About Us Advertise with us Be a Reporter E-Paper

Breaking Newsದೇಶಪ್ರಚಲಿತ

ಮತ್ತೆ ಇಂದು ಪೆಟ್ರೋಲ್​, ಡಿಸೇಲ್​ ಬೆಲೆ ಏರಿಕೆ

ದೆಹಲಿ: ಮತ್ತೆ ಇಂದು ಪೆಟ್ರೋಲ್‌, ಡಿಸೇಲ್‌‌ ಬೆಲೆ ಏರಿಕೆ ಯಾಗಿದೆ. ಆಗಸ್ಟ್​ 16ರಿಂದ ನಿರಂತರವಾಗಿ ಬೆಲೆ ಏರುತ್ತಲೇ ಇದೆ.

ಸತತ ಹದಿನೈದು ದಿನಗಳ ಬೆಲೆ ಏರುತ್ತಲೇ ಇದ್ದು, ಇಂಧನ ದರ ಇಂದು ಗಗನಕ್ಕೇರಿದೆ. ದೆಹಲಿಯಲ್ಲಿ ಇಂದು ಒಂದು ಲೀಟರ್​ ಡಿಸೇಲ್​ ದರ 78.84 ರು.ಆಗಿದ್ದು ನಿನ್ನೆಯ ದರಕ್ಕಿಂತ 16 ಪೈಸೆ ಏರಿಕೆ ಕಂಡಿದೆ. ಇನ್ನು ಒಂದು ಲೀಟರ್​ ಪೆಟ್ರೋಲ್​ ದರ 70.76ರು. ಆಗಿದ್ದು, 34 ಪೈಸೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಲೀಟರ್​ ಡಿಸೇಲ್​ ದರ 72.51 ರು, ಪೆಟ್ರೋಲ್​ ದರ 81.12 ರು.ಆಗಿದೆ. ಮುಂಬೈನಲ್ಲಿ ಇಂದಿನ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ಕ್ರಮವಾಗಿ 86.25, 75.12ರು. ಇದೆ.

Tags

Related Articles

Leave a Reply

Your email address will not be published. Required fields are marked *

Language
Close