About Us Advertise with us Be a Reporter E-Paper

Breaking NewsUncategorizedದೇಶಪ್ರಚಲಿತ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರ ಪ್ರೊಟೆಸ್ಟ್

ದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದಿನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶದ ವಿವಿಧ ಭಾಗಗಳ ರೈತರಿಂದ ಪ್ರತಿಭಟನೆ ನಡೆಯುತ್ತಿದೆ. ರಾಮ್‍ಲೀಲಾ ಮೈದಾನದಿಂದ ಪಾರ್ಲಿಮೆಂಟ್ ವರೆಗೆ ರೈತರ ರ್ಯಾಲಿ ಆರಂಭವಾಗಿದೆ.

ಫೈಲ್ ಫೊಟೊ

ಈಗಾಗಲೇ ದೆಹಲಿ ತಲುಪಿರುವ ಸಾವಿರಾರು ರೈತರು ಅಖಿಲ ಭಾರತ ಕಿಸಾನ್ ಸಭಾ, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘ, ಭಾರತೀಯ ಟ್ರೇಡ್ ಯೂನಿಯನ್ ಕೇಂದ್ರಗಳು ಸೇರಿ ಮಜ್ದೂರ್ ಕಿಸಾನ್ ಸಂಘರ್ಷ ರ್ಯಾಲಿ ಎಂಬ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಮಹಾರಾಷ್ಟ್ರದಿಂದ ಸುಮಾರು 10,000 ರೈತರು ದೆಹಲಿ ತಲುಪಿದ್ದಾರೆ. ಈ ವರ್ಷ ಪ್ರಾರಂಭದಲ್ಲಿ ಎಐಕೆಎಸ್ ಘಟಕ ಸಾಲಮನ್ನಾ ಹಾಗೂ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕೋರಿ ನಾಸಿಕ್‍ನಿಂದ ಮುಂಬೈವರೆಗೆ ಸುದೀರ್ಘ ಮೆರವಣಿಗೆ ನಡೆಸಿತ್ತು. ನಾಸಿಕ್‍ನ ರೈತ ಮಹಿಳೆ ಸುರೇಖಾ ಬೆನ್, ‘ನರೇಂದ್ರ ಮೋದಿ ಸರಕಾರದ ವಿರುದ್ಧ ನಮ್ಮ ಪ್ರತಿಭಟನೆ’ ಎಂದು ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close