About Us Advertise with us Be a Reporter E-Paper

ಗೆಜೆಟಿಯರ್

ಆಕಾಶದಿಂದ ಧರೆಗಿಳಿದ ಸಸಿ…!

*ಚಂದ್ರಶೇಖರ್ ಮದಭಾವಿ

ಜಗತ್ತಿನಲ್ಲಿ ಇಂದು ಒಂದು ಸೆಕೆಂಡಿಗೆ ಒಂದೂವರೆ ಎಕರೆ ಕಾಡನ್ನು ನೆಲಸಮ ಮಾಡಲಾಗುತ್ತದೆ. ಒಂದು ವರ್ಷಕ್ಕೆ 100 ಕೋಟಿ ಮರಗಳ ಜೀವ ತೆಗೆಯಲಾಗುತ್ತದೆ. ಕಾರಣಗಳು ಆದರೆ ಇದು ಆಗುತ್ತಿರುವುದಂತೂ ನಿಜ. ಇದರ ಪರಿಣಾಮಗಳನ್ನು ನಾವು ಈಗಾಗಲೆ ಎದುರಿಸುತ್ತಿದ್ದೇವೆ. ನಮ್ಮ ಪರಿಸರ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುತ್ತಿದೆ. ಪರಿಸರವಾದಿಗಳು ಎಷ್ಟೇ ಹೋರಾಟ ಮಾಡಿದರೂ ಬೆಳವಣಿಗೆಯ ನೆಪದಲ್ಲಿ ನಾವು ಮರಗಳನ್ನು ಕಡಿಯುತ್ತಿರುವುದಂತು ನಿಜ. ನಾವು ಶಾಲೆಯಲ್ಲಿದ್ದಾಗ ವನಮಹೋತ್ಸವ ಅಂತ ವರ್ಷಕ್ಕೆ ಒಂದು ದಿನ ತೆಗೆದಿಟ್ಟಿರುತ್ತಿದ್ದರು. ಅಂದು ನಮ್ಮನ್ನೆಲ್ಲ ದೂರದ ಬಯಲು ಪ್ರದೇಶಕ್ಕೆ ಕರೆದುಕೊಂಡು ಹೋಗಿ ನಮ್ಮ ಕೈಯಲ್ಲಿ ಒಂದೊಂದು ಸಸಿ ಕೊಟ್ಟು ಮರ ನೆಡಿಸುತ್ತಿದ್ದರು. ಈಗ ಯಾವ ಶಾಲೆಗಳೂ ಅರ್ಥಪೂರ್ಣ ಆಚರಣೆ ಮಾಡುತ್ತಿಲ್ಲ ಅಂದುಕೊಂಡಿದ್ದೆನೆ. ಇನ್ನು ನಮ್ಮ ನಾಯಕರು ಇಂದು ಹೆಸರಿಗೆ ಸಸಿ ನೆಟ್ಟರೆ ಮರುದಿನ ಅದಕ್ಕೆ ನೀರು ಹಾಕುವವರು ದಿಕ್ಕಿಲ್ಲದೆ ಸಸಿ ಅಸುನೀಗಿರುತ್ತದೆ.

ಇದಕೆಲ್ಲ ಪರಿಹಾರ ಎಂಬಂತೆ ಆಸ್ಟ್ರೇಲಿಯಾದ ‘ಬಯೋ ಕಾರ್ಬನ್ ಇಂಜಿನಿಯರಿಂಗ್’ ಎಂಬ ಕಂಪನಿ ಒಂದು ಡ್ರೋನ್ (ಹಾರುವ ಯಂತ್ರ ) ಕಂಡು ಹಿಡಿದಿದೆ. ಡ್ರೋನ್ ಬಗ್ಗೆ ನಿಮಗಾಗಲೆ ತಿಳಿದಿದೆ. ಇದನ್ನು ಬೇರೆ ಬೇರೆ ಕೆಲಸಗಳಿಗೆ ಈಗಾಗಲೆ ಬಳಸಿಕೊಳ್ಳಲಾಗುತ್ತಿದೆ. ಈಗ ಇದನ್ನು ಗಿಡ ನೆಡಲು, ಕಾಡು ಬಳಸಬಹುದು ಎಂದು ಬಯೋ ಕಾರ್ಬನ್ ಇಂಜಿನಿಯರಿಂಗ್ ಕಂಪನಿ ಸಾಧಿಸಿ ತೋರಿಸಿದೆ.

ಈ ಡ್ರೋನ್ ಆಕಾಶದಲ್ಲಿ ಹಾರುತ್ತಲೆ ಭೂಮಿಗೆ ಗುಂಡನ್ನು (ಬುಲೆಟ್)ಹೊಡೆಯುತ್ತದೆ. ಈ ಗುಂಡು ಮಣ್ಣಿಗೆ ಸೇರಿ ಕೊಳೆಯಬಲ್ಲ ವಸ್ತುವಿನಿಂದ ತಯಾರಿಸಲಾಗಿತ್ತದೆ. ಗುಂಡಿನಲ್ಲಿ ಮಣ್ಣು, ಸಸಿಗೆ ಬೇಕಾಗಿರುವ ಪೌಷ್ಟಿಕ ದ್ರವ್ಯವನ್ನು ಒಳಗೊಂಡಿರುತ್ತದೆ. ಈ ಡ್ರೋನ್‌ಗೆ ಕೃತಕ ಬುದ್ಧಿಮತ್ತೆಯನ್ನು(ಅ್ಟಠಿಜ್ಛಿಜ್ಚಿಜ್ಝಿ ಐ್ಞಠಿಛ್ಝ್ಝಿಜಿಜಛ್ಞ್ಚಿಛಿ ) ಅಳವಡಿಸಿರುವುದರಿಂದ ಆ ಸಸಿಗೆ ಬೇಕಾಗಿರುವ ಆಳಕ್ಕೆ ಭೂಮಿಯಲ್ಲಿ ಇಳಿಸುತ್ತದೆ. ಈ ಡ್ರೋನ್ ಒಂದು ದಿನಕ್ಕೆ ಒಂದು ಲಕ್ಷ ಮರಗಳನ್ನು ಈ ಕಂಪನಿಯವರು ಇಂಥ ಡ್ರೋನ್‌ಗಳ ಸೈನ್ಯವನ್ನೆ ಸಿದ್ಧಪಡಿಸುತ್ತಿದ್ದಾರೆ. ಇವುಗಳಿಂದ ಒಂದು ವರ್ಷಕ್ಕೆ 100 ಕೋಟಿ ಮರಗಳನ್ನು ನೆಡಬಹುದು. ಅಂದರೆ ಈ ತಂತ್ರಜ್ಞಾನ ಬಳಸಿ ಪರಿಸರ ಸಮತೋಲನ ಕಾಪಾಡಿಕೊಳ್ಳುವ ಎಲ್ಲ ಸಾಧ್ಯತೆಯೂ ಇದೆ. ಈ ಸಾಧ್ಯತೆ ಮಾತ್ರ ಮಾನವನಿಗೆ ಬಿಟ್ಟಿದ್ದು. ಈಗಾಗಲೆ ಮ್ಯಾನ್ಮಾರ್ (ಬರ್ಮಾ)ನಲ್ಲಿ ಈ ಡ್ರೋನ್ ತಂತ್ರಜ್ಞಾನ ಬಳಸಿ 750 ಹೆಕ್ಟೇರ್ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ.

ಈ ತಂತ್ರಜ್ಞಾನ ವಿವಿಧ ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೊದಲ ಹಂತದಲ್ಲಿ ಹಾರುವ ಮರ ನೆಡಬೇಕಾದ ಜಾಗದ ನಕಾಶೆಯನ್ನು ತಯಾರಿಸುತ್ತವೆ. ಅಲ್ಲಿನ ಮಣ್ಣು ಪರೀಕ್ಷೆ ಮಾಡಲಾಗುತ್ತದೆ. ಅಲ್ಲಿ ಯಾವ ಜಾತಿಯ ಮರಗಳು ಬೆಳೆಯಬಹುದು ಎಂಬುದನ್ನು ವಿಶ್ಲೇಷಿಸಲಾಗುತ್ತದೆ. ಸಸಿಗಳ ಮಧ್ಯೆ ಇರಬೇಕಾದ ದೂರವನ್ನು ಗ್ರಹಿಸಲಾಗುತ್ತದೆ. ಆಮೇಲೆ ಹಾರುವ ಡ್ರೋನ್ ಗಳು ವನ್ಯ ವಿಜ್ಞಾನಿಗಳು ತಯಾರಿಸಿದ ಸಸಿಗಳನ್ನು ಭೂಮಿಯಲ್ಲಿ ಇಳಿಸುತ್ತವೆ. ವನ್ಯ ವಿಜ್ಞಾನಿಗಳ ಪ್ರಕಾರ ಈ ತಂತ್ರಜ್ಞಾನದಿಂದ ನೆಟ್ಟ ಸಸಿಗಳಲ್ಲಿ ಬದುಕುಳಿಯುವ ಮತ್ತು ಚಿಗುರೊಡೆಯುವ ಸಾಧ್ಯತೆಗಳು ತುಂಬಾ ಹೆಚ್ಚಿವೆ. ಈ ಸಸಿಗಳು ಕಲ್ಲುಗಳ ಮೇಲೆ ಅಥವಾ ಬಿಳದಂತೆ, ಮೊದಲೆ ಡ್ರೋನ್‌ಗಳ ಸಹಾಯದಿಂದ ಸಮೀಕ್ಷೆ ಮಾಡಲಾಗಿರುತ್ತದೆ. ಈ ತಂತ್ರಜ್ಞಾನ ವೇಗವಾಗಿ ಕೆಲಸ ಮಾಡುವುದರಿಂದ ಸಮಯವಂತು ಉಳಿಯುತ್ತದೆ. ಇನ್ನು ಇದಕ್ಕೆ ತಗಲುವ ವೆಚ್ಚಕ್ಕೆ ಬಂದರೆ ಮಾನವರನ್ನು ಬಳಸಿ ಸಸಿ ನೆಡುವುದಕ್ಕಿಂತ ಅರ್ಧದಷ್ಟು ಖರ್ಚಿನಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಬಹುದು.

ಬಯೋ ಕಾರ್ಬನ್ ಇಂಜಿನಿಯರಿಂಗ್ ಕಂಪನಿ ಈ ತಂತ್ರಜ್ಞಾನವನ್ನುಇನ್ನಷ್ಟು ಸುಧಾರಿಸುವತ್ತ ಸಂಶೋಧನೆ ಮುಂದುವರೆಸಿದೆ. ಅವರ ಪ್ರಕಾರ ಕಾಡನ್ನು ನಾಶಪಡಿಸುವ ವೇಗಕ್ಕಿಂತ ನಾವು ಇನ್ನೂ ತುಂಬಾ ಹಿಂದಿದ್ದೇವೆ. ಪರಿಸರ ಸಮತೋಲನ ಕಾಪಾಡಿಕೊಳ್ಳಬೇಕೆಂದರೆ ವೇಗವಾಗಿ ಕಾಡನ್ನು ಬೆಳೆಸಬೇಕಾಗಿದೆ.

ಭಾರತ ಸರಕಾರವೂ ಇಂಥ ತಂತ್ರಜ್ಞಾನವನ್ನು ಬಳಸಿ ಕಾಡು ಬೆಳೆಸಿ ನಾಡನ್ನು ಉಳಿಸಬೇಕಾಗಿದೆ. ಇಂಥ ತಂತ್ರಜ್ಞಾನಗಳು ಪರಿಸರ ತಜ್ಞರ, ಉದ್ಯಮಿಗಳ ಮತ್ತು ನಮ್ಮ ರಾಜಕೀಯ ನಾಯಕರ ಕಣ್ಣಿಗೆ ಬೀಳಲಿ ಮತ್ತು ಅವರು ಸಮಯಕ್ಕೆ ಸರಿಯಾಗಿ ಕ್ರಮ ತೆಗೆದುಕೊಳ್ಳಲಿ ಎನ್ನುವುದು ಈ ಲೇಖನದ ಆಶಯ.

Tags

Related Articles

Leave a Reply

Your email address will not be published. Required fields are marked *

Language
Close