Alwaleed Bin Khaled: 20ವರ್ಷಗಳ ಕಾಲ ಕೋಮದಲ್ಲಿದ್ದ ಸೌದಿಯ ಸ್ಲೀಪಿಂಗ್ ಪ್ರಿನ್ಸ್ ಇನ್ನಿಲ್ಲ!
ಇಂಗ್ಲೆಂಡ್‌ನ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅಪಘಾತ ಸಂಭವಿಸಿದಾಗ ರಾಜಕುಮಾರ ಅಲ್ವಲೀದ್ ಅವರಿಗೆ 15 ವರ್ಷ ವಯಸ್ಸು. ಈ ಅಪಘಾತದಲ್ಲಿ ಆತನ ಗಂಭೀರ ಗಾಯಗಳಾಗಿ ಅಪಾರ ರಕ್ತಸ್ರಾವ ಉಂಟಾಗಿತ್ತು. ಇದರಿಂದಾಗಿ ಅವರು ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದರು. ನಂತರ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಸುಮಾರು 20 ವರ್ಷಗಳ ಕಾಲ ನಿರಂತರ ವೈದ್ಯರ ನಿಗಾದಲ್ಲಿದ್ದರು.


ನವದೆಹಲಿ: ಸ್ಲೀಪಿಂಗ್ ಪ್ರಿನ್ಸ್(Sleeping Prince) ಅಂತಾನೆ ಪರಿಚಿತನಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ವಾಲೀದ್ ಬಿನ್ ಖಲೀದ್ ಬಿನ್ ತಲಾಲ್(Alwaleed Bin Khaled) ಶನಿವಾರ ಕೊನೆಯುಸಿರೆಳೆದಿದ್ದಾರೆ. 2005ರಲ್ಲಿ ಲಂಡನ್‌ನಲ್ಲಿ ಸಂಭವಿಸಿದ ಭೀಕರ ಅಪಘಾತದ ನಂತರ ಕಳೆದ ಎರಡು ದಶಕಗಳಿಂದ ಕೋಮದಲ್ಲಿದ್ದ ಅವರು, ನಿನ್ನೆ ವಿಧಿವಶರಾಗಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ. ಅವರಿಗೆ 36ವರ್ಷ ವಯಸ್ಸಾಗಿತ್ತು. ಇನ್ನು ಪ್ರಿನ್ಸ್ ಖಲೀದ್ ಬಿನ್ ತಲಾಲ್ ಸಾವನ್ನಪ್ಪಿರುವ ಸಂಗತಿ ತಿಳಿಯುತ್ತಿದ್ದಂತೆ ಜಾಗತಿಕ ಇಮಾಮ್ಸ್ ಕೌನ್ಸಿಲ್ ಸಂತಾತ ಸೂಚಿಸಿದೆ.
ಸೌದಿ ರಾಜಕುಮಾರನಿಗೆ ಏನಾಗಿತ್ತು?
ಇಂಗ್ಲೆಂಡ್‌ನ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅಪಘಾತ ಸಂಭವಿಸಿದಾಗ ರಾಜಕುಮಾರ ಅಲ್ವಲೀದ್ ಅವರಿಗೆ 15 ವರ್ಷ ವಯಸ್ಸು. ಈ ಅಪಘಾತದಲ್ಲಿ ಆತನ ಗಂಭೀರ ಗಾಯಗಳಾಗಿ ಅಪಾರ ರಕ್ತಸ್ರಾವ ಉಂಟಾಗಿತ್ತು. ಇದರಿಂದಾಗಿ ಅವರು ಸಂಪೂರ್ಣ ಕೋಮಾ ಸ್ಥಿತಿಗೆ ತಲುಪಿದರು. ನಂತರ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ನಗರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಸುಮಾರು 20 ವರ್ಷಗಳ ಕಾಲ ನಿರಂತರ ವೈದ್ಯರ ನಿಗಾದಲ್ಲಿದ್ದರು. ಇದಾದ ಬಳಿಕ ಅವರನ್ನು 'ದಿ ಸ್ಲೀಪಿಂಗ್ ಪ್ರಿನ್ಸ್' ಎಂದು ಕರೆಯಲಾಗುತ್ತಿತ್ತು. ಬೆರಳುಗಳನ್ನು ಎತ್ತುವಂತಹ ಕನಿಷ್ಠ ಚಲನೆಯನ್ನು ತೋರಿಸುವ ಸಾಂದರ್ಭಿಕ ದೃಶ್ಯಗಳು, ಅವರ ಸ್ಥಿತಿಯನ್ನು ಅನುಸರಿಸುತ್ತಿರುವವರಿಗೆ ಅಲ್ಪಾವಧಿಯ ಭರವಸೆಯ ಕ್ಷಣಗಳನ್ನು ನೀಡಿತು. ಅಮೇರಿಕನ್ ಮತ್ತು ಸ್ಪ್ಯಾನಿಷ್ ತಜ್ಞರಿಂದ ಚಿಕಿತ್ಸೆ ಪಡೆದರೂ, ಅವರು ಎಂದಿಗೂ ಪೂರ್ಣ ಪ್ರಜ್ಞೆಯನ್ನು ಮರಳಿ ಪಡೆಯಲಿಲ್ಲ. ಇನ್ನು ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅವರು ಕೋಮದಲ್ಲಿದ್ದ ತಮ್ಮ ಪುತ್ರನ ಜೀವ ಕಾಪಾಡಿಕೊಳ್ಳಲು ಸಕಲ ಪ್ರಯತ್ನಪಟ್ಟಿದ್ದರು.
ಈ ಸುದ್ದಿಯನ್ನೂ ಓದಿ: Donald Trump: ಸಾಲಾಗಿ ನಿಂತು ಕೂದಲನ್ನು ಬಿಚ್ಚಿಕೊಂಡು ಯುವತಿಯ ವಿಚಿತ್ರ ಡಾನ್ಸ್! ಟ್ರಂಪ್‌ಗೆ ಸೌದಿಯಲ್ಲಿ ಸಿಕ್ಕ ಸ್ವಾಗತ ಎಂಥದ್ದು ಗೊತ್ತಾ?
ಏಪ್ರಿಲ್ 1990 ರಲ್ಲಿ ಜನಿಸಿದ ಪ್ರಿನ್ಸ್ ಅಲ್ವಲೀದ್, ಪ್ರಿನ್ಸ್ ಖಲೀದ್ ಬಿನ್ ತಲಾಲ್ ಅಲ್ ಸೌದ್ ಅವರ ಹಿರಿಯ ಮಗ ಮತ್ತು ಬಿಲಿಯನೇರ್ ಉದ್ಯಮಿ ಪ್ರಿನ್ಸ್ ಅಲ್ವಲೀದ್ ಬಿನ್ ತಲಾಲ್ ಅವರ ಸೋದರಳಿಯ. ಜುಲೈ 20 ರ ಭಾನುವಾರದಂದು ರಿಯಾದ್‌ನ ಇಮಾಮ್ ತುರ್ಕಿ ಬಿನ್ ಅಬ್ದುಲ್ಲಾ ಮಸೀದಿಯಲ್ಲಿ ಅಸರ್ ಪ್ರಾರ್ಥನೆಯ ನಂತರ ಅಂತ್ಯಕ್ರಿಯೆಯ ಪ್ರಾರ್ಥನೆಗಳು ನಡೆಯಲಿವೆ.