About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

ಕ್ಯಾಲಿಪೋರ್ನಿಯಾದಲ್ಲಿ ಕಾಡ್ಗಿಚ್ಚಿನ ರೌದ್ರಾವತಾರ; 31 ಬಲಿ, 200 ಜನ ಕಣ್ಮರೆ

ಪ್ಯಾರಾಡೈಸ್: ಅಮೆರಿಕದ ಕ್ಯಾಲಿಪೋರ್ನಿಯಾ ಪ್ರಾಂತ್ಯದಲ್ಲಿ ವಿನಾಶಕಾರಿ ಕಾಡ್ಗಿಚ್ಚಿನ ರೌದ್ರಾವತಾರಕ್ಕೆ ಬಲಿಯಾದವರ ಸಂಖ್ಯೆ 31ಕ್ಕೇರಿದ್ದು, 200 ಜನ ಕಣ್ಮರೆಯಾಗಿದ್ದಾರೆ.

ಅರಣ್ಯ ಬೆಂಕಿ ಸುಂದರ ಪ್ಯಾರಾಡೈಸ್ ಪ್ರದೇಶವನ್ನು ಆಹುತಿ ತೆಗೆದುಕೊಂಡಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ನಿಯಂತ್ರಣಕ್ಕೂ ಮೀರಿ ಸಹಸ್ರಾರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾಡಿನ ಬೆಂಕಿಯನ್ನು ತಹಬಂದಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಅಗ್ನಿಶಮನ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಮತ್ತಷ್ಟು ಮೃತದೇಹಗಳು ಪತ್ತೆಯಾಗುತ್ತಿವೆ.

ಕಳೆದ ಗುರುವಾರ ಭುಗಿಲೆದ್ದ ಕ್ಯಾಂಪ್ ಫೈರ್ ಹೆಸರಿನ ಅರಣ್ಯ ಬೆಂಕಿಯಿಂದ ಪ್ಯಾರಾಡೈಸ್ ನಗರ ಸರ್ವನಾಶವಾಗಿದೆ. ಅಲ್ಲಿದ್ದ ಬಹುತೇಕ ಮನೆಗಳೂ ಸೇರಿದಂತೆ 6,700ಕ್ಕೂ ಕಟ್ಟಡಗಳು, ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳು ಸುಟ್ಟು ಭಸ್ಮವಾಗಿವೆ. ಮನೆಗಳು ಮತ್ತು ವಾಣಿಜ್ಯ ವಹಿವಾಟುಗಳನ್ನು ಕಳೆದುಕೊಂಡ ಜನರು ಹತಾಶೆಯೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ.

ಕ್ಯಾಲಿಪೋರ್ನಿಯಾ ಪ್ರಾಂತ್ಯದಲ್ಲಿ ಕೆಲವೇಡೆ ತೊಂದರೆಗೆ ಸಿಲುಕಿದ್ದ ಸಹಸ್ರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅತಂತ್ರರಾಗಿರುವ ನೂರಾರು ನಿರಾಶ್ರಿತರನ್ನು ರಕ್ಷಿಸುವ ಕಾರ್ಯ ಸಮರಸಜ್ಜಿನಂತೆ ಸಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close