About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಶಾ, ಮೋದಿ ರಾಜ್ಯಕ್ಕೆ ಬಂದು ಮನೆ ಮಾಡಿದ್ರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲ

ಟ್ವಿಟ್ಟರ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳ ಜಟಾಪಟಿ....!

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದ್ರೂ ಈ ಬಾರಿಯ ಲೋಕಸಭಾ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ, ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ ಟ್ಟೀಟ್ ಮಾಡಿದ್ದಾರೆ.

ಆಗ ನಿಮ್ಮ ಪಕ್ಷಕ್ಕೆ ಬಹುಮತ ಇತ್ತಾ ಗೌಡ್ರೆ?: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಕೇಂದ್ರ ಸಚಿವರನ್ನು ಪ್ರಶ್ನೆ ಮಾಡುವ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಕರಾವಳಿ ಯಾಕೆ ಇಡೀ ಕರ್ನಾಟಕದ ಜನರಿಗೆ ತಮ್ಮ ಆಯ್ಕೆ ಗೊತ್ತಿದೆ.. ಎಂದು ಕರೆಕ್ಟಾಗಿ ಹೇಳಿದ್ದೀರಿ. ನೀವು ಉಡುಪಿ -ಪುತ್ತೂರು ಬಿಟ್ಟು ಬೆಂಗಳೂರಿಗೆ ಬಂದು ಸೇರಿಕೊಂಡಿದ್ದು ಕರಾವಳಿಯವರಿಗೆ ಖಂಡಿತ ಗೊತ್ತಿದೆ. ಜೆಡಿಎಸ್ ಜತೆ ಸೇರ್ಕೊಂಡು ಸರಕಾರ ರಚನೆ ಮಾಡಿದಾಗ ನಿಮ್ಮ ಪಕ್ಷಕ್ಕೆ ಬಹುಮತ ಇತ್ತಾ ಗೌಡ್ರೆ ಅಂತ ಪ್ರಶ್ನಿಸಿದ್ದಾರೆ.

ನೀವು ಬಾದಾಮಿಯಲ್ಲಿ ಮನೆ ಮಾಡಿಲ್ವಾ?: ಸಿದ್ದು ಟ್ವೀಟ್‌ಗೆ ರೀಟ್ವೀಟ್ ಮಾಡಿದ ಡಿವಿಎಸ್, ಅದೇನೂ ಮನೆ ಮಾಡಿದ್ರೂ ಅಂದ್ರಲ್ಲ ನೀವು ಚಾಮುಂಡೇಶ್ವರಿ ಬಿಟ್ಟು ಬಾದಾಮಿಯಲ್ಲಿ ಮನೆ ಮಾಡಿಲ್ವಾ? ಯಾರಾದ್ರೂ ಪ್ರಶ್ನೆ ಮಾಡಿದ್ರಾ? ಕರ್ನಾಟಕದ ಗುತ್ತಿಗೆ ಇನ್ನು ಮತದಾರರಲ್ಲೇ ಇದೆ. ಅದು ನಿಮ್ಮ ಮೈತ್ರಿ ಸರಕಾರಕ್ಕೆ ಯಾರೂ ಬರೆದು ಕೊಟ್ಟಿಲ್ಲ. ಚುನಾವಣೆಯನ್ನು ಎದುರಿಸೋಣ. ಜನತಾ ನ್ಯಾಯಾಲಯವೇ ದೊಡ್ಡ ಪ್ರಯೋಗ ಶಾಲೆ ಎಂದು ಟೀಕಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close