About Us Advertise with us Be a Reporter E-Paper

Breaking Newsದೇಶಪ್ರಚಲಿತ

ಇಂದೂ ಏರಿಕೆಯಾದ ತೈಲ ಬೆಲೆ, ಮತ್ತೂ ಗ್ರಾಹಕರ ಜೇಬಿಗೆ ಕತ್ತರಿ…!

ದೆಹಲಿ: ಪೆಟ್ರೋಲ್ ದರ ಏರಿಕೆ ನಿರಂತರವಾಗಿ ಹೆಚ್ಚುತ್ತಲೇ ಇದೆ, ಆ ಮೂಲಕ ಈಗ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಶನಿವಾರ ಮತ್ತೆ ಪೆಟ್ರೋಲ್‌ 39  ಪೈಸೆ, ಡೀಸೆಲ್‌ 44 ಪೈಸೆ ಹೆಚ್ಚಳಗೊಂಡಿದೆ.

ಮುಂಬೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌‌ಗೆ 87.77, ದೆಹಲಿಯಲ್ಲಿ 80.38 ರು. ಮುಂಬೈನಲ್ಲಿ ಡಿಸೇಲ್‌‌ಗೆ 76.98, ದೆಹಲಿಯಲ್ಲಿ 72.51 ರು.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಡೀಸೆಲ್‌ ಬೆಲೆ 74.39 ರು. ಪೆಟ್ರೋಲ್‌ ಬೆಲೆ 83.07 ರು.ಗೆ ಹೆಚ್ಚಾಗಿದೆ.

ಆಗಸ್ಟ್‌ 16 ರಿಂದ ಇದುವರೆಗೆ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 3.24 ರು. ಡೀಸೆಲ್‌  3.74 ರು. ಹೆಚ್ಚಳಗೊಂಡಿದೆ. ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಈಗ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ ತೀವ್ರ ಏರಿಕೆಯಾಗಿದೆ. ಇನ್ನೊಂದೆಡೆಗೆ ಹೆಚ್ಚಿನ ತೆರಿಗೆಯೂ ಕೂಡ ಪ್ರಭಾವ ಬೀರಿದೆ.

Tags

Related Articles

Leave a Reply

Your email address will not be published. Required fields are marked *

Language
Close