About Us Advertise with us Be a Reporter E-Paper

ಗುರು

ಕನ್ನಡಿಗರ ಮೊದಲ ಧರ್ಮ ಶರಣ ಧರ್ಮ

* ಡಾ ವಿ. ಮುನಿವೆಂಕಟಪ್ಪ

ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಾಗೆವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಕ್ರಿ.ಶ.1131ರಲ್ಲಿ ಬಸವಣ್ಣ ಜನಿಸಿದನು. ಮಾದರಸ ಶೈವ ಬ್ರಾಹ್ಮಣರಾಗಿದ್ದು, ಮುಖ್ಯಸ್ಥರಾಗಿದ್ದರು. ಅಲ್ಲಿನ ವೇದೋಪನಿಷತ್ತುಗಳ, ಆಗಮ, ವೈಧಿಕಧರ್ಮದ ಆಚರಣೆಗಳ ಅಸಮಾನತೆಯ ಧೋರಣೆ ಬಸವಣ್ಣನಿಗೆ ಸರಿಕಾಣಲಿಲ್ಲ.

ಬಸವಣ್ಣನವರು ಇಷ್ಟಲಿಂಗ ಪರಿಕಲ್ಪನೆಯನ್ನು ವಿನೂತನವಾಗಿ ಕೊಟ್ಟು ಹೆಣ್ಣಾಗಲಿ, ಗಂಡಾಗಲಿ ಎಲ್ಲರೂ ಅದನ್ನು ಕೊರಳಲ್ಲಿ ಧರಿಸಬೇಕೆಂದು ಹೇಳಿದರು. ಇಷ್ಟಲಿಂಗವು ದೇಹವನ್ನು ದೇವಾಲಯವಾಗಿ ಮಾಡುವ ಸಾಧನವಷ್ಟೇ ಅಲ್ಲ, ಎಲ್ಲವನ್ನೂ ಸಮತಟ್ಟುಗೊಳಿಸುವ ಅಪೂರ್ವ ಪರಿಕರ ಎಂಬುದನ್ನು ವಿವರಿಸಿದರು.

ಶೂನ್ಯಸಿಂಹಾಸನಾಧೀಶನಾಗಿ ಬಸವಾದಿ ಪ್ರಥಮರ ಮಾನಸಿಕ ಗುರುವಾಗಿ, ಅಪ್ಪಟ ಜಂಗಮನಾಗಿ, ಸಮಕಾಲೀನ ಶರಣರೆಲ್ಲ ಸಮಾನ ಪ್ರೀತಿ ಗೌರವಗಳಿಂದ ಕಂಡವನಾಗಿ ಮೃದು ಹೃದಯದ ನಭೊಮಂಡವನ್ನು ಬೆಳಗಿದ ಅಲ್ಲಮಪ್ರಭುದೇವರೆಂದೇ ಕರೆಸಿಕೊಂಡವನು. ಅನುಭವ ಮಂಟಪದ ಶೂನ್ಯ ಸಿಂಹಾಸನಾಧೀಶನಾದ ಅಲ್ಲಮಪ್ರಭು.

ಶರಣಧರ್ಮದಲ್ಲಿ ಮೂರ್ತಿಪೂಜೆ ಮತ್ತು ದೇಗುಲ ಸಂಸ್ಕೃತಿಗೆ ಅವಕಾಶವಿಲ್ಲ. ಈ ಧರ್ಮದ ಶರಣರು ಪರಮಾತ್ಮ ಕಲ್ಲುಗಳ ಆಕಾರದಲ್ಲಿಲ್ಲ. ವಿಭಿನ್ನ ಅವತಾರಗಳ ರೂಪದಲ್ಲಿಲ್ಲ. ಬದಲಾಗಿ ಆತ ಘಟ ಘಟವಾಸಿ ಎಂದು ಹೇಳಿದರು. ದೇಹವನ್ನೇ ಪರಮಾತ್ಮನ ಆವಾಸ ಸ್ಥಾನವೆಂದು ಪರಿಭಾವಿಸುವ ಶರಣರ ರೀತಿ ಅನನ್ಯವಾದುದಾಗಿದೆ. ಅವರು ತಮ್ಮ ದೇಹವನ್ನೇ ದೇವಾಲಯವನ್ನಾಗಿ ಕಲ್ಪಿಸಿದರು.

ಉಳ್ಳವರು ಶಿವಾಲಯವ ಮಾಡಿದರು
ನಾನೇನು ಮಾಡಲಯ್ಯಾ, ಬಡವನು!
ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯ.

ಶರಣ ಧರ್ಮ ಬದುಕನ್ನು ಪ್ರೀತಿಸಿದಂತೆ ಮೃತ್ಯುವನ್ನೂ ಪ್ರೀತಿಸುತ್ತದೆ. ಮರಣವು ಶರಣ ಧರ್ಮೀಯರಿಗೆ ಆತಂಕವುಂಟುಮಾಡುವ ತತ್ವವಲ್ಲ. ಶರಣರು ಮರಣವನ್ನು ಮಹನವಮಿ ಎಂದರು. ಶರಣಧರ್ಮದ ಪ್ರಕಾರ ಪರಮಾತ್ಮ ಅಲ್ಲಮಪ್ರಭು ಹೇಳುವಂತೆ ಇದ್ದೂ ಇಲ್ಲದಂತಿದ್ದಾನೆ. ಶರಣಧರ್ಮ ಆಸ್ತಿಕಧರ್ಮ. ಇದು ಪರಮಾತ್ಮನ ಅಸ್ತಿತ್ವವನ್ನು ಒಪ್ಪುತ್ತದೆ. ಆದರೆ ಅವನ ರೂಪಾಕಾರಗಳನ್ನು ಮತ್ತು ಅವತಾರಗಳನ್ನು ನಂಬುವುದಿಲ್ಲ.

ಗೀತವ ಬಲ್ಲಾತ ಜಾಣನಲ್ಲ: ಮಾತಬಲ್ಲಾತ ಜಾಣನಲ್ಲ
ಜಾಣನು ಜಾಣನು-ಆತ ಜಾಣನು ನೆರೆ ನಂಬಿದಾತ
ಆತ ಜಾಣನು ಜಂಗವಕ್ಕೆ ಧನವ ಸವೆಸುವಾತ
ಆತ ಜಾಣನು ಜವನ ಬಾಯಲು ಬಾವಲ ಕೊಯ್ದು ಹೋದಾತ
ಆತ ಜಾಣನು ನಮ್ಮ ಕೂಡಲ ಸಂಗನ ಶರಣರು.

ನಿಜವಾದ ಜಾಣನೆಂದರೆ ಲಿಂಗದಲ್ಲಿ ನಿಷ್ಠೆಯುಳ್ಳವರು. ಜಂಗಮಕ್ಕೆ ಧನ ದಾಸೋಹ ಮಾಡುವವರು ಮತ್ತು ದೇಹದ(ಜವನ ಬಯಲು ಬಾಲ) ಅಭಿಮಾನವನ್ನು ಕಳೆದುಕೊಂಡವರು. ಗೀತವನ್ನು ಬಲ್ಲವರಾಗಲಿ, ಮಾತಿನಲ್ಲಿ ಚತುರರಾದವರಾಗಲಿ ಜಾಣರಲ್ಲ. ಗುರುಲಿಂಗಜಂಗಮಕ್ಕೆ ತನು ಮನ ಧನಗಳನ್ನು ಸಮರ್ಪಿಸಿ ತ್ರಿವಿಧ ದಾಸೋಹಿಗಳಾದ ಶರಣರೇ ಜಾಣರು ಎಂಬ
ಬಹುಹಿಂದೆಯೇ ಸನಾತನಿಗಳನ್ನು ಧಿಕ್ಕರಿಸಿ ಬೌದ್ಧ, ಜೈನಧರ್ಮಳಳೂ ಅಸ್ತಿತ್ವ ಪಡೆದುಕಕೊಂಡಂತೆ ಶರಣ ಧರ್ಮವೂ ದುಡಿಯುವವರ ಮತ್ತು ಅಪ್ಪಟ ಕನ್ನಡಿಗರ ಧರ್ಮವಾಗಿ ಅರಳಿದೆ. ಶರಣ ಸಿದ್ದಾಂತವನ್ನು ವರ್ಣಾಶ್ರಮ ಧರ್ಮದೊಂದಿಗೆ ಹೋಲಿಕೆ ಮಾಡಬಾರದು..

ವೇದಿವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
ಭರ್ಗೋದೇವಸ್ಸ ಧೀಮಹಿ ಎಂಬರು
ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ
ಕೂಡಲಸಂಗಮದೇವಾ.
ಎನ್ನುತ್ತಾರೆ ಬಸವಣ್ಣ. ಅದಕ್ಕೆ ಅಲ್ಲಮ ಮಾತು
ವೇದವೆಂಬುದು ಓದಿನ ಮಾತು: ಶಾಸ್ತ್ರವೆಂಬುದು ಸಂತೆಯ ಸುದ್ದಿ
ಪುರಾಣವೆಂಬುದು ಪುಂಡರಗೋಷ್ಠಿ, ತರ್ಕವೆಂಬುದು ತಗರ
ಭಕ್ತಿ ಎಂಬುದು ತೋರುಂಬ ಲಾಭ,
ಗುಹೇಶ್ವರನೆಂಬುದು ಮೀರಿದ ಘನವು
ಹೀಗೆ ವೇದಾಗಮಗಳನ್ನು ನೇರವಾಗಿ ಖಂಡಿಸುವ ಶರಣ ಸಿದ್ಧಾಂತ ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ.

ಇಷ್ಟಲಿಂಗ ಪೂಜೆಯಲ್ಲಿ ಬಸವಣ್ಣ ಕರ್ಮಸಿದ್ದಾಂತವನ್ನು ಸಂಹಾರ ಮಾಡಿ, ಕಾಯಕ ಸಿದ್ದಾಂತ ಕೊಟ್ಟರು. ಈ ಮೂಲಕ ಕರ್ಮಸಿದ್ದಾಂತಕ್ಕೆ ತಕ್ಕ ಉತ್ತರ ಕೊಟ್ಟರು. ಈ ಕಾಯಕದಲ್ಲಿ ಅನ್ನದಾಸೋಹ, ಜ್ಞಾನದಾಸೋಹ, ಮತ್ತು ಕಾಯಕ ದಾಸೋಹ ಈ ಮೂರನ್ನು ಆಚರಣೆಗೆ ತರಬೇಕೆಂಬುದು ಬಸವಣ್ಣನವರ ಅಭಿಪ್ರಾಯವಾಗಿತ್ತು. ಪ್ರತಿಯೊಬ್ಬರು ತಮ್ಮ ವರಮಾನದಲ್ಲಿ ಒಂದಂಶವನ್ನು ದಾನಧರ್ಮಮಾಡಬೇಕು. ಕಾಯಕಮಾಡಿ ಜೀವಿಸಬೇಕು. ಅಂದಿನ ಕಾಯಕವನ್ನು ಅಂದೇ ಮಾಡಿ ಪರಿಶುದ್ಧರಾಗಬೇಕು ಅದುವೇ ಕಾಯಕತತ್ವ ಎಂದಿದ್ದಾರೆ.

ಶರಣ ಧರ್ಮದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಕಾಯಕ ಮತ್ತು ದಾಸೋಹ ಈ ಧರ್ಮದ ಸೂತ್ರಗಳು. ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ ಮತ್ತು ಷಟ್‌ಸ್ಥಲ ಇದರ ಆತ್ಮ. ಸರ್ವಸಮಾನತೆ ಇದರ ಧ್ಯೇಯ. ಶರಣರ ಅನುಭಾವ, ವೈಜ್ಞಾನಿಕ ವಿಚಾರಧಾರೆ ಮತ್ತು ವಸ್ತುನಿಷ್ಟ ನಡೆನುಡಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಎಲ್ಲ ವರ್ಗದ ಸಮುದಾಯಗಳನ್ನೊಳಗೊಂಡ, ವಿಶ್ವದ ಇತಿಹಾಸದಲ್ಲೇ ಅಪೂರ್ವವೆನಿಸಿದ ಅನುಭವ ಮಂಟಪ ಧರ್ಮಸಂಸತ್ತನ್ನು ಸ್ಥಾಪಿಸಿದ ಹೆಗ್ಗಳಿಗೆ ಶರಣ ಧರ್ಮದ್ದು. ಸ್ವರ್ಗ-ನರಕ, ಜನ್ಮ-ಪುನರ್ಜನ್ಮಗಳು ಪುರೋಹಿತಶಾಹಿಯ ಸೃಷ್ಟಿ ಎನ್ನುವುದನ್ನು ಸಾಧಿಸಿ ತೋರಿಸಿದ ಶರಣರು. ಇಷ್ಟ ಪೂಜೆಯ ಮೂಲಕ ದೇವರ ಮತ್ತು ಭಕ್ತನ ಸಂಬಂಧ ನೇರೆ ಮತ್ತು ನಿರಂತರವೆಂದು ಹೇಳಿದರು. ಶರಣ ಧರ್ಮದಲ್ಲಿ ಸ್ಥಾವರಲಿಂಗ ಪೂಜೆ ನಿಷಿದ್ದವಾದ್ದರಿಂದ ದೇವಾಲಯ ಸಂಸ್ಕೃತಿಗೆ ಅವಕಾಶವಿಲ್ಲ, ಪೂಜಾರಿಗೂ ಅವಕಾಶವಿಲ್ಲ. ಇಷ್ಟಲಿಂಗ ಪರಿಕಲ್ಪನೆಯ ಮೂಲಕ ಬಹುದೇವೋಪಾಸನೆಯನ್ನು ತಿರಸ್ಕರಿಸಿ, ಏಕದೇವೋಪಾಸನೆಗೆ ಒತ್ತು ಕೊಟ್ಟವರು ಶರಣರು.

ವಾಸ್ತವವಾಗಿ ಶರಣತತ್ವದ ಪ್ರಕಾರ ಎಲ್ಲರೂ ಸಮಾನರು. ಅನುಭವ ಬಸವಣ್ಣನವರ ಒಂದು ಅದ್ವಿತೀಯ ಪರಿಕಲ್ಪನೆ. ಜಾಗತಿಕ ಇತಿಹಾಸದಲ್ಲೇ ಇದೊಂದು ಸೋಜಿಗದ ಪ್ರಯೋಗ. ಯಾವುದೇ ಜಾತಿ-ಮತ-ಲಿಂಗಭೇದಗಳಿಲ್ಲದೆ ಎಲ್ಲರೂ ಒಂದು ಕಡೆ ಸೇರಿ ಸಮಾನವಾಗಿ ಕುಳಿತು, ಸಾಮಾಜಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವುದೇ ಅನುಭವ ಮಂಟಪದ ಧ್ಯೇಯೋದ್ದೇಶವಾಗಿತ್ತು.

ಅಂತರಜಾತಿಯ ಜನಕ, ವೈದಿಕರ ಮತ್ತು ದಲಿತರ ನಡುವೆ ವಿವಾಹವನ್ನು ಏರ್ಪಿಡಿಸಿದವರು ಬಸವಣ್ಣ ಮತ್ತು ಶರಣರು. ಬಸವಣ್ಣ ಪ್ರತಿಪಾದಿಸಿದ ತತ್ವಗಳು ಆ ಕಾಲಕ್ಕೆ ಅತ್ಯಂತ ವಿನೂತನವಾಗಿದ್ದವು. ನೇತೃತ್ವದಲ್ಲಿ ಸನಾತನ ವ್ಯವಸ್ಥೆಗೆ ಪರ್ಯಾಯವಾಗಿ ಶರಣ ಸಮಾಜ ನಿರ್ಮಾಣಗೊಂಡಿತ್ತು. ಇಂಥ ಪ್ರಗತಿಪರ ವಿಚಾರಧಾರೆಯನ್ನು ಸಮಾಜದ ಕರ್ಮಠರು ವಿರೋಧಿಸಿದರು. ಆಗ ಅಂತರ್ಜಾತಿ ವಿವಾಹವನ್ನು ನೆಪಮಾಡಿಕೊಂಡರು ದೊರೆ ಬಿಜ್ಜಳನ ಮನಸ್ಸನ್ನು ಕೆಡಿಸಿದರು. ಆಗ ಬಸವಣ್ಣನವರನ್ನು ಗಡಿಪಾರು ಮಾಡಲಾಯಿತು. ಬಸವಣ್ಣ ಮತ್ತು ನೂರಾರು ಜನ ಶರಣರು ಮನನೊಂದು ಪ್ರಾಣ ಉಳಿಸಿಕೊಳ್ಳಲು ವಚನಗಳ ಕಟ್ಟುಗಳ ಸಮೇತ ಕಲ್ಯಾಣವನ್ನು ತೊರೆದರು. ಮೂರು ದಿಕ್ಕುಗಳಿಗೆ ವಲಸೆಹೋದರು.

Tags

Related Articles

Leave a Reply

Your email address will not be published. Required fields are marked *

Language
Close