About Us Advertise with us Be a Reporter E-Paper

Breaking Newsದೇಶಪ್ರಚಲಿತ

ಸರ್ಜಿಕಲ್ ಸ್ಟ್ರೈಕ್ ದಿನಾಚರಣೆಗೆ ಕೇಂದ್ರ ಸುತ್ತೋಲೆ

ದೆಹಲಿ: ಸೆಪ್ಟಂಬರ್ 29ರಂದು ಸರ್ಜಿಕಲ್ ಸ್ಟ್ರೈಕ್(ನಿರ್ಧಿಷ್ಟ ದಾಳಿ) ದಿನಾಚರಣೆ ಆಚರಿಸಲು ದೇಶದ ಎಲ್ಲ ವಿಶ್ವವಿದ್ಯಾಲಯಗಳಿಗೆ ವಿಶ್ವ ಅನುದಾನ ಆಯೋಗ(ಯುಜಿಸಿ) ನಿರ್ದೇಶನ ನೀಡಿದೆ.

ಯುಜಿಸಿಯ ಈ ನಿರ್ಧಾರಕ್ಕೆ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಆದರೆ ಯುಜಿಸಿ ಸುತ್ತೋಲೆಯನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
2016ರ ಸೆಪ್ಟೆಂಬರ್ 29ರಂದು ಭಾರತೀಯ ಸೇನೆ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ಶಿಬಿರಗಳನ್ನು ನಾಶ ಮಾಡಿದ್ದವು. ಸೇನೆಯ ಈ ದಿಟ್ಟ ಹೆಜ್ಜೆಯನ್ನು ಸ್ಮರಿಸಿ ನಿಟ್ಟಿನಲ್ಲಿ ಯುಜಿಸಿ, ಸೆ.29ರಂದು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಆಚರಿಸಲು ನಿರ್ಧರಿಸಿದೆ.

ಈ ದಿನಾಚರಣೆ ವೇಳೆ ಸೈನಿಕರ ತ್ಯಾಗ ಮನೋಭಾವ ಹಾಗೂ ಪರಿಶ್ರಮದ ಬಗ್ಗೆ ಮಾಜಿ ಸೈನಿಕರಿಂದ ಉಪನ್ಯಾಸ, ಎನ್‌ಸಿಸಿ ವಿದ್ಯಾರ್ಥಿಗಳಿಂದ ವಿಶೇಷ ಪಥ ಸಂಚಲನ, ಭದ್ರತಾ ಪಡೆಗಳಿಗೆ ಶುಭಾಶಯ ಪತ್ರ ರವಾನೆ ಕಾರ್ಯಕ್ರಮ ಆಯೋಜಿಸಲು ಯುಜಿಸಿ ನಿರ್ದೇಶನ ನೀಡಿದೆ.

ಮಾನವ ಸಂಪನ್ಮೂಲ ಸಚಿವರ ಸ್ಪಷ್ಟನೆ:

ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಕಡ್ಡಾಯ ಮಾಡುವಂತೆ ಹಲವಾರು ಗಣ್ಯರು ಮನವಿ ಮಾಡಿಕೊಂಡಿದ್ದರು. ಆದರೆ ಸಂಸ್ಥೆಗಳಿಗಾಗಲೀ ಅಥವಾ ವಿದ್ಯಾರ್ಥಿಗಳಿಗಾಗಲೀ ಆಚರಣೆ ಕಡ್ಡಾಯ ಮಾಡಿಲ್ಲ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಸಲಹೆಗಳು ಬಂದ ಹಿನ್ನಲೆಯಲ್ಲಿ ಕಾರ್ಯಕ್ರಮ ಕುರಿತು ಸುತ್ತೋಲೆ ಹೊರಡಿಸಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close