About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಭಾರತಕ್ಕೆ ಮರಳಿದ ಜೇಟ್ಲಿ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಅಮೆರಿಕಗೆ ತೆರಳಿದ್ದ ವಿತ್ತ ಸಚಿವ ಅರುಣ್‌ ಜೇಟ್ಲಿ ಭಾರತಕ್ಕೆ ಮರಳಿದ್ದಾರೆ.

ಭಾರತಕ್ಕೆ ಮರಳುತ್ತಲೇ ಟ್ವಿಟ್‌ ಮಾಡಿದ ಜೇಟ್ಲಿ, “ಮನೆಗೆ ಮರಳಿರುವುದಯ ಸಂತಸ ನೀಡಿದೆ” ಎಂದು ತಿಳಿಸಿದ್ದಾರೆ.

ಅಂಗಾಂಶದ ಕ್ಯಾನ್ಸರ್‌ಗೆ ತುತ್ತಾಗಿದ್ದ 66 ವರ್ಷದ ಜೇಟ್ಲಿ, ಕಳೆದ ತಿಂಗಳು ಚಿಕಿತ್ಸೆಗೆಂದು ನ್ಯೂಯಾರ್ಕ್‌‌ಗೆ ತೆರಳಿದ್ದರು.  ಈ ಕಾರಣ ಅವರು, ಈ ವರ್ಷದ ಬಜೆಟ್‌ ಮಂಡನೆ ಮಾಡಲು ಆಗಲಿಲ್ಲ. ಜೇಟ್ಲಿ ಅನುಪಸ್ಥಿತಿಯಲ್ಲಿ ವಿತ್ತ ಸಚಿವಾಲಯದ ಖಾತೆ ವಹಿಸಿಕೊಂಡ ರೈಲ್ವೇ ಸಚಿವ ಪಿಯುಶ್‌ ಗೋಯೆಲ್‌ ಬಜೆಟ್‌ ಮಂಡನೆ ಮಾಡಿದ್ದಾರೆ.

ರಾಷ್ಟ್ರಪತಿ ಸೂಚನೆ ಮೇರೆಗೆ ವಿತ್ತ ಸಚಿವಾಲಯದ ಪೋರ್ಟ್‌‌ಫೋಲಿಯೋವನ್ನು ತಾತ್ಕಾಲಿಕವಾಗಿ ನಿಭಾಯಿಸಲಿದ್ದಾರೆ. ಸ್ವದೇಶಕ್ಕೆ ಮರಳಿರುವ ಜೇಟ್ಲಿ ಯಾವಾಗ ಖಾತೆಯ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆಸ್ಪತ್ರೆಯಿಂದಲೇ ಸಾಮಾಜಿಕ ಜಾಲತಾಣಗಳಾದ ಟ್ವಿಟರ್‌ ಹಾಗು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದ ಜೇಟ್ಲಿ, ವರದಿಗಾರರನ್ನು ವಿಡಿಯೋ ಕಾಲಿಂಗ್‌ ಮೂಲಕ ಸಂಪರ್ಕಿಸುತ್ತಿದ್ದರು. ಮೇ 14, 2018ರಲ್ಲಿ AIIMSನಲ್ಲಿ ದೊಡ್ಡ ಸರ್ಜರಿ ಮಾಡಿಸಿಕೊಂಡಿದ್ದ ಜೇಟ್ಲಿ ಇದೇ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದರು.

ಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಕಿಡ್ನಿ ಸಮಸ್ಯೆ ಕಾರಣ ಜೇಟ್ಲಿ ಕಚೇರಿಗೆ ಬರಲು ಆಗುತ್ತಿರಲಿಲ್ಲ. ಈ ಸಮಯದಲ್ಲಿ 100ಕ್ಕೂ ಹೆಚ್ಚು ದಿನಗಳ ಕಾಲ ಸಚಿವಾಲಯವನ್ನು ಗೋಯೆಲ್ ನಿಭಾಯಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close