ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿರುವುದು ರಾಕ್ಷಸ ಪ್ರವೃತಿ: ಪೂಜಾರಿ

Posted In : ದಕ್ಷಿಣ ಕನ್ನಡ, ರಾಜ್ಯ

ಮಂಗಳೂರು: ಕಲ್ಲಡ್ಕ ಶಾಲೆಗೆ ಊಟ ನಿಲ್ಲಿಸಿರುವುದು ರಾಕ್ಷಸ ಪ್ರವೃತಿಯಾಗಿದ್ದು, ದೇವರು ಕೂಡಾ ಈ ನಡೆಯನ್ನು ಮೆಚ್ಚುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಮಾನಾಥ ರೈ ಕುಮ್ಮಕ್ಕಿನಿಂದ ಈ ಕೆಲಸ ಆಗಿದೆ. ರಮಾನಾಥ ರೈಗೂ ಸಿದ್ದರಾಮಯ್ಯ ಅವರ ಶನಿ ಹಿಡಿದಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಹೈಕಮಾಂಡ್‌ಗೆ ಸಚಿವ ಡಿ.ಕೆ. ಶಿವಕುಮಾರ್ ಸಾಮರ್ಥ್ಯ ಗೊತ್ತಾಗಿದ್ದು, ಮುಂದೆ ಅವರೇ ಸಿಎಂ ಆಗುತ್ತಾರೆ. ಡಿಕೆಶಿಗೆ ಮುಖ್ಯಮಂತ್ರಿಿಯಾಗುವ ಅರ್ಹತೆಯೂ ಇದೆ ಎಂದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ಕೊಟ್ಟಲ್ಲೆಲ್ಲ ವಿರೋಧಿ ಮುಖ್ಯಮಂತ್ರಿಗಳು ಕೆಳಗೆ ಇಳಿದಿದ್ದಾರೆ. ಕರ್ನಾಟಕದಲ್ಲೂ ಅದೇ ಗತಿ ಆಗಲಿದೆ.ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳಿದರು.

 

Leave a Reply

Your email address will not be published. Required fields are marked *

fourteen − 8 =

 
Back To Top