About Us Advertise with us Be a Reporter E-Paper

ಅಂಕಣಗಳು

ಬದುಕಿನ ದಿಕ್ಕು ಬದಲಿಸುವ ನಾಲ್ಕು ಚೀಟಿಗಳು!

ಬದುಕಿನ ದಿಕ್ಕನ್ನು ಬದಲಿಸುವ ನಾಲ್ಕು ಚೀಟಿಗಳ ಪ್ರಸ್ತಾಪವನ್ನು ಆರ್ಥರ್ ಗೋರ್ಡನ್ ಎಂಬ ಪಾಶ್ಚಿಮಾತ್ಯ ಚಿಂತಕರು ತಮ್ಮ ‘ದಿ ಟರ್ನ್ ಆ- ದಿ ಟೈಡ್’ ಎಂಬ ಸಣ್ಣ, ಅರ್ಥಪೂರ್ಣ ಕತೆಯಲ್ಲಿ ಬರೆದಿzರೆ. ಸಾರ್ಥಕ ಬದುಕಿನ ಉತ್ತುಂಗದಲ್ಲಿದ್ದ ಆರ್ಥರ್ ಅವರಿಗೆ, ಒಮ್ಮೆ ಏಕೋ ಏನೋ, ಇದ್ದಕ್ಕಿದ್ದಂತೆ ತಮ್ಮ ಬದುಕು ನೀರಸವಾಗುತ್ತಿದೆ ಎಂದೆನಿಸಹತ್ತಿತಂತೆ. ಉತ್ಸಾಹ ಉಡುಗಿತು. ಪರಿಸ್ಥಿತಿ ಬಿಗಡಾಯಿಸುತ್ತಲೇ ಹೋಯಿತು. ತಮ್ಮ ವೈದ್ಯರನ್ನು ಕಂಡು ಪರಿಸ್ಥಿತಿಯನ್ನು ವಿವರಿಸಿದರು. ಎಲ್ಲ ಕೇಳಿದ ವೈದ್ಯರು ನನ್ನ ಸಲಹೆ ವಿಚಿತ್ರವೆನಿಸಿದರೂ ಇದನ್ನು ಅನುಸರಿಸಿ. -ಲಿತಾಂಶದ ಬಗ್ಗೆ ನಾನು ಭರವಸೆಯನ್ನು ನೀಡುತ್ತೇನೆ ಎಂದು ಹೇಳಿ ನಾಲ್ಕು ಮಡಿಸಿದ ಚೀಟಿಗಳನ್ನು ಕೊಟ್ಟು ನಿಮಗೆ ಪ್ರಿಯವಾದ ಸ್ಥಳಕ್ಕೆ ಹೋಗಿ ಇಡೀ ದಿನ ಏಕಾಂತದಲ್ಲಿರಿ. ಯಾರೊಂದಿಗೂ ಮಾತನಾಡಬಾರದು, ಏನನ್ನೂ ಓದಬಾರದು. ನಾಲ್ಕು ಚೀಟಿಗಳನ್ನು ಪ್ರತಿ ಮೂರು ಗಂಟೆಗಳೊಂದರಂತೆ ತೆಗೆದು ಓದಬೇಕು ಎಂದು ಹೇಳಿಕಳುಹಿಸಿದರು.

ಆರ್ಥರ್ ಮರುದಿನ ಅವರಿಗಿಷ್ಟವಾದ ಸಮುದ್ರತೀರಕ್ಕೆ ಹೋಗಿ ಏಕಾಂತದಲ್ಲಿ ಕುಳಿತರು. ಚಹಾ ಮತ್ತು ಊಟ ತೆಗೆದುಕೊಂಡು ಹೋಗಿದ್ದರು. ಬೆಳಿಗ್ಗೆ ಒಂಬತ್ತು ಗಂಟೆಗೆ ಒಂದನೆಯ ಚೀಟಿ ತೆಗೆದು ನೋಡಿದರು. ಅದರಲ್ಲಿ ‘ಗಮನಕೊಟ್ಟು ಕೇಳಿ’ ಎಂದಷ್ಟೇ ಬರೆದಿತ್ತು. ಏನು ಕೇಳುವುದೆಂದು ಗೊತ್ತಾಗಲಿಲ್ಲ. ಸುಮ್ಮನೆ ಕುಳಿತು ಕೇಳತೊಡಗಿದರು. ಮೊದಮೊದಲು ಭೋರ್ಗರೆಯುತ್ತಿರುವ ಸಮುದ್ರದ ಅಲೆಗಳ ಶಬ್ದ, ನಂತರ ಸಮುದ್ರ ಪಕ್ಷಿಗಳ ಕಲರವ ಕೇಳತೊಡಗಿತು. ಸಮುದ್ರದೊಳಗಿನ ಶಬ್ದಗಳನ್ನು ಊಹಿಸಕೊಳ್ಳತೊಡಗಿದರು. ಹಕ್ಕಿಗಳ ಕಲರವದ ಹಿಂದೆಯಿದ್ದ ಜೀವನೋತ್ಸಾಹವನ್ನು ಗಮನಿಸಿದರು. ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಾ ಗಂಭೀರವಾದ ಆನಂದ ಲೋಕವನ್ನೇ ಪ್ರವೇಶಿಸಿದರು. ಮಧ್ಯಾಹ್ನ ಹನ್ನೆರಡು ಗಂಟೆಗೆ ಎರಡನೆಯ ಚೀಟಿಯನ್ನು ತೆಗೆದರು. ಅದರಲ್ಲಿ ‘ಗತ ಕಾಲವನ್ನು ಮುಟ್ಟಲು ಪ್ರಯತ್ನಿಸಿ’ ಎಂದಿತ್ತು. ಅವರು ತಮ್ಮ ಬದುಕಿನ ಮಧ್ಯವಯಸ್ಸಿನ, ಯೌವನದ, ಬಾಲ್ಯದ ದಿನಗಳನ್ನು ಯೋಚಿಸುತ್ತಾ ಹೋದಂತೆ ಒಂದು ರೀತಿಯ ಪ್ರಶಾಂತತೆ ಅವರನ್ನು ಆವರಿಸಿತು. ಮಧ್ಯಾಹ್ನ ಮೂರು ಗಂಟೆಗೆ ತೆಗೆದ ಮೂರನೆಯ ಚೀಟಿಯಲ್ಲಿ ‘ನೀವು ಬದುಕಿನಿಂದ ಏನನ್ನು ಮತ್ತು ಏಕೆ ಪಡೆಯಲು ಬಯಸುತ್ತೀರೆಂದು ಯೋಚಿಸಿ’ ಎಂದಿತ್ತು. ಅವರು ಆರ್ಥಿಕ ಸಂಪತ್ತು ಜೀವನದ ಭದ್ರತೆ, ಕೀರ್ತಿ, ಸನ್ಮಾನಗಳ ಬಗ್ಗೆ ಯೋಚಿಸಿದರು. ಇವೆಲ್ಲವನ್ನು ಈಗಾಗಲೇ ಸಾಕಷ್ಟು ಗಳಿಸಿರುವ ತಮ್ಮ ಬದುಕು ಸಾರ್ಥಕವಾಗಿದೆಯೇ ಎಂದು ಯೋಚಿಸಿದರು.

ತಾವು ಇದುವರೆವಿಗೂ ಗಳಿಸಿರುವುದನ್ನು ಒಬ್ಬ ಬ್ಯಾಂಕ್ ಅಽಕಾರಿ ಅಥವಾ ಬಸ್ ಮಾಲೀಕ ಅಥವ ಯಾರಾದರೂ ಗಳಿಸಬಹುದು. ಇದರಲ್ಲಿ ನನ್ನದೇನು ವಿಶೇಷ ಎನಿಸಿತು. ಇದೆಲ್ಲದರಾಚೆ ಮತ್ತೇನೋ ಇರಬೇಕು. ಅದಕ್ಕೇಕೆ ಪ್ರಯತ್ನಿಸಬಾರದು ಎಂದೆನಿಸಿತು.

ಸಂಜೆ ಆರು ಗಂಟೆಗೆ ತೆಗೆದ ಕೊನೆಯ ಚೀಟಿಯಲ್ಲಿ ‘ನಿಮಗಿರುವ ಚಿಂತೆಗಳನ್ನೆಲ್ಲ ಮರಳಿನ ಮೇಲೆ ಬರೆಯಿರಿ’ ಎಂದಿತ್ತು. ಅವರು ಒಂದು ಕಡ್ಡಿಯಿಂದ ಒz ಮರಳಿನ ಮೇಲೆ ತಮ್ಮ ಆತಂಕಗಳನ್ನೆಲ್ಲ ಬರೆದರು. ಸ್ವಲ್ಪ ಹೊತ್ತಿಗೆ ಸಮುದ್ರದ ಅಲೆ ಬಂದು ಅಪ್ಪಳಿಸಿದಾಗ ಇವರ ಬರವಣಿಗೆ ಅಳಿಸಿಹೋಯಿತು. ಆರ್ಥರ್ ಅವರಿಗೆ ತಮ್ಮ ಆತಂಕಗಳೆಲ್ಲ ಅಳಿಸಿಹೋಗಿದ್ದನ್ನು ಕಂಡು ನಗು ಬಂದಿತು. ಮುಂಜಾವಿನಿಂದ ಸಂಜೆಯವರೆಗೂ ತಾವು ಏಕಾಂತದಲ್ಲಿ ಕಳೆದ ಗಂಟೆಗಳ ಅರಿವುಂಟಾಯಿತು. ಅನುಭವಿಸಿದ ನಿರಾತಂಕತೆಯ ಅರಿವು ಉಂಟಾಯಿತು. ಎದ್ದು ನಿಧಾನವಾಗಿ ಮನೆಗೆ ಹೊರಟಾಗ ತಾವು ಗಳಿಸಿದ ಅನುಭವ ಪದಗಳಲ್ಲಿ ಬರೆದಿಡಲು ಅಸಾಧ್ಯವೆನಿಸಿತು. ಆದರೆ ಅವರ ಆತಂಕಗಳೆಲ್ಲ ದೂರವಾಗಿದ್ದವು. ಮನೆಗೆ ಮರಳಿದಾಗ ಅವರು ಬೇರೆಯೇ ಮನುಷ್ಯರಾಗಿದ್ದರು.

ನಾವೀಗ ಆರ್ಥರ್ ಅವರಿಗೆ ವಂದಿಸೋಣ. ಸಾಧ್ಯವಿದ್ದರೆ ನಾವೂ ಒಮ್ಮೆ ಈ ಪ್ರಯೋಗ ಮಾಡಿನೋಡೋಣ. ನಮ್ಮ ಬದುಕಿನ ‘ಟೈಡ್ಸ್ ಕೂಡ ಟರ್ನ್’ ಆಗಬಹುದೇ ಎಂಬುದನ್ನು ನೋಡೋಣ!

Tags

Related Articles

Leave a Reply

Your email address will not be published. Required fields are marked *

Language
Close