Breaking Newsದೇಶಪ್ರಚಲಿತ
ರಾಹುಲ್ ಆರೋಪಕ್ಕೆ ಫ್ರಾನ್ಸ್ ಸರಕಾರ ತಿರುಗೇಟು!
ರಫೇಲ್ ಒಪ್ಪಂದ ಬಹಿರಂಗ ಮಾಡುವಂತಿಲ್ಲ : ಫ್ರಾನ್ಸ್

ದೆಹಲಿ: ರಫೇಲ್ ಒಪ್ಪಂದದಲ್ಲಿ ಭಾರೀ ಹಗರಣ ನಡೆದಿದ್ದು, ಒಪ್ಪಂದದ ನಿಯಯಮಗಳನ್ನು ಬಹಿರಂಗ ಪಡಿಸಬೇಕು ಎಂದು ಲೋಕಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಉತ್ತರಿಸಿದ ಫ್ರಾನ್ಸ್ ಸರಕಾರ, ಒಪ್ಪಂದದ ನಿಯಮಗಳು ಗೌಪ್ಯವಾಗಿರುವುದರಿಂದ ಅದನ್ನು ಬಹಿರಂಗ ಪಡಿಸುವಂತಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಆರೋಪಕ್ಕೆ ಉತ್ತರಿಸಿದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್, ಭಾರತ ಹಾಗೂ ಫ್ರಾನ್ಸ್ ನಡುವೆ ನಡೆದ ರಫೇಲ್ ವಿಮಾನ ಖರೀದಿ ಒಪ್ಪಂದಲ್ಲಿ ಯಾವುದೇ ರಹಸ್ಯಗಳಿಲ್ಲ. ಫ್ರಾನ್ಸ್ನ ಯೂರೋಪ್ ಸಚಿವಾಲಯ ಹಾಗೂ ಭಾರತದ ವಿದೇಶಾಂಗ ಸಚಿವಾಲಯ ಒಪ್ಪಂದಕ್ಕೆ ಸಹಿ ಮಾಡಿವೆ. ಅದರ ವಿಷಯಗಳು ಗೌಪ್ಯವಾಗಿರಬೇಕಾದುದರಿಂದ ಮಾಹಿತಿನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ನಾವು ಭಾರತದ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾತನಾಡಿದ್ದನ್ನು ಗಮನಿಸಿದ್ದು, 2008ರಲ್ಲಿ ಭಾರತ ಹಾಗೂ ಫ್ರಾನ್ಸ್ ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಎರಡೂ ರಾಷ್ಟ್ರಗಳು ಭದ್ರತಾ ದೃಷ್ಟಿಯಿಂದ ಒಪ್ಪಂದದ ವಿಷಯಗಳನ್ನು ಬಹಿರಂಗ ಪಡಿಸುವಂತಿಲ್ಲ. ಒಂದು ವೇಳೆ ಬಹಿರಂಗಗೊಂಡರೆ, ರಕ್ಷಣಾ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಫ್ರಾನ್ಸ್ ವಕ್ತಾರರೊಬ್ಬರು ಹೇಳಿದ್ದಾರೆ.