ ಐಪಿಸಿ ಸೆಕ್ಷನ್ 354 ಮತ್ತು 509ರ ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಮನೋಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ತನುಶ್ರೀ ದತ್ತಾ ಅವರ ವಕೀಲ ನಿತಿನ್ ಸತ್ಪೂಟೆ ಬುಧವಾರ ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆೆ 40 ಪುಟಗಳ ಪೂರಕ ದಾಖಲೆಗಳನ್ನು ಒದಗಿಸಿದ್ದರು. ಮುಂದಿನ 10 ದಿನಗಳಲ್ಲಿ ತನ್ನ ಎದುರು ಹಾಜರಾಗುವಂತೆ ಆಯೋಗ ನಾನಾ ಪಾಟೇಕರ್ ಅವರಿಗೆ ಸೂಚಿಸಿದೆ.

ಆರೋಪ ನಿರಾಕರಣೆ:

ತಮ್ಮ ಮೇಲಿನ ಆರೋಪಗಳನ್ನು ನಾನಾ ಪಾಟೇಕರ್ ಸಂಫೂರ್ಣವಾಗಿ ಅಲ್ಲಗಳೆದಿದ್ದಾರೆ. ತನುಶ್ರೀ ದತ್ತಾ ಅವರಿಗೆ ನಾನಾ ಲಿಖಿತ ರೂಪದಲ್ಲಿ ಕ್ಷಮೆ ಯಾಚಿಸುವಂತೆ ಪಾಟೇಕರ್ ನೋಟಿಸ್ ಜಾರಿ ಮಾಡಿದ್ದಾರೆ.

ಮೀ ಟೂ ಪ್ರಭಾವ!

ಎರಡು ವಾರಗಳ ಹಿಂದೆ ನಾನಾ ಪಾಟೇಕರ್ ವಿರುದ್ಧ ತನುಶ್ರೀ ಆರೋಪ ಹೊರಿಸುತ್ತಿದಂತೆ ದೇಶದಲ್ಲಿ ‘ಮೀ ಟೂ’ ಚಳವಳಿ ಕಾವು ಪಡೆದುಕೊಂಡಿತು. ಅಲ್ಲಿಂದೀಚೆಗೆ ಸಿನಿಮಾ, ಕಿರುತೆರೆ ಮತ್ತು ಪತ್ರಿಕೋದ್ಯಮದ ಹಲವಾರು ಮಹಿಳೆಯರು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ನಟ ಅಲೋಕ್‌ನಾಥ್, ನಿರ್ಮಾಪಕ ವಿಕಾಸ್ ಬಹ್ಲ್‌, ಗಾಯಕ ಕೈಲಾಶ್ ಖೇರ್, ಗಾಯಕ, ಗೀತ ರಚನೆಕಾರ ವೈರಮುತ್ತು ಮತ್ತು ಮಾಜಿ ಸಂಪಾದಕ ಹಾಗೂ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಹೊರಿಸಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close