About Us Advertise with us Be a Reporter E-Paper

Breaking Newsರಾಜ್ಯ

ಹುತಾತ್ಮ ಯೋಧ ಪಾಪಣ್ಣ ಅಂತ್ಯಸಂಸ್ಕಾರ

ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ, ಸರಕಾರಿ ಗೌರವದಿಂದ ಅಂತಿಮ ನಮನ

ಅಮೀನಗಡ: ವಿದ್ಯುತ್ ಸ್ಪರ್ಶಿಸಿ ಹುತಾತ್ಮರಾದ ಬಿಎಸ್‌ಎಫ್ ಯೋಧ ಪಾಪಣ್ಣ ಮಲ್ಲಿಕಾರ್ಜುನ ಅವರ ಅಂತ್ಯಸಂಸ್ಕಾರ ಅಮಿನಗಡ ಸಮೀಪದ ರಕ್ಕಸಗಿ ಗ್ರಾಮದಲ್ಲಿ ಶುಕ್ರವಾರ ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

ಗುಜರಾತ್‌ನ ಜಾಮ್‌ನಗರದ ಮಡ್ರಾಸ್ ರೆಜಿಮೆಂಟಿನ 6ನೇ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಪಾಪಣ್ಣ ಮಲ್ಲಿಕಾರ್ಜುನ ಯರನಾಳ ಮಂಗಳವಾರ ವಿದ್ಯುತ್ ಸ್ಪರ್ಶದಿಂದ ಹುತಾತ್ಮರಾಗಿದ್ದರು. ಅವರ ಪ್ರಾರ್ಥಿವ ಶರೀರವನ್ನು ಸೇನೆಯ ವಾಹನದಲ್ಲಿ ಸ್ವಗ್ರಾಮ ರಕ್ಕಸಗಿ ಶುಕ್ರವಾರ ತರಲಾಯಿತು.

ಗ್ರಾಮಸ್ಥರು ಪ್ರಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಗ್ರಾಮದ ಬಯಲುರಂಗ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಯಿತು. ಸ್ಥಳದಲ್ಲಿಯೇ ಇದ್ದ ಅವರು ತಾಯಿ ಅನ್ನಪೂರ್ಣ,ಪತ್ನಿ ಬಸಮ್ಮ ಮಕ್ಕಳಾದ ವೈಷ್ಣವಿ, ಲಕ್ಷ್ಮೀ ಹಾಗೂ ಕುಟುಂಬಸ್ಥರು ಆಕ್ರಂದ ಮುಗಿಲು ಮುಟ್ಟಿತ್ತು.

ಗಣ್ಯರಿಂದ ಅಂತಿಮದರ್ಶನ : ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಹುಲಗಿನಾಳ ದತ್ತ ಅವಧೂತ ಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಮ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿವೈಎಸ್‌ಪಿ ಎಸ್.ಬಿ.ಗಿರೀಶ,ಹುನಗುಂದ ತಹಸೀಲ್ದಾರ ಸುಭಾಶ ಸಂಪಗಾವಿ, ಸಿಪಿಐ ಕರುಣೇಶಗೌಡ ಜೆ, ಅವರುಗಳು ಪುಷ್ಪ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ನಂತರ ಸೇನೆಯ ನಿಯಮದಂತೆ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಸರಕಾರಿಗೌರವದೊಂದಿಗೆ ಅಂತಿಮ ಸಂಸ್ಕಾರ: ವಿದ್ಯುತ್ ಸ್ಪರ್ಶದಿಂದ ಮೂರು ದಿನಗಳ ಹಿಂದೆ ಗುಜರಾತ ರಾಜ್ಯದ ಬಟಾಲಿಯನ್ ಟೆಂಟ್‌ನಲ್ಲಿ ದುರ್ಮರಣಕ್ಕೀಡಾಗಿದ್ದ ಸಮೀಪದ ರಕ್ಕಸಗಿ ಗ್ರಾಮದ ಭಾರತೀಯ ಸೇನೆಯ ಯೋಧ ಪಾಪಣ್ಣ ಮಲ್ಲಿಕಾರ್ಜುನ ಯರನಾಳ(36) ಪಾರ್ಥಿವ ಶರೀರದ ಮೆರವಣಿಗೆ ಶುಕ್ರವಾರ ಅಮೀನಗಡಪಟ್ಟಣದಲ್ಲಿ ತೆರೆದ ವಾಹನದಲ್ಲಿ ಬೃಹತ ಜನಸಾಗರದ ಮಧ್ಯೆ ಸರಕಾರಿ ಗೌರವದೊಂದಿಗೆ ಜರುಗಿತು.

ಹುತಾತ್ಮ ಯೋಧ ಪಾಪಣ್ಣ ಮಲ್ಲಿಕಾರ್ಜುನ ಯರನಾಳ ಅವರ ಅಂತಿಮ ದರ್ಶನದ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

 

Tags

Related Articles

Leave a Reply

Your email address will not be published. Required fields are marked *

Language
Close