About Us Advertise with us Be a Reporter E-Paper

ಅಂಕಣಗಳು

ಪ್ರತ್ಯೇಕತೆಯ ಕೂಗು ಅಭಿವೃದ್ಧಿಗೆ ನಿಮಿತ್ತವಾಗಲಿ

ಪ್ರಕಾಶ ಎಸ್. ಚಳಗೇರಿ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಎಲ್ಲೆಡೆ ಮೊಳಗಿದೆ. ಕೆಲ ಸಂಘಟನೆಗಳಂತೂ ಪ್ರತ್ಯೇಕತೆಯೊಂದೇ ತನ್ನ ಏಕೈಕ ಗುರಿ ಎಂದು ಅಬ್ಬರಿಸಿದವು. ಆದರೆ, ಇನ್ನುಳಿದ ಕೆಲ ಸಂಘಟನೆಗಳು ದಿಕ್ಕೇ ತೋಚದಂತಾಗಿ, ದಕ್ಷಿಣವೋ ಉತ್ತರವೋ ಎಂಬ ಗೊಂದಲಕ್ಕೆ ಸಿಲುಕಿಬಿಟ್ಟಿವೆ.

ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ಕೇಳಲಾರಂಭಿಸುತ್ತಿದ್ದಂತೆ ಹಲವರಿಗೆ ಯಾವ ದಾರಿಯಲ್ಲಿ ಸಾಗಬೇಕು  ಚಿಂತೆ ಎದುರಾದರೆ, ಅಖಂಡ ಕರ್ನಾಟಕದಲ್ಲಿಯೇ ಇದ್ದು ಅಭಿವೃದ್ಧಿಯ ಮಂತ್ರ ಜಪಿಸಬೇಕೋ, ಇಲ್ಲವೆ ಪ್ರತ್ಯೇಕ ರಾಜ್ಯದೊಂದಿಗೆ ಸರಕಾರ ರಚಿಸಿಕೊಂಡು ಅಭಿವೃದ್ಧಿ ಮಾಡಬೇಕೋ ಎಂಬ ಪ್ರಶ್ನೆ ತಲೆಯಲ್ಲಿಯೇ ಕೊರೆಯಲಾರಂಭಿಸಿದೆ. ಅಖಂಡ ಕರ್ನಾಟಕ ಇದ್ದಂತೆ ಇದ್ದರೆ ರಾಜಕೀಯ ಲಾಭಕ್ಕೇನೂ ಕಮ್ಮಿ ಇಲ್ಲ. ಬರೋಬ್ಬರಿ ಮೂವತ್ತು ಜಿಲ್ಲೆ ಸರಕಾರದ ಅಧೀನದಲ್ಲಿರುತ್ತದೆ. ಇದರಲ್ಲಿ ಒಂದೊಂದು ಜಿಲ್ಲೆಯ ಅಭಿವೃದ್ಧಿ, ಕಾಮಗಾರಿ, ಯೋಜನೆಗಳು ಎಂದು ತನ್ನ ಆಡಳಿತವನ್ನು ರಾಜ್ಯದ ತುಂಬೆಲ್ಲಾ ನಡೆಸುತ್ತದೆ. ಪ್ರತ್ಯೇಕ ರಾಜ್ಯವಾದರೆ ಈಗಿರುವ ಮೂವತ್ತು ಜಿಲ್ಲೆಗಳಲ್ಲಿ  ಜಿಲ್ಲೆಗಳನ್ನು ಕೆಳದುಕೊಂಡು 17 ಜಿಲ್ಲೆಯಲ್ಲಷ್ಟೇ ಅಧಿಕಾರ ಸ್ಥಾಪಿಸಬೇಕಾಗುತ್ತದೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಇದ್ದೂ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ಮನೆ ಮಾಡಿ ಉತ್ತರದಲ್ಲಿ ತೆನೆ ಬೆಳೆಸಲು ಬಂದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ಕೈ ಹಿಡಿಯಲಿಲ್ಲ ಇಲ್ಲಿನ ಜನತೆ. ಅಷ್ಟಕ್ಕೂ ವಿಧಾನಸಭೆ ಚುನಾವಣೆಯಲ್ಲಿ ಕುಮಾರಣ್ಣನ ಮನೆಯ ಪಕ್ಕದಲ್ಲಿಯೇ ಇರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಹಿಂದಕ್ಕೆ ತೆಗೆದುಕೊಂಡಿದ್ದು, ಚುನಾವಣೆಗೆ ಮೊದಲೇ ಸೋಲು ಒಪ್ಪಿಕೊಳ್ಳುವಂತಾಯಿತು. ಇದರ ಮಧ್ಯೆ ಕುಮಾರಣ್ಣ  ಕೈ ಹಿಡಿದು ಸಿಎಂ ಆಗಿ ಉತ್ತರ ಕರ್ನಾಟಕದ ಜನರನ್ನೇ ನಿರ್ಲಕ್ಷಿಸಿದರು.

ಈ ನಡುವೆಯೇ, ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿಯವರು ದಕ್ಷಿಣಕ್ಕಷ್ಟೇ ಸರಕಾರದಿಂದ ದಕ್ಷಿಣೆ ನೀಡಿದರು. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನರು ಸಹಜವಾಗಿಯೇ ಕೆರಳುವಂತಾಯಿತು. ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಸಿಎಂ ಕುಮಾರಸ್ವಾಮಿ ಅವರ ನಡೆಯಿಂದ ಹೊರ ಹಾಕುವಂತಾಯಿತು. ಇದರ ಬೆನ್ನಲ್ಲೇ ಕುಮಾರಣ್ಣನ ಕೆಲ ಹೇಳಿಕೆಗಳು ಉತ್ತರದ ಜನತೆ ಪ್ರತ್ಯೇಕ ರಾಜ್ಯ ಬೇಕೇ ಬೇಕು ಎನ್ನುವಂತೆ ಕೂಗು  ಮತ್ತಷ್ಟು ಪ್ರೇರಣೆ ನೀಡಿದಂತಾಯಿತು. ಇದಕ್ಕೆ ಪ್ರತಿಫಲವಾಗಿ ಉತ್ತರ ಕರ್ನಾಟದಲ್ಲಿಯೇ ಹುಟ್ಟಿಕೊಂಡು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದ್ದ ಕೆಲ ಸಂಘಟನೆಗಳು ಪ್ರತ್ಯೇಕ ರಾಜ್ಯ ಬೇಕು ಎಂದು ಕೂಗತೊಡಗಿದವು. ಆದರೆ, ಇದಕ್ಕೆ ಇನ್ನುಳಿದ ಸಂಘಟನೆಗಳು ಭಿನ್ನರಾಗ ಹಾಡತೊಡಗಿದ್ದು, ಪ್ರತ್ಯೇಕತೆಯ ಕೂಗು ಕೇಳಿಯೂ ಕೇಳದಂತಾಯಿತು. ಅಲ್ಲದೇ, ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿ ಅಖಂಡ ಕರ್ನಾಟದೆಲ್ಲೆಡೆ ತಮ್ಮ ಸಂಘಟನೆ ಬೆಳಸಿಕೊಂಡು ನಾಡು, ನುಡಿಗಾಗಿ ಹೋರಾಟ ಮಾಡುತ್ತಿರುವ ಸಂಘಟನೆಗಳು ಪ್ರತ್ಯೇಕತೆಯ ಕೂಗಿಗೆ ಕಿವಿಗೊಡದೆ, ಅಭಿವೃದ್ಧಿಯ ಉತ್ತರ  ಎಂದು ಕೇಳಲಾರಂಭಿಸಿತು. ಇದು ಸಹ ಪ್ರತ್ಯೇಕತೆಯ ದನಿ ಕ್ಷೀಣಿಸಲು ಕಾರಣವಾಯಿತು.

ಪ್ರತ್ಯೇಕ ರಾಜ್ಯವಾದಾಗ ಅಭಿವೃದ್ಧಿ ಸಾಧ್ಯ ಎನ್ನುವ ಮಾತು ಇಂದು, ನಿನ್ನೆ ಹುಟ್ಟಿಕೊಂಡ ‘ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ’ಯ ಅಭಿಪ್ರಾಯವಾಗಿದೆ. ಇದರಲ್ಲಿಯ ಪ್ಲಸ್ ಪಾಯಿಂಟ್ ಎಂದರೆ ಉತ್ತರದ ಅಂಗಳದಲ್ಲಿಯೇ ಸರಕಾರವಿದ್ದರೆ, ಸರಕಾರಿ ಕೆಲಸ-ಕಾರ್ಯಗಳು ಸಲೀಸಾಗುತ್ತವೆ. ಈ ಭಾಗದವರೇ ಮುಖ್ಯಮಂತ್ರಿಯಾದರೆ, ಉನ್ನತ ದರ್ಜೆಯ ಸಚಿವರಾದರೆ ನೂರಾರು ಕಿಲೋ ಮೀಟರ್ ದೂರದಲ್ಲಿರುವ ಬೆಂಗಳೂರಿಗೆ ಓಡಾಡುವುದು ತಪ್ಪುತ್ತದೆ. ಪ್ರತ್ಯೇಕ ಸರಕಾರದಿಂದ ಪ್ರತ್ಯೇಕ ಬಜೆಟ್  ಎಲ್ಲವೂ ಇಲ್ಲಿಯೇ ಮೀಸಲು. ಇಲ್ಲಿನ ಜಿಲ್ಲೆಗಳಿಗೆ ಹೊಸ ಯೋಜನೆಗಳನ್ನು ಹಾಕಿಕೊಂಡು ಉತ್ತಮವಾಗಿ ಅಭಿವೃದ್ಧಿ ಪಡಿಸಲು ಸಾಧ್ಯ ಎನ್ನುವುದು ಪ್ರತ್ಯೇಕ ರಾಜ್ಯ ಬೇಕೆನ್ನುವವರ ಅಭಿಪ್ರಾಯ. ಅಖಂಡ ಕರ್ನಾಟಕದಲ್ಲಿ ಉತ್ತರ ಇಲ್ಲದಂತಾಗಿದೆ. ಅದಕ್ಕೆ ಉತ್ತರ ಕರ್ನಾಟಕದ ಶಾಸಕರು ಬೇಕು. ಆದರೆ, ಅವರ ಕ್ಷೇತ್ರದ ಅಭಿವೃದ್ಧಿ ಬೇಡ ಎನ್ನುವಂತಾಗಿದೆ. ದಕ್ಷಿಣದ ಜಿಲ್ಲೆಗಳಿಗೆ ಹಣದ ಹೊಳೆ ಹರಿಸಿ ಚೊಂಬಿನಲ್ಲಷ್ಟೇ ಹಣ ತುಂಬಿ ಉತ್ತರದ ಶಾಸಕರಿಗೆ ಕೊಟ್ಟಂತಾಗುತ್ತಿದೆ. ಹೀಗಿದ್ದಾಗ ಅಭಿವೃದ್ಧಿಯಾಗಲು ಹೇಗೆ ಸಾಧ್ಯ ಎನ್ನುವುದು ಹೋರಾಟಗಾರರ  ಪ್ರಶ್ನೆ.

ಇದರ ಜತೆಗೆ, ಪ್ರತ್ಯೇಕ ರಾಜ್ಯದ ಕುರಿತು ಧ್ವನಿ ಎತ್ತುವ ಹೋರಾಟಗಾರರು ಸಹ ಒಂದಿಷ್ಟು ಗಮನಾರ್ಹ ಅಂಶವನ್ನು ಅರಿಯಬೇಕಿರುವುದು ಅಗತ್ಯವಾಗಿದೆ. ಈವರೆಗೆ ಉತ್ತರ ಕರ್ನಾಟಕ ಭಾಗದ ಏಳು ಮುಖ್ಯಮಂತ್ರಿಗಳು ರಾಜ್ಯವನ್ನು ಆಳಿದ್ದಾರೆ. ಆ ಸಂದರ್ಭದಲ್ಲಿ ತಮ್ಮ ಭಾಗಕ್ಕೆ ಅವರೆಲ್ಲ ಎಷ್ಟು ಬೇಕೋ ಅಷ್ಟು ಅನುದಾನವನ್ನು ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ದಕ್ಷಿಣ ಕರ್ನಾಟಕ ಭಾಗಕ್ಕೆ ಅನುದಾನ ನೀಡಿದಂತೆ ನೀಡಬಹುದಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಈ ಭಾಗದಿಂದ ಮುಖ್ಯಮಂತ್ರಿಯಾದವರೆಲ್ಲ ದಕ್ಷಿಣ  ಹೆಚ್ಚು ಪ್ರಾತಿನಿಧ್ಯ ನೀಡುತ್ತ ಹೋದರು. ಇನ್ನು ಒಂದು ಪ್ರಮುಖ ವಿಷಯ ಏನೆಂದರೆ ದಕ್ಷಿಣ ಭಾಗಕ್ಕಿಂತ ಉತ್ತರ ಕರ್ನಾಟಕ ಭಾಗದಿಂದ ತೆರಿಗೆ ಸಂಗ್ರಹ ಶೇ. 40ರಷ್ಟು ಕಡಿಮೆ ಎಂದು ಸರಕಾರದ ದಾಖಲೆಗಳೇ ಹೇಳುತ್ತದೆ. ಪ್ರತ್ಯೇಕ ರಾಜ್ಯದ ಕೂಗಿಗೆ ಒಂದು ವೇಳೆ ರಾಜ್ಯಪಾಲರು, ರಾಷ್ಟ್ರಪತಿಗಳು ಅಸ್ತು ಎಂದು ಬಿಟ್ಟರೆ ಉ.ಕ. ರಾಜ್ಯಕ್ಕೆ ಆದಾಯದ ಮೂಲ ಯಾವುದು? ಈಗಷ್ಟೇ ಪ್ರತ್ಯೇಕ ರಾಜ್ಯವಾದ ತೆಲಂಗಾಣ ಆರ್ಥಿಕವಾಗಿ ಎಷ್ಟು ಜರ್ಜರಿತವಾಗುತ್ತಿದೆ ಎನ್ನುವ ಉದಾಹರಣೆ ನಮ್ಮ ಕಣ್ಣಮುಂದೆಯೇ  ಇದನ್ನು ಹೋರಾಟದ ಮುಂಚೂಣಿಯಲ್ಲಿ ಇರುವ ಮುಖಂಡರು, ಮಠಾಧೀಶರು ಅರ್ಥ ಮಾಡಿಕೊಳ್ಳಬೇಕಿದೆ.

ಆ.2ರಂದು ಗುರುವಾರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆಂದು 13 ಜಿಲ್ಲೆಗಳಲ್ಲಿ ನೀಡಿದ್ದ ಬಂದ್ ಕರೆ ಅನೇಕ ಗೊಂದಲಗಳನ್ನು ಸೃಷ್ಟಿಸಿತು. ಬಂದ್ ಇದೆಯೋ ಇಲ್ಲವೋ ಎಂಬುದು ಜನರಿಗೆ ಕಾಡತೊಡಗಿದರೆ, ಬಂದ್ ಮಾಡಬೇಕಾ ಎಂಬ ಪ್ರಶ್ನೆ ಸಂಘಟನೆಯ ಮುಖಂಡರು, ಸದಸ್ಯರಲ್ಲಿಯೂ ಉಂಟಾಗಿತ್ತು. ಹೀಗಾಗಿ ಉತ್ತರದಲ್ಲಿ ಬಂದ್ ಎಫೆಕ್‌ಟ್ ಇಲ್ಲವೇ ಇಲ್ಲ. ಗುರುವಾರ ಎಂದಿನಂತೆ ಸಹಜವಾಗಿ ಜನಜೀವನ ಸಾಗಿತು. ಉ.ಕ.  ರಾಜಕೀಯ ಪಕ್ಷಗಳು ಬೆಂಬಲ ನೀಡದ್ದು ಒಂದಡೆಯಾದರೇ, ಮತ್ತೊಂದೆಡೆ ಈ ಹಿಂದೆ ಏಕೀಕರಣಕ್ಕಾಗಿ ಹೋರಾಟ ಮಾಡಿದ್ದವರೂ, ಅಖಂಡ ಕರ್ನಾಟಕ ಕನಸು ಕಂಡವರೂ, ಇದ್ದ ರೀತಿಯಲ್ಲಿಯೇ ಅಭಿವೃದ್ಧಿ ಕನಸನ್ನು ಹೊತ್ತವರು ಪ್ರತ್ಯೇಕ ಕೂಗಿನಿಂದ ದೂರ ಉಳಿದಿದ್ದು. ಅಲ್ಲದೇ ಪ್ರತ್ಯೇಕ ಹೋರಾಟಗಾರರಿಗೆ ಖಡಾಮುಡಿಯಾಗಿ ಬೆಂಬಲ ನೀಡುವುದೇ ಇಲ್ಲ ಎಂದು ಹೇಳಿರುವುದು ಬಂದ್ ಠುಸ್ ಮಾಡಿತು.

ಪ್ರತ್ಯೇಕ ರಾಜ್ಯದ ಕೂಗಿಗೆ ಧ್ವನಿಗೂಡಿಸದ ರಾಜಕೀಯ ನಾಯಕರು ತಮ್ಮ ನಡೆಯನ್ನು ಸ್ಪಷ್ಟವಾಗಿಸುವಲ್ಲಿ ಹಿಂದೇಟು ಹಾಕಿದ್ದಾರೆ. ಒಂದೆಡೆ ಅಖಂಡತೆ  ಪ್ರತ್ಯೇಕತೆ ಯಾವುದರಲ್ಲಿ ನಾವು ಬೇಳೆ ಬೇಯಿಸಿಕೊಳ್ಳಬೇಕೆಂಬ ಲೆಕ್ಕಾಚಾರ ಹಾಕುವಲ್ಲಿ ನಾಯಕರಿಗೆ ಇನ್ನು ಕಾಲಾವಕಾಶ ಬೇಕಂತಿದೆ. ಒಟ್ಟಿನಲ್ಲಿ ಗುರುವಾರದ ಬಂದ್‌ಗೆ ಗುರು ಬಲ ಕೂಡಿಬರದಂತಾಗಿದ್ದು, ಬಂದ್ ಕರೆ ನಾಟಕ ಆಡಿದಂತಾಗಿದೆ. ಏನೇ ಆಗಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೊಂದು ಉತ್ತರ ಸಿಗಬೇಕಾಗಿದ್ದಂತೂ ನಿಜ. ಈ ನಿಟ್ಟಿನಲ್ಲಿ ಜನತೆ ಅಭಿವೃದ್ಧಿ ಜಪ ಮಾಡವುದೊಂದೇ ಆಗದಿರಲಿ. ಈಗ ಎದ್ದಿರುವ ಪ್ರತ್ಯೇಕತೆಯ ಕೂಗು ಪ್ರತ್ಯೇಕ ರಾಜ್ಯವಾಗಿ ಒಡೆಯುವುದರ ಬದಲು, ಒಂದಿಷ್ಟು ಅಭಿವೃದ್ಧಿಯತ್ತ ಬದಲಾವಣೆಗಾದರೂ ಕಾರಣವಾಗಲಿ ಎನ್ನುವುದು  ಕರ್ನಾಟಕದ ಕನಸು ಹೊತ್ತವರ ಆಸೆ.

Tags

Related Articles

Leave a Reply

Your email address will not be published. Required fields are marked *

Language
Close