About Us Advertise with us Be a Reporter E-Paper

Breaking Newsದೇಶಪ್ರಚಲಿತ

ತೈಲ ಬೆಲೆ ಏರಿಕೆಗೆ ಡಾಲರ್‌ ಬೇಡಿಕೆ ಹೆಚ್ಚಳವಾಗಿದ್ದೇ ಕಾರಣ: ಧರ್ಮೇಂದ್ರ ಪ್ರಧಾನ್

ದೆಹಲಿ: ತೈಲ ಬೆಲೆ ನಿರಂತರವಾಗಿ ಏರುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಬೆಲೆ ಏರಿಕೆಗೆ ಅಂತಾರಾಷ್ಟ್ರಿಯ ಮಾರುಕಟ್ಟೆ ಕಾರಣ ಎಂದು ಹೇಳಿದ್ದಾರೆ.

ಆಗಸ್ಟ್ 15 ರಿಂದ ಸತತವಾಗಿ ಏರುತ್ತಲೇ ಇರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಜನಸಾಮಾನ್ಯನಲ್ಲಿ ಆತಂಕ ಸೃಷ್ಟಿಸಿದೆ.  ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅಂಶಗಳು ಕಾರಣ. ಈ ಅಂಶಗಳು ಭಾರತದ ಕೈಯಲ್ಲಿಲ್ಲ ಎಂದು ಪ್ರಧಾನ್ ಹೇಳಿದ್ದಾರೆ.

ರೂಪಾಯಿ ಡಾಲರ್ ಎದುರು ವೈಫಲ್ಯ ಕಂಡಿದ್ದೇ ತೈಲ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಆದರೆ ಭಾರತದ ರೂಪಾಯಿ ದುರ್ಬಲವಾಗಿಲ್ಲ. ಸಮಸ್ಯೆಯಿರುವುದು ಅಮೆರಿಕನ್ ಡಾಲರ್ ನಲ್ಲಿ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅಮೆರಿಕನ್ ಡಾಲರ್ ಮೇಲೆಯೇ ಅವಲಂಬಿತವಾಗಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಅಮೆರಿಕನ್ ಡಾಲರ್ ಅತೀ ದೊಡ್ಡ ಎಕ್ಸ್ ಚೇಂಜ್ ಕರೆನ್ಸಿ ಆಗಿರುವುದು ಇದಕ್ಕೆ ಕಾರಣ ಎಂದರು.

Tags

Related Articles

Leave a Reply

Your email address will not be published. Required fields are marked *

Language
Close