About Us Advertise with us Be a Reporter E-Paper

ಅಂಕಣಗಳು

ಉಚಿತ ಬಸ್ ಪಾಸ್ ವಿತರಣೆ ಸೂಕ್ತ

ರಾಜ್ಯದ ಸಮ್ಮಿಶ್ರ ಸರಕಾರ ರೈತರ ಸಾಲ ಮನ್ನಾ ಮಾಡಿದ್ದಾಯ್ತು. ಸಮಾಜದ ವಿವಿಧ ವರ್ಗಗಳ ಶ್ರೇಯಸ್ಸಿಗೆಂದು ಹಲವಾರು ಕಾರ್ಯ್ರಮಗಳನ್ನು ನೀಡಿದೆ. ಈ ಮೂಲಕ ಚುನಾವಣೆ ಪ್ರಣಾಳಿೆಯಲ್ಲಿ ಘೋಷಣೆ ಮಾಡಿದಂತೆ ನಡೆದುಕೊಂಡಿದೆ. ಈ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಕಾರದ ಅವಧಿಯಲ್ಲಿ ಘೋಷಣೆ ಮಾಡಿದ್ದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಯೂ ಒಂದಾಗಿತ್ತು. ಆದರೆ, ಈಗ ವಿದ್ಯಾರ್ಥಿ ಸಮೂಹಕ್ಕೆ ಉಚಿತ ಬಸ್ ಪಾಸ್ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಪ್ರತಿಭಟನಾ ನಿರತ ವಿದ್ಯಾರ್ಥಿ ಸಮೂಹವನ್ನು ಮತ್ತಷ್ಟು ಕೆರಳಿಸಿದೆ. ಹೌದು, ಪ್ರತಿಯೊಂದು ರಿಯಾಯ್ತಿಗಳು, ಸಬ್ಸಿಡಿ ಕೊಡುತ್ತಾ ಹೋದರೆ ಸರಕಾರದ ಬೊಕ್ಕಸಕ್ಕೆ ಭಾರೀ ಹೊರೆಯಾಗಲಿದೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಸಂಪನ್ಮೂಲ ಕ್ರೋಡೀಕರಿಸುವುದು ಸರಕಾರಕ್ಕೆ ಕಷ್ಟಕರವಾಗಿ ಪರಿಣಮಿಸಿದೆ. ಹಾಗಂತ ವಿದ್ಯಾರ್ಥಿ ಸಮೂಹವನ್ನು ಕಡೆಗಣಿಸಲು ಒಂದು ವೇಳೆ ಸರಕಾರ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಹೇಳಿಕೆ ಕೊಡದಿದ್ದರೆ ವಿದ್ಯಾರ್ಥಿಗಳು ತಮ್ಮದೇ ಹಣ ಹಾಕಿ ಮೈಲುಗಟ್ಟಲೆ ಬಸ್‌ನಲ್ಲಿ ಪ್ರಯಾಣ ಮಾಡಿ ವ್ಯಾಸಂಗ ಮಾಡುತ್ತಿದ್ದರು. ಆದರೆ, ಸರಕಾರ ಭರವಸೆ ನೀಡಿದ್ದರಿಂದಲೇ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್‌ಗೆ ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳು ದೇಶದ ಶಕ್ತಿ. ಇವರ ವ್ಯಾಸಂಗಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ಪ್ರತಿ ಸರಕಾರದ ಜವಾಬ್ದಾರಿಯಾಗಿರುತ್ತದೆ. ಉಚಿತವಾಗಿ ಬಸ್ ಪಾಸ್ ನೀಡಿದರೆ ಸುಮಾರು 19.60 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇದರಿಂದ ಸರಕಾರಕ್ಕೆ 600 ರಿಂದ 800 ಕೋಟಿ ರುಪಾಯಿ ಹೆಚ್ಚುವರಿ ಹೊರೆ ಆಗುತ್ತದೆ ಎಂಬ ಕಾರಣಕ್ಕೆ ಉಚಿತ ಬಸ್ ಪಾಸ್ ನೀಡಲು ಹಿಂದೇಟು ಹಾಕಲಾಗುತ್ತದೆ. ಇಷ್ಟೊಂದು ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದಾದರೆ ಸರಕಾರ ಉಳ್ಳವರ ಜೇಬಿಗೆ ಇನ್ನೊಂದಿಷ್ಟು ತೆರಿಗೆ ಹೊರೆಯನ್ನಾಗಲೀ ಅಥವಾ ಆರೋಗ್ಯಕ್ಕೆ ಹಾನಿಕರ ಎನಿಸಿರುವ ಮದ್ಯ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಅಲ್ಪ ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಿ ಈ ಹೊರೆಯನ್ನು ಅವಕಾಶಗಳಿದ್ದು, ಸರಕಾರ ಸೂಕ್ತ ನಿರ್ಧಾರ ಕೈಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬಹುದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close