About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸಿಲಿಂಡರ್ ಸ್ಫೋಟ: ಕುಂಭಮೇಳದ ದಿಗಂಬರರ ಅಖಾಡದಲ್ಲಿ ಅಗ್ನಿ ಅವಗಢ

ಪ್ರಯಾಗ್​ರಾಜ್​: ಉತ್ತರಪ್ರದೇಶದಲ್ಲಿ ನಾಳೆಯಿಂದ ಆರಂಭವಾಗಲಿರುವ ಮಹೋತ್ಸವ ಅರ್ಧ ಕುಂಭಮೇಳಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋಮವಾರ ದಿಗಂಬರರ ಅಖಾಡದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟಿಸಿ ಈ ಅಗ್ನಿ ಅವಗಢ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಅವಗಢ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ. ಸ್ಥಳಕ್ಕೆ ತಕ್ಷಣ 10 ಆಂಬುಲೆನ್ಸ್​ ಮತ್ತು ಒಂದು ಏರ್​ ಆಂಬುಲೆನ್ಸ್ ಅ​ನ್ನು ಕಳುಹಿಸಲಾಯಿತು ಎಂದು ವಿಪತ್ತು ನಿರ್ವಹಣಾ ನೋಡಲ್​ ಅಧಿಕಾರಿ ಡಾ.ರಿಶಿ ಸಹಾಯ್​ ತಿಳಿಸಿದ್ದಾರೆ.

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಅರ್ಧ ಕುಂಭಮೇಳ ನಾಳೆಯಿಂದ 45 ದಿನಗಳ ಕಾಲ ನಡೆಯಲಿದ್ದು, ಮಾರ್ಚ್​ 4 ಮಹಾಶಿವರಾತ್ರಿಯಂದು ಮುಕ್ತಾಯವಾಗಲಿದೆ. 12 ವರ್ಷಕ್ಕೊಮ್ಮ ಪೂರ್ಣ ಕುಂಭಮೇಳ, 6 ವರ್ಷಕ್ಕೊಮ್ಮ ಅರ್ಧ ಕುಂಭಮೇಳ ನಡೆಯಲಿದೆ. ನಾಳೆಯಿಂದ ಆರಂಭವಾಗುತ್ತಿರುವ ಅರ್ಧ ಕುಂಭಮೇಳಕ್ಕೆ ಇಂದಿನಿಂದಲೇ ಸಾಧು ಸಂತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ.

ಸುಮಾರು 12 ಕೋಟಿ ಭಕ್ತರು ಈ ಕುಂಭಮೇಳದಲ್ಲಿ ಭಾಗವಹಿಸುತ್ತಾರೆ ಎಂದು ಊಹಿಸಲಾಗಿದೆ. ಪ್ರಯಾಗ್​ರಾಜ್​ ಅನ್ನು ಹೊರತುಪಡಿಸಿ ಹರಿದ್ವಾರ, ಉಜ್ಜಯಿನಿ ಮತ್ತು ನಾಸಿಕ್​ನಲ್ಲಿಯೂ ಕುಂಭಮೇಳ ನಡೆಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close