ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ನಾಯಕರ ನಡುವೆ ಒಮ್ಮತ; ಶಾಂತಿಗೆ ಅಮೆರಿಕ ಕರೆ

ಇರಾನ್ ಜತೆಗಿನ ಸಂಘರ್ಷ ಮುಗಿದ ಬೆನ್ನಲ್ಲೇ ಇಸ್ರೇಲ್ ಸಿರಿಯಾದ ಮೇಲೂ ದಾಳಿ ನಡೆಸಿತ್ತು. ಅಲ್ಲಿನ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನ ಮತ್ತು ಸೇನಾ ಪ್ರಧಾನ ಕಚೇರಿ ಮೇಲೆ ವಾಯುದಾಳಿ ಮಾಡಿತ್ತು. ಸಿರಿಯಾದಲ್ಲಿರುವ ಡ್ರೂಜ್ ಸಮುದಾಯದ ರಕ್ಷಣೆಗಾಗಿ ಈ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿತ್ತು. ಇದೀಗ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮಕ್ಕೆ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ.

ಇರಾನ್‌–ಸಿರಿಯಾ ನಡುವೆ ಕದನ ವಿರಾಮ

ಸಾಂಧರ್ಬಿಕ ಚಿತ್ರ

Profile Sushmitha Jain Jul 19, 2025 2:07 PM

ಅಂಕಾರ: ಇಸ್ರೇಲ್ (Israel) ಮತ್ತು ಸಿರಿಯಾದ (Syria) ನಾಯಕರು ಕದನ ವಿರಾಮಕ್ಕೆ (Ceasefire) ಒಪ್ಪಿಗೆ ಸೂಚಿಸಿದ್ದಾರೆ ಎಂದು ಅಮೆರಿಕ ರಾಯಭಾರಿ ಟಾಮ್ ಬ್ಯಾರಕ್ ಶುಕ್ರವಾರ ಘೋಷಿಸಿದ್ದಾರೆ. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತು ಸಿರಿಯಾದ ನೂತನ ನಾಯಕ ಅಹ್ಮದ್ ಅಲ್-ಶರಾ (Ahmed al-Sharaa) ಈ ಒಪ್ಪಂದಕ್ಕೆ ಒಮ್ಮತ ಸೂಚಿಸಿದ್ದು, ಇದಕ್ಕೆ ಟರ್ಕಿ ಮತ್ತು ಜೋರ್ಡಾನ್‌ನ ಬೆಂಬಲವೂ ಇದೆ. ಯುದ್ಧ ಪೀಡಿತ ಸಿರಿಯಾದ ಎಲ್ಲ ಪಕ್ಷಗಳು ಶಸ್ತ್ರಾಸ್ತ್ರಗಳನ್ನು ಕೆಳಗಿಡಿ ಎಂದು ಬ್ಯಾರಕ್ ಮನವಿ ಮಾಡಿದ್ದಾರೆ.

ಹೌದು, ಇರಾನ್ ಜತೆಗಿನ ಸಂಘರ್ಷ ಮುಗಿದ ಬೆನ್ನಲ್ಲೇ, ಇಸ್ರೇಲ್ ಸಿರಿಯಾದ ಮೇಲೆ ದಾಳಿ ನಡೆಸಿತ್ತು. ಅಲ್ಲಿನ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಅಧ್ಯಕ್ಷರ ಭವನ ಮತ್ತು ಸೇನಾ ಪ್ರಧಾನ ಕಚೇರಿ ಮೇಲೆ ವಾಯುದಾಳಿ ನಡೆಸಿ, ಸಿರಿಯಾದಲ್ಲಿರುವ ಡ್ರೂಝ್ ಸಮುದಾಯದ ರಕ್ಷಣೆಗಾಗಿ ಈ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳಿಕೊಂಡಿತ್ತು. ಇದು ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದಲ್ಲದೆ ಇಸ್ರೇಲ್‌ ದಾಳಿಯ ಬಗ್ಗೆ ವರದಿ ಬಿತ್ತರಿಸುತ್ತಿದ್ದ ಟಿವಿ ನಿರೂಪಕಿಯೋರ್ವಳು, ಮಾಧ್ಯಮ ಕಟ್ಟಡದ ಬಳಿ ಬಾಂಬ್‌ ಬಿದ್ದ ಪರಿಣಾಮ ಲೈವ್‌ ಕಾರ್ಯಕ್ರಮವನ್ನು ಬಿಟ್ಟು ಹೊರ ಓಡಿದ ಘಟನೆ ನಡೆದಿತ್ತು. ಆದರೀಗ ಪರಿಸ್ಥಿತಿ ತಿಳಿಯಾಗಿದ್ದು, ಕದನ ವಿರಾಮಕ್ಕೆ ಎರಡು ರಾಷ್ಟ್ರಗಳು ಒಪ್ಪಿಕೊಂಡಿವೆ.

ಈ ಸುದ್ದಿಯನ್ನು ಓದಿ: Viral News: ಮಸೀದಿ ಆವರಣದಲ್ಲಿ ಇಲಿಗಳನ್ನು ತಂದು ಬಿಡುತ್ತಿದ್ದ ವ್ಯಕ್ತಿ; ಆಮೇಲೇನಾಯ್ತು ನೋಡಿ?

ಈ ಹಿನ್ನೆಲೆಯಲ್ಲಿ “ಡ್ರೂಝ್, ಬೆಡೌಯಿನ್ ಮತ್ತು ಸುನ್ನಿಗಳು ಶಸ್ತ್ರಾಸ್ತ್ರ ತೊರೆದು ಇತರ ಅಲ್ಪಸಂಖ್ಯಾತರೊಂದಿಗೆ ಶಾಂತಿ ಮತ್ತು ಸಮೃದ್ಧಿಯೊಂದಿಗೆ ಒಗ್ಗಟ್ಟಿನ ಸಿರಿಯನ್ ಗುರುತನ್ನು ನಿರ್ಮಿಸಬೇಕು” ಎಂದು ಎಕ್ಸ್‌ನಲ್ಲಿ ಬ್ಯಾರಕ್ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ಬುಧವಾರ ಡಮಾಸ್ಕಸ್‌ನಲ್ಲಿ ಸೇನಾ ಕೇಂದ್ರ ಸೇರಿ ದೊಡ್ಡ ಏರ್‌ ಸ್ಟ್ರೈಕ್‌ ನಡೆಸಿತ್ತು. ದಕ್ಷಿಣ ಸಿರಿಯಾದ ಸ್ವೀಡಾದಲ್ಲಿ ಡ್ರೂಝ್ ಸಮುದಾಯ ಮತ್ತು ಬೆಡೌಯಿನ್‌ಗಳ ನಡುವಿನ ಘರ್ಷಣೆಯಿಂದ ಡ್ರೂಝ್ ಸಮುದಾಯವನ್ನು ರಕ್ಷಿಸಲು ಈ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಹೇಳಿತ್ತು.

ಇಸ್ರೇಲ್ ತನ್ನ ಐತಿಹಾಸಿಕ ವೈರಿಯಾದ ಸಿರಿಯಾವನ್ನು ದುರ್ಬಲಗೊಳಿಸಲು ದಾಳಿಗಳನ್ನು ತೀವ್ರಗೊಳಿಸಿದೆ ಎಂದು ಕೆಲವು ರಾಜತಾಂತ್ರಿಕರು ಮತ್ತು ವಿಶ್ಲೇಷಕರು ಭಾವಿಸಿದ್ದಾರೆ. ಸಿರಿಯನ್ ಸರ್ಕಾರಿ ಪಡೆಗಳು ಸ್ವೀಡಾದಿಂದ ಹಿಂದೆ ಸರಿಯುವ ಒಪ್ಪಂದವನ್ನು ಅಮೆರಿಕ ಘೋಷಿಸಿತು. ಇಸ್ರೇಲ್‌ನ ಏರ್‌ ಸ್ಟ್ರೈಕ್‌ಗಳನ್ನು ಬೆಂಬಲಿಸುವುದಿಲ್ಲ ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ಸ್ಪಷ್ಟಪಡಿಸಿತು. ಆದರೂ ಇಸ್ರೇಲ್ ಅಮೆರಿಕದ ರಾಜತಾಂತ್ರಿಕ ಮತ್ತು ಸೈನ್ಯದ ಬೆಂಬಲವನ್ನು ಅವಲಂಬಿಸಿದೆ.

ಈ ಕದನ ವಿರಾಮ ಒಪ್ಪಂದವು ಸಿರಿಯಾದಲ್ಲಿ ಶಾಂತಿಯ ಸಾಧ್ಯತೆಯನ್ನು ತೆರೆದಿದ್ದು, ಎಲ್ಲ ಧರ್ಮೀಯ ಗುಂಪುಗಳ ಒಗ್ಗಟ್ಟಿಗೆ ಒತ್ತು ನೀಡಿವೆ. ಆದರೆ, ಈ ಶಾಂತಿ ಸ್ಥಾಪನೆಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಮುಖ್ಯವಾಗಿದೆ.