About Us Advertise with us Be a Reporter E-Paper

Breaking Newsಪ್ರಚಲಿತವಿದೇಶ

17 ಮಂದಿಗೆ ನಿಫಾ ಹರಡಲು ಒಬ್ಬ ವ್ಯಕ್ತಿ ಕಾರಣ!?

ತಿರುವನಂತಪುರಂ: ಕೇರಳದಲ್ಲಿ ಭೀತಿ ಹುಟ್ಟಿಸಿದ್ದ ನಿಫಾ ವೈರಸ್‌ ಬಗ್ಗೆ ತಜ್ಞರ ತಂಡ ಸಂಶೋಧನೆ ನಡೆಸಿದ್ದು, 19 ಮಂದಿ ನಿಫಾ ಪೀಡಿತರಲ್ಲಿ 17 ಜನರಿಗೆ ಸೋಂಕು ತಗುಲಲು, ಮೊದಲು ನಿಫಾ ವೈರಸ್ ಪೀಡಿತ ಮೊಹಮದ್ ಕಾರಣ ಇರಬಹುದು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಮೊದಲು 26 ವರ್ಷದ ಮೊಹಮದ್ ಸಬಿತ್ ಎಂಬ ವ್ಯಕ್ತಿಗೆ ನಿಫಾ ವೈರಸ್‌ ತಗುಲಿತ್ತು. ನಂತರ ಈ ವ್ಯಕ್ತಿಯಿಂದ 17 ಮಂದಿಗೆ ಸೋಂಕು ತಗುಲಿರಬಹುದು ಎಂದು ಇದೀಗ ಸಂಶೋಧನೆಯಿಂದ ಬೆಳಕಿಗೆ ಬಂದಿದೆ. ಮೊಹಮದ್ ಮೇ 5 ರಂದು ಮೃತಪಟ್ಟಿದ್ದನು.
ಮೊಹಮದ್‌ಗೆ ನಿಫಾ ವೈರಸ್ ತಗುಲಿದ ನಂತರ ಪೆರಮಬ್ರ ತಾಲೂಕು ಆಸ್ಪತ್ರೆಯಲ್ಲಿ ನಾಲ್ವರಿಗೆ ಸೋಂಕು ತಗುಲಿದೆ. ನಂತರ ಕೊಝಿಕೊಂಡೆ ಮೆಡಿಕಲ್ ಕಾಲೇಜಿನಲ್ಲಿ 10 ಮಂದಿಗೆ ವೈರಸ್ ತಗುಲಿದೆ. ಮತ್ತೊಬ್ಬ ರೋಗಿ ಪೆರಮಬ್ರ ಆಸ್ಪತ್ರೆಯಲ್ಲಿ ನಿಫಾ ಹರಡಿರಬಹುದು ಎಂದು ತಜ್ಞರ ತಂಡ ತಮ್ಮ ವರದಿಯಲ್ಲಿ ತಿಳಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close