About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ದೇಶದ ಎಲ್ಲ ಸಮಸ್ಯೆಗೂ ನೋಟ್ಯಂತರವೇ ಕಾರಣ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ದೆಹಲಿ: ನೋಟ್ಯಂತರಗೊಂಡು  ಇಂದಿಗೆ ಎರಡು ವರ್ಷವಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಡಾ.‌ ಮನಮೋಹನ್ ಸಿಂಗ್,  ನೋಟ್ಯಂತರ ಕ್ರಮವನ್ನು ಕಟುವಾಗಿ ಟೀಕಿಸಿದ್ದಾರೆ. ”ನೋಟ್ಯಂತರ ಕ್ರಮದ ದುಷ್ಪರಿಣಾಮದಿಂದ ದೇಶದ ಆರ್ಥಿಕತೆಯ ಮೇಲೆ ಉಂಟಾಗಿರುವ ಗಾಯದ ಕಲೆಗಳು ಕಾಲ ಕಳೆದಂತೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ” ಎಂದು ಹೇಳಿದ್ದಾರೆ.

ನೋಟ್ಯಂತರ ಪ್ರತಿಯೊಬ್ಬರನ್ನೂ ಕಾಡಿದೆ. ನೋಟ್ಯಂತರ ಅರ್ಥ ವ್ಯವಸ್ಥೆ ಸುಧಾರಣೆಗೆ ಮದ್ದು ಎಂದು ಬಿಂಬಿಸಲಾಗಿತ್ತು. ನೋಟ್ಯಂತರ ಅವಿವೇಕದ ಕ್ರಮದಿಂದ ನಮ್ಮ ಆರ್ಥಿಕ ಮೇಲೆ ಹೇಗೆ ದೀರ್ಘಾವಧಿಯಲ್ಲಿ ದೇಶದ ಅಭಿವೃದ್ಧಿಯ ವಿನಾಶಕ್ಕೆ ಕಾರಣವಾಗುತ್ತವೆ ಎಂಬುದನ್ನು ಸದಾ ಕಾಲ ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ. ನೋಟ್ಯಂತರ ಕ್ರಮವು ಭಾರತೀಯ ಆರ್ಥಿಕತೆಯ ಮೇಲೆ ಮತ್ತು ಸಮಗ್ರ ದೇಶದ ಮೇಲೆ ಮಾಡಿರುವ ವಿನಾಶದ ದುಷ್ಪರಿಣಾಮ ಈಗ ಸ್ಪಷ್ಟವಾಗಿ ಕಂಡು ಬರುತ್ತಿದೆ…”

ಅಲ್ಲದೇ ಜಿಡಿಪಿ ಕುಸಿತಕ್ಕೆ ನೋಟ್ಯಂತರವೇ  ಕಾರಣ. ಆ ಶಾಕ್‌ನಿಂದ ಇಂದಿಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಸುಧಾರಿಸಿಕೊಳ್ಳಲು ಆಗಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚುವುದಕ್ಕೂ ನೋಟ್ಯಂತರವೇ ಕಾರಣ. ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳಕ್ಕೂ ನೋಟ್ಯಂತರವೇ ಕಾರಣ ಎಂದು ಡಾ. ಮನಮೋಹನ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟ್ಯಂತರ ಮಾಡಿದ್ದರು. ಆ ವೇಳೆ ಹಣಕ್ಕಾಗಿ ಜನರು ಎಟಿಎಂ, ಬ್ಯಾಂಕ್​ಗಳ ಮುಂದೆ ಸರತಿ ಸಾಲಿನಲ್ಲಿ ನಿಂತು, ಹಣ ಪಡೆದುಕೊಳ್ಳಬೇಕಾಯಿತು. ಆನಂತರ ಕೇಂದ್ರ ಸರ್ಕಾರ 200, 500 ಮತ್ತು 2000 ಮುಖಬೆಲೆಯ ಹೊಸ ನೋಟನ್ನು ಚಲಾವಣೆಗೆ ತಂದಿತ್ತು. ನೋಟ್ಯಂತರದಿಂದ ಒಂಭತ್ತು ಲಕ್ಷ ಕೋಟಿ ನಷ್ಟವಾಗಿದೆ ಎಂದು ಆರ್​ಬಿಐ ಗೌವರ್ನರ್​ ಊರ್ಜಿತ್​ ಪಟೇಲ್​ ಅವರು ಈಚೆಗಷ್ಟೇ ಹೇಳಿದ್ದರು. ಇದೀಗ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ಮತ್ತೆ ನೋಟ್ಯಂತರ ಕ್ರಮವನ್ನು ಉಗ್ರವಾಗಿ ಟೀಕಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close