About Us Advertise with us Be a Reporter E-Paper

Breaking Newsಕ್ರೀಡೆಪ್ರಚಲಿತವಿದೇಶ
Trending

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಂಗ್ಲೆಂಡ್ ಮಹಿಳೆಯರ ಕ್ರಿಕೆಟ್ ತಂಡದ ಮಾಜಿ ಬೌಲರ್

ಲಂಡನ್: ಇಂಗ್ಲೆಂಡ್‍ ಮಹಿಳೆಯರ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿ ಇಸಾ ಗುಹಾ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಕಾರ್ನ್ ವಾಲ್‍ನಲ್ಲಿರುವ ಕೇಬ್ರಿಸ್ ಬೇನಲ್ಲಿ ಥಾಮಸ್ ಅವರೊಂದಿಗೆ ಸಪ್ತಪದಿ ತುಳಿದರು.

ಭಾರತೀಯ ಮೂಲದ ಇಸಾ ಗುಹಾ ಅವರು ಇಂಗ್ಲೆಂಡ್ ನಲ್ಲಿ ವಾಸಿಸುತ್ತಿದ್ದಾರೆ. ಇವರು ಇಂಗ್ಲೆಂಡ್ ಪರವಾಗಿ 8 ಕ್ರಿಕೆಟ್ ಟೆಸ್ಟ್, 83 ಏಕದಿನ ಪಂದ್ಯ ಹಾಗೂ 22 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಇದೀಗ ಇವರ ವಿವಾಹೋತ್ಸವದ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.

2001ರಲ್ಲಿ ತಮ್ಮ 16ನೇ ವಯಸ್ಸಿಗೆ ಏಕದಿನ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಇಸಾ ಗುಹಾ, ವಿಶ್ವದ ನಂ.1 ಬೌಲರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. 2009ರಲ್ಲಿ ನಡೆದಿದ್ದ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಟ್ರೋಫಿ ಗೆದ್ದಿತ್ತು. ಇದರಲ್ಲಿ ಇಸಾ ಅವರ ಪಾತ್ರವೂ ಬಹಳ ಮುಖ್ಯವಾದುದಾಗಿತ್ತು. 2012ರಲ್ಲಿ ಇಸಾ ಅವರು ಕ್ರಿಕೆಟ್ ಪಂದ್ಯದಿಂದ ನಿವೃತ್ತಿ ಪಡೆದಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close