About Us Advertise with us Be a Reporter E-Paper

Breaking Newsರಾಜ್ಯ

ಕಾರ್ಯಕರ್ತರ ಕಡೆಗಣನೆಯಿಂದ ಕಮಲಕ್ಕೆ ಸೋಲು: ಮಾಜಿ ಸಚಿವ ಸೊಗಡು ಶಿವಣ್ಣ ಆರೋಪ

ತುಮಕೂರು: ಪಂಚ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿದ್ದೇ ಅಭ್ಯರ್ಥಿಗಳ ಸೋಲಿಗೆ ಕಾರಣ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉಪಚುನಾವಣೆ ಬಹಳ ಬೇಸರ ತಂದಿದ್ದು, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಹಲವರ ಸಲಹೆ ಜೊತೆಗೆ ಎಲ್ಲರೂ ಒಗ್ಗೂಡಿ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಬೇಕಿತ್ತು. ಪಕ್ಷವನ್ನು ವಲಸಿಗರ ಕೈಗೆ ಗುತ್ತಿಗೆ ಕೊಡದೆ ಮೂಲ ಕಾರ್ಯಕರ್ತರಿಗೆ ಕೊಟ್ಟಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದರು.

ವಲಸಿಗರಿಗೆ ಮಣೆ ಹಾಕದೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಟಿಕೇಟ್ ನೀಡಬೇಕಿತ್ತು. ಈ ಉಪಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಸರಿಯಾಗಿ ಬಳಿಕೊಂಡಿಲ್ಲ ಎಂಬ ನೋವು ನನಗಿದೆ. ಅದೇ ರೀತಿ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ಭಾನುಪ್ರಕಾಶ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಪ್ರೀತಿ, ವಿಶ್ವಾಸ ನಾಯಕತ್ವ ವಹಿಸಿಕೊಂಡವರಿಗೆ ಇರಬೇಕು, ಇದು ಹೀಗೆ ಮುಂದುವರೆದರೆ ಮುಂದಿನ ಲೋಕಸಭಾ ಚುನಾವಣೆಗೆ ಹಿನ್ನಡೆಯಾಗಬಹುದು ಎಂದು ಎಚ್ಚರಿಸಿದರು.

ನಮ್ಮ ಪಕ್ಷ ಕುಟುಂಬ ಪಕ್ಷವಲ್ಲ, ಕಾರ್ಯಕರ್ತರ ಪಕ್ಷ, ಕಾರ್ಯಕರ್ತರೇ ನಮ್ಮ ನಾಯಕರು, ಈ ಉಪಚುನಾವಣೆ ಸೋಲಿನಿಂದ ನಮ್ಮ ಮತದಾರರ ಶಕ್ತಿ ಕುಗ್ಗಿಲ್ಲ, ಶಕ್ತಿ ವಿರಾಟವಾಗಿದೆ. ಹಿಂದೂಗಳ ಪರ, ನಾಗರೀಕರ ಪರವಾಗಿರುವ ನಾವು ಚಾಮರಾಜನಗರದಿಂದ-ಬೀದರ್ ವರೆಗೂ 2011-12ರಲ್ಲಿ ಆನ್‌ಲೈನ್‌ನಲ್ಲಿ ಸುಮಾರು 1 ಕೋಟಿಗೂ ಮೀರಿ ಪಕ್ಷಕ್ಕೆ ಕಾರ್ಯಕರ್ತರು ನೊಂದಾಯಿಸಿಕೊಂಡಿದ್ದಾರೆ. ಕೋಲಾರದಿಂದ-ಕಾರವಾರದರೆಗೂ ಸುಮಾರು 60 ಬೂತ್‌ಗಳಿಗೆ 6 ಲಕ್ಷ ಜನರು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಜಯಸಿಂಹರಾವ್, ಕೆ.ಪಿ.ಮಹೇಶ್, ಶಾಂತರಾಜು, ಬನಶಂಕರಿಬಾಬು, ಕೆ.ಹರೀಶ್, ಊರುಕೆರೆನಂಜುಂಡಪ್ಪ, ನವೀನ್, ಮದನ್‌ಸಿಂಗ್ ಸೇರಿದಂತೆ ಹಲವರು ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close