ಮಾಜಿ ಕ್ರಿಕೆಟಿಗ ಎ.ಜಿ.ಮಿಲ್ಕಾ ಸಿಂಗ್ ಇನ್ನಿಲ್ಲ

Posted In : ಕ್ರೀಡೆ

ಚೆನ್ನೈ: ಮಾಜಿ ಕ್ರಿಕೆಟಿಗ ಎ.ಜಿ.ಮಿಲ್ಕಾ ಸಿಂಗ್ ಹೃದಯಾಘಾತದಿಂದ ಚೆನ್ನೈನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ.

ಮಿಲ್ಕಾ ಅವರು ಅರವತ್ತರ ದಶಕದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಡಿದ್ದು, ಅವರ ಸಹೋದರ ಕೃಪಾಲ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿ ದ್ದರು. 1961-62 ರಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಅವರು ಜತೆಯಾಗಿ ಆಡಿದರು.
ಸಿಂಗ್ ಅವರು ಎಡಗೈ ಬ್ಯಾಟ್ಸ್ ಮನ್, ಅದ್ಭುತ ಫೀಲ್ಡಿಂಗ್ ಗೆ ಹೆಸರುವಾಸಿ. ತಮ್ಮ ಹದಿನೇಳನೇ ವರ್ಷದಲ್ಲಿ ಚೆನ್ನೈನಲ್ಲಿ ರಣಜಿ ಟ್ರೋಫಿಯಲ್ಲಿ ಭಾಗವಹಿ ಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದಾ ರ್ಪಣೆ ಮಾಡಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಎಂಟು ಶತಕಗಳು ಸೇರಿ ನಾಲ್ಕು ಸಾವಿರ ರನ್ ಗಳನ್ನು ಕಲೆ ಹಾಕಿದ್ದ ಮಿಲ್ಕಾ, ಸೋದರ ಕೃಪಾಲ್ ಸಿಂಗ್ ಸಹ 14 ಟೆಸ್ಟ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಮಿಲ್ಕಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿ ದ್ದರು. ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ, ಸಿಂಗ್ ಅವರ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

5 × 1 =

Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

 

Thursday, 23.11.2017

ಶ್ರೀಹೇಮಲಂಭಿ, ದಕ್ಷಿಣಾಯನ, ಹೇಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ , ಪಂಚಮಿ, ಗುರುವಾರ, ನಿತ್ಯ ನಕ್ಷತ್ರ-ಪೂರ್ವಾ ಷಾಢ, ಯೋಗ-ಗಂಡ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
01.30-03.00 09.00-10.30 06.00-07.30

Read More

Back To Top