About Us Advertise with us Be a Reporter E-Paper

ವಿ +

ಜಗತ್ತಿನ ಗಮನವನ್ನೇ ಕರ್ನಾಟಕದತ್ತ ಸೆಳೆದ ಫ್ರಾನ್ಸ್ ಮಹಿಳೆ

*ಬಸವರಾಜ ಎನ್ ಬೋದೂರು

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಹೆಸರು ಎಲ್ಲರಿಗೂ ಚಿರಪರಿಚಿತ. ವಿಜಯ ನಗರ ಸಾಮ್ರಾಜ್ಯದ ತೊಟ್ಟಿಲು, ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಲು ಮೊದಲು ಅಡಿಗಲ್ಲು ಹಾಕಿದ್ದೇ ಆನೆಗೊಂದಿಯಲ್ಲಿ. ಶ್ರೀಕೃಷ್ಣ ದೇವರಾಯನ ವಂಶಸ್ಥರು ಈ ಗ್ರಾಮದಲ್ಲಿ ನೆಲೆಸಿದ್ದಾರೆ. ಹೀಗೆ ಐತಿಹಾಸಿಕವಾಗಿ, ಪೌರಾಣಿಕವಾಗಿ ಪ್ರಸಿದ್ದಿ ಪಡೆದ ಆನೆಗೊಂದಿಯ ಗ್ರಾಮ ಪಂಚಾಯತಿಯ ಆಡಳಿತಕ್ಕೀಗ ಫ್ರಾನ್‌ಸ್ ಮೂಲದ ಮಹಿಳೆಯೊಬ್ಬಳು ಅವಿರೋಧವಾಗಿ ಅಧ್ಯಕ್ಷೆ ಪಟ್ಟಕ್ಕೇರಿದ್ದಾಳೆ. ಹೇಗೆ ಅಂತಿರಾ? 2015ರಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆನೆಗೊಂದಿಯ ರಾಜಮನೆತನದ ರಾಜಮಾತೆ ಲಲಿತಾರಾಣಿ ಶ್ರೀರಂಗದೇವ ರಾಯಲುರವರ ಕೃಪಾ ಕಟಾಕ್ಷದಿಂದ ಫ್ರಾನ್‌ಸ್ ಮೂಲದ ಅಂಜನಾದೇವಿ 2ನೇ ವಾರ್ಡಿಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು. ವಿನುಷಾ ಶಬ್ಬೀರ ಗ್ರಾಮ ಪಂಚಾಯತಿಯ ಅಧ್ಯಕ್ಷೆಯಾಗಿದ್ದರು. ಈಗ ಅವರು ನೀಡಿದ್ದರಿಂದ ಅಂಜನಾದೇವಿಗೆ ಅಧ್ಯಕ್ಷೆ ಪಟ್ಟ ಕಟ್ಟಿದ್ದಾರೆ.
ಹಂಪಿ ಕಂಡು ಕನ್ನಡದವಳಾದಳು

1955 ರಲ್ಲಿ ಫ್ರಾನ್‌ಸ್ ದೇಶದ ಮಹಿಳೆ ಫ್ರಾನ್ಸುವಾ ಭಾರತಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದರು. ಕರ್ನಾಟಕದ ಹಂಪಿಗೆ ಬಂದಾಗ, ಅಲ್ಲಿನ ಪ್ರಕೃತಿ ಸೊಬಗಿಗೆ ಮನಸೋತು ಇಲ್ಲೇ ಬದುಕಬೇಕೆಂಬ ಮನಸ್ಸಾಯಿತಂತೆ. ಆಗ ಅವರಿಗೆ ಹಂಪಿಯಲ್ಲಿ ತಮಿಳುನಾಡು ಮೂಲದ ಶಾಂತಮೂರ್ತಿ ಎನ್ನುವರ ಪರಿಚಯವಾಯಿತಂತೆ. ಪರಿಚಯ ಪರಸ್ಪರ ಪ್ರೇಮವಾಗಿ ರೂಪಗೊಂಡ ಪರಿಣಾಮ ಇಬ್ಬರೂ ಪ್ರೇಮವಿವಾಹ ಮಾಡಿಕೊಂಡು, ಫ್ರಾನ್ಸುವಾ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಫ್ರಾನ್ಸುವಾ ಶಾರದಾ ಆನೆಗೊಂದಿಯಲ್ಲಿ ನೆಲೆನಿಂತು ದಾಂಪತ್ಯ ಜೀವನವನ್ನು ಆರಂಭಿಸಿದರು. ಅವರಿಬ್ಬರ ಮಗಳೇ ಈ ಅಂಜನಾದೇವಿ. 1976ರ ನ.21ರಂದು ಅಂಜನಾದ್ರಿಯ ಬೆಟ್ಟದ ತಪ್ಪಲಿನಲ್ಲಿರುವ ಆನೆಗೊಂದಿಯಲ್ಲಿ ಜನಿಸಿದ ಮಗುವಿಗೆ ಅಂಜನಾದೇವಿ ಎಂದು ನಾಮಕರಣ ಮಾಡಿದ್ದಾರೆ.

ಇಲ್ಲಿನ ಪೌರತ್ವ ಪಡೆದ ಅಂಜನಾದೇವಿ ಸರಕಾರಿ ಕನ್ನಡ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮುಗಿಸಿದ್ದಾರೆ. ಬಿಎ ಪದವಿಧರೆಯಾಗಿರುವ ಈಕೆ ಇಂಗ್ಲಿಷ್, ಹಿಂದಿ, ಫ್ರೆಂಚ್, ತಮಿಳು, ತೆಲುಗು, ಹಾಗೂ ಕನ್ನಡ ಭಾಷೆಯನ್ನು ನಿರರ್ಗಳವಾಗಿ ಮಾತಾನಾಡುತ್ತಾರೆ. ಇವರ ತಂದೆ ತಾಯಿ ಇಲ್ಲಿಯೇ ಕಾಲವಾದ ನಂತರ ಬ್ರಹ್ಮಚಾರಿಣಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಜೀವನಕ್ಕಾಗಿ ಎನ್.ಜಿ.ಓದಲ್ಲಿ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಫ್ರಾನ್‌ಸ್ನಲ್ಲಿ ಸಂಬಂಧಿಗಳು ಇರುವುದರಿಂದ ಆಗಾಗ ಹೋಗಿ ಬರುತ್ತಿರುತ್ತಾರೆ.

ರಾಷ್ಟ್ರ ಮಟ್ಟದಲ್ಲಿ ಊರ ಹೆಸರು
ಹಂಪಿ ಮತ್ತು ಆನೆಗೊಂದಿ ಭಾಗದ ಹಳ್ಳಿಗಳಲ್ಲಿರುವ ದೇಶಿಯ ಕಲೆ, ನೃತ್ಯ, ಸಂಗೀತ, ಸಂಸ್ಕೃತಿಯನ್ನು ಗ್ರಾಮಸ್ಥರಿಂದ ಕಲಿತುಕೊಂಡಿದ್ದಾಳೆ. ಬಾಲ್ಯದಿಂದಲೂ ಸ್ನೇಹಿತರೊಂದಿಗೆ ಸೇರಿಕೊಂಡು ಹಬ್ಬ ಹರಿದಿನಗಳಲ್ಲಿ ಗ್ರಾಮವನ್ನು ಸ್ವಚ್ಛಗೊಳಿಸುವುದು, ಹಾದಿಯುದ್ದಕ್ಕೂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಂಗೋಲಿ ಬಿಡಿಸುವುದು, ಕೋಲಾಟದಂತ ಹಲವಾರು ತರದ ಗ್ರಾಮೀಣ ಕ್ರೀಡೆಗಳನ್ನು ಜನರಿಗೆ ಮನರಂಜಿಸುತ್ತಾ ಜನರ ಮನದಲ್ಲಿ ಮನೆ ಮಾಡಿರುವ ಅಂಜನಾದೇವಿ ಆನೆಗೊಂದಿಯ ಮನೆಮಗಳೂ ಹೌದು.

ಗ್ರಾಮೀಣ ಸೊಗಡಿನ ಕಲೆಗಳನ್ನು ಕರಗತ ಮಾಡಿಕೊಂಡು ಅವುಗಳನ್ನ ರಾಷ್ಟ್ರ ಮಟ್ಟದಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಅದಕ್ಕಾಗಿಯೇ 35-40 ಜನ ಗ್ರಾಮದ ಯುವತಿ-ಯುವಕರನ್ನು ಕೂಡಿಸಿಕೊಂಡು ‘ಚಂದ್ರಕಲಾ ಭೂಮಿ ಟ್ರಸ್‌ಟ್’ ಕಟ್ಟಿಕೊಂಡಿದ್ದಾರೆ. ಅದರ ಮೂಲಕ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾನಾ ರಾಜ್ಯಗಳಲ್ಲಿ ನೀಡಿದ್ದಾರೆ. ಇತ್ತೀಚಿಗೆ ಪಾಂಡಿಚೇರಿಯಲ್ಲಿ ಜರುಗಿದ ಫಿಲಂ ಫೇರ್ ಪೆಸ್ಟಿವಲ್‌ನಲ್ಲಿ ಟ್ರಸ್‌ಟ್ ಸದಸ್ಯರು ಪ್ರಸ್ತುತ ಪಡಿಸಿದ ನೃತ್ಯರೂಪಕ ಮನ್ನಣೆ ಗಳಿಸಿದೆ. ಇದೇ ಟ್ರಸ್ಟಿನಲ್ಲಿ ಪಳಗಿದ ಹುಡುಗನೊಬ್ಬ ಸಿನಿಮಾ ರಂಗದಲ್ಲಿ ಡ್ಯಾನ್‌ಸ್ ಕೋರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾನೆ. ಮೊನ್ನೆ ಮುಂಬೈನಲ್ಲಿ ನಡೆದ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಡ್ಯಾನ್‌ಸ್ ಪರ್ಪಾಮೆನ್‌ಸ್ ಮಾಡಿ ಸೈ ಎನಿಸಿಕೊಂಡಿದ್ದಾನೆ.

ಸಾಮಾಜಿಕ ಕಳಕಳಿ
ಅಂಜನಾದೇವಿ ಗ್ರಾಮಸ್ಥರಿಗೆ ಅಭಿಮಾನದ ಪ್ರತೀಕ. ಈಕೆಯನ್ನು ಗ್ರಾಮದ ಮಹಿಳೆಯರು, ಹಿರಿಯರು ಪ್ರೀತಿಯಿಂದ ಅಂಜಿನಮ್ಮ ಎಂದು ಕರೆಯುವುದುಂಟು.
ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂಬ ಮಹಾದಾಸೆ ಹೊಂದಿರುವ ಅಂಜನಾದೇವಿ ಹೊರಗುಳಿದಿರುವ ಅಂಗವಿಕಲ, ಅಂಧ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗಾಗಿ ನನಗೂ ಶಾಲೆ (್ಛಟ್ಠ್ಟಠಿ ಡಿಛಿ ್ಛಟ್ಠ್ಞಠಿಜಿಟ್ಞ) ಎಂಬ ಹೆಸರಿನಿಂದ ಗಂಗಾವತಿಯಲ್ಲಿ ಎರಡು ಶಾಲೆಗಳನ್ನು ತೆರೆದಿದ್ದಾರೆ. ಸರಕಾರ ಮತ್ತು ಎನ್‌ಜಿಓ ಮೈತ್ರಿಯಿಂದ ಕೆಲಸ ಮಾಡುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಇಂತಹ ಮಕ್ಕಳಿಗಾಗಿ ಒಂದು ರೂಮು ಮೀಸಲಿಡಲಾಗುತ್ತದೆ. ಶಾಲೆಯಿಂದ ಹೊರಗುಳಿದ ಹಾಗೂ ಸಮಾಜ ತುಚ್ಛ ಭಾವನೆಯಿಂದ ನೋಡುವಂತಹ ಮಕ್ಕಳನ್ನು ಗುರುತಿಸಿ, ಅವರ ಮನೆಗಳಿಗೆ ತೆರಳಿ, ಆ ಮಕ್ಕಳಲ್ಲಿ ಯಾವ ಕೊರತೆಯಿದೆ, ಅವರಿಗೆ ಯಾವ ತರಬೇತಿ ಹಾಗೂ ಶಿಕ್ಷಣ ನೀಡಬೇಕು ಹೀಗೆ ಕೂಲಂಕುಶವಾಗಿ ಅವರ ಕುರಿತು ಅವರ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಅರಿತು ನಂತವರನ್ನು ಕರೆತಂದು ಶಾಲೆಗೆ ಸೇರಿಸುವುದಕ್ಕೂ ಮುಂಚೆ ಶಾಲಾ ಪೂರ್ವ ಸಿದ್ದತಾ ತರಬೇತಿ ನೀಡುತ್ತಿದ್ದಾರೆ. ವಿಕಲಚೇತನ ಮಕ್ಕಳಿಗೆ ಬೇಕಾಗುವಂತಹ ಪರಿಕರಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ, ತರಬೇತಿ ನೀಡಿ ಅವರನ್ನು ವಿದ್ಯಾವಂತರನ್ನಾಗಿ ಪರಿವರ್ತಿಸುತ್ತಿದ್ದಾರೆ.

ನನ್ನ ಹಳ್ಳಿಗಾಗಿ ಶ್ರಮಿಸುವೆ
ಮೊದಲು ಹಳ್ಳಿಯ ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇನೆ. ಬಾಲ್ಯವಿವಾಹ, ಬಯಲು ಬಹಿರ್ದೆಸೆ ಯಂತಹ ಅನಿಷ್ಠ ಪಿಡುಗುಗಳನ್ನು ತೊಲಗಿಸಲು ಶ್ರಮಿಸುವೆ. ಜತೆಗೆ ಮಹಿಳೆಯರಿಗೆ ವ್ಯವಹಾರ ಮತ್ತು ಲೋಕದ ಜ್ಞಾನ ನೀಡುವಲ್ಲಿ ಮುಂದಾಗಬೇಕಿದೆ ಹಾಗ ಅವಳು ಅಬಲೆಯಲ್ಲ ಸಬಲೆ ಎನ್ನುವುದನ್ನು ತೋರಿಸಲು ಸಾಧ್ಯ.
-ಅಂಜನಾದೇವಿ

Tags

Related Articles

Leave a Reply

Your email address will not be published. Required fields are marked *

Language
Close