ದಾಖಲೆಯ ಜಯ ತಂದ ಮೊದಲ ಚುನಾವಣೆ: ಬಾದರ್ಲಿ ಹಂಪನಗೌಡ

Posted In : ಸಂಗಮ, ಸಂಪುಟ

ಮೊದಲ ಸಲ: ನಿರೂಪಣೆ- ಶಂಕರ್ ಎನ್. ಪರಂಗಿ

ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ನಾನು 1989ರಲ್ಲಿ ಜೆಡಿಯುನಿಂದ ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದಲ್ಲಿ ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೆ.

ಕಾಂಗ್ರೆಸ್‌ನಿಂದ ಮಾಜಿ ಶಾಸಕರಾಗಿದ್ದ ನಾರಾಯಣಪ್ಪ ಅವರು ಪ್ರತಿಸ್ಪರ್ಧಿ ಯಾಗಿದ್ದರು. ಅಂದು ನಾನು 32 ಸಾವಿರ ಮತಗಳಿಂದ ಗೆಲುವು ಸಾಧಿಸಿದೆ. ಇದು ನನಗೆ ದಾಖಲೆಯ ಜಯವಾಗಿತ್ತು. ಚುನಾ ವಣೆಯಲ್ಲಿ ಮುನ್ನ ಎರಡು ವರ್ಷ ಜಿಪಂ ಸದಸ್ಯನಾಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದೆ. ಈ ವೇಳೆ ತಾಲೂಕಿನಲ್ಲಿ ಎರಡು ತಾಲೂಕು ಕ್ರೀಡಾಂಗಣ, ಶಾಲೆ ನಿರ್ಮಾಣ ಮತ್ತು ಕುಡಿಯುವ ನೀರಿನ ಯೋಜನೆ ಸೇರಿ ಜಿಲ್ಲೆಯಾದ್ಯಂತ ಅಭಿವೃದ್ಧಿ
ಕಾರ್ಯಗಳನ್ನು ಮಾಡಿದ್ದೆ. ಆದ್ದರಿಂದ ನನ್ನ ಮೇಲೆ ಜನರು ವಿಶ್ವಾಸ ಇಟ್ಟುಕೊಂಡಿದ್ದರು.

ಕುಟುಂಬದ ಹಿರಿಯರು, ಸಹೋದರರು ರಾಜಕೀಯ ಅನುಭವ ಹೊಂದಿದ್ದರಿಂದ ನನಗೆ ಚುನಾವಣೆಗೆ ಸ್ಪರ್ಧಿಸಲು ಕಷ್ಟವಾಗ ಲಿಲ್ಲ. ಜನರು ಹಾಗೂ ಪಕ್ಷದ ಕಾರ್ಯಕರ್ತರ ಬೆಂಬಲವೂ ಇತ್ತು. ಆದ್ದರಿಂದಲೇ ಜೆಡಿಯು ನಿಂದ ಟಿಕೆಟ್ ಕೂಡ ಸಿಕ್ಕಿತ್ತು. ಪ್ರತಿ ಹಳ್ಳಿಗಳಿಗೂ ಹೋಗಿ ಪ್ರಚಾರ ನಡೆಸುತ್ತಿದ್ದೆವು. ಅಂದು ಫೇಸ್‌ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳ ಹಾವಳಿ ಇರಲಿಲ್ಲ. ನಮ್ಮ ಪರ ಒಂದೊಂದು ಊರಿನಲ್ಲೂ ಸುಮಾರು 50 ಜನ ಕಾರ್ಯಕರ್ತರಿದ್ದು, ಅವರು ನಮ್ಮ ಜತೆಗೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.

ಕ್ಷೇತ್ರದಲ್ಲಿನ ನನ್ನ ಅಭಿವೃದ್ಧಿ ಕಾರ್ಯಗಳಿಂದಲೇ ಜನರ ಸಹಕಾರ ಅಧಿಕವಾಗಿತ್ತು. ಗೆಲುವಿನ ನಂತರ ಸುಮಾರು ಎರಡು ಕ್ಷೇತ್ರದ ಹಲವಾರು ಗ್ರಾಮಗಳಿಗೆ ಭೇಟಿ ನೀಡಿ ಜನರು, ಮುಖಂಡರ ಬಳಿ ಸಮಸ್ಯೆ ಕುರಿತು ಆಲಿಸುವ ಮೂಲಕ ಅಭಿವೃದ್ಧಿಗೆ ಯೋಜನೆ ರೂಪಿಸಿದೆ.

2004ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದೆ. ಈವರೆಗೆ ಮೂರು ಬಾರಿ ಜೆಡಿಯು ಮತ್ತು ಮೂರು ಸಲ ಕಾಂಗ್ರೆಸ್‌ನಿಂದ ಒಟ್ಟು ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ನಾಲ್ಕರಲ್ಲಿ ಗೆಲುವು ಸಾಧಿಸಿದ್ದೇನೆ. ಪ್ರಸ್ತುತ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರ 5 ವರ್ಷದ ಅವಧಿ ಮತ್ತು ಇದಕ್ಕೂ ಮುನ್ನ ಧರಂಸಿಂಗ್ ಅವರ ತಿಂಗಳ ಅಧಿಕಾರಾವಧಿಯಲ್ಲಿ ಮಾತ್ರ ನಾನು ಆಡಳಿತ ಪಕ್ಷದಲ್ಲಿದ್ದದ್ದು ಬಿಟ್ಟರೆ, ರಾಜಕೀಯಕ್ಕೆ ಕಾಲಿಟ್ಟಾಗಿನಿಂದಲೂ ವಿರೋಧ ಪಕ್ಷದಲ್ಲಿದ್ದೆ.

Leave a Reply

Your email address will not be published. Required fields are marked *

fifteen + 4 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

 

Wednesday, 25.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ದಶಮಿ, ಬುಧವಾರ, ನಿತ್ಯನಕ್ಷತ್ರ-ಮಖಾ, ಯೋಗ-ವೃದ್ಧಿ, ಕರಣ-ಗರ

ರಾಹುಕಾಲಗುಳಿಕಕಾಲಯಮಗಂಡಕಾಲ
12.00-1.30 10.30-12.00 7.30-9.00

Read More

Back To Top