About Us Advertise with us Be a Reporter E-Paper

Breaking Newsಪ್ರಚಲಿತಸಿನಿಮಾಸ್

‘ಜುಗಾರಿ ಕ್ರಾಸ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಕವಿ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’ ಕಾದಂಬರಿಯನ್ನು ಓದಿ ಸಂತಸ ಪಟ್ಟವರು ಸಾಕಷ್ಟು ಜನರಿದ್ದಾರೆ. ಈಗ ಈ ಕಾದಂಬರಿ ಸಿನಿಮಾ ರೂಪ ಪಡೆದುಕೊಳ್ಳುತ್ತಿದೆ.

‘ಜುಗಾರಿ ಕ್ರಾಸ್’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದ್ದು, ಮೊದಲ ಪೋಸ್ಟರ್ ಅನಾವರಣವಾಗಿದೆ. ‘ಕಡ್ಡಿಪುಡಿ’ ಖ್ಯಾತಿಯ ಚಂದ್ರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಟಿ ಎಸ್ ನಾಗಾಭರಣ ಅವರ ಹೊಸ ಚಿತ್ರ ಇದಾಗಿದೆ. ಕನ್ನಡದ ಮತ್ತೊಂದು ಶ್ರೇಷ್ಠ ಕಾದಂಬರಿಗೆ ಅವರು ದೃಶ್ಯ ರೂಪ ನೀಡುತ್ತಿದ್ದಾರೆ. ಅವರ ಪುತ್ರ ಪನ್ನಗ ಭರಣ ಸಹ ನಿರ್ದೇಶನ ಮಾಡುತ್ತಿದ್ದಾರೆ.

ವಿಶೇಷ ಅಂದರೆ, ಈ ಸಿನಿಮಾದ ನಾಯಕನಾಗಿರುವುದು ಚಿರಂಜೀವಿ ಸರ್ಜಾ. ಇಷ್ಟು ದಿನ ಕಮರ್ಶಿಯಲ್ ಸಿನಿಮಾಗಳ ನಾಯಕನಾಗಿದ್ದ ಚಿರು ಈಗ ಹೊಸ ಬಗೆಯ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಚಿರು ಪಾಲಿಗೆ ದೊಡ್ಡ ಚಾಲೆಂಜ್ ಆಗಿದೆ.

ಉಳಿದಂತೆ, ವಾಸುಕೀ ವೈಭವ್ ಸಂಗೀತ, ಹೆಚ್ ಸಿ ವೇಣು ಛಾಯಾಗ್ರಹಣ, ಕೆಂಪರಾಜು ಸಂಕಲನ, ಹರೀಶ್ ಹಾಗಲವಾಡಿ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಇರಲಿದೆ.

Tags

Related Articles

Leave a Reply

Your email address will not be published. Required fields are marked *

Language
Close