ವಿಶ್ವವಾಣಿ

ಗಣಪತಿ ಹಬ್ಬಕ್ಕೆೆ ವಿಷ್ಣು-ರಾಜ್ ಅಭಿಮಾನಿಗಳಿಗೆ ಬಂಪರ್ ಆಫರ್..!

 

‘ನಾಗರಹಾವು’ ತೆರೆಗೆ ಬಂದು ಭರ್ಜರಿ ಸದ್ದು ಮಾಡುವುದರ ಮೂಲಕ ವಿಷ್ಣುದಾದ ಮೇಲೆ ಕನ್ನಡಿಗರು ಇಟ್ಟಿರುವ ಅಭಿಮಾನ, ಪ್ರೀತಿ ಮುಗಿಲೆತ್ತರದ್ದು ಎಂದು ಸಾರಿ ಹೇಳಿತ್ತು. ಕಳೆದ ವಾರ ರಾಜ್‌ಕುಮಾರ್ ಚಿತ್ರವಾದ ‘ಎರಡು ಕನಸು’ ಕೂಡ ತೆರೆಮೇಲೆ ಮತ್ತೊಮ್ಮೆ ಅಪ್ಪಳಿಸಿತ್ತು. ಈಗ ಇದೇ ಖುಷಿಯಲ್ಲಿರುವ ವಿಷ್ಣು-ರಾಜ್‌ಕುಮಾರ್ ಅಭಿಮಾನಿಗಳಿಗೆ ಗಣೇಶನ ಹಬ್ಬಕ್ಕೆೆ ಇನ್ನೊಂದು ಬಂಪರ್ ಆಫರ್ ರೆಡಿಯಾಗಿದೆ.
ಈ ವರ್ಷದ ಗಣಪತಿ ಹಬ್ಬಕ್ಕೆೆ, ಸೆಪ್ಟೆೆಂಬರ್ 13ಕ್ಕೆೆ ವಿಷ್ಣುವರ್ಧನ್ ಮತ್ತು ರಾಜಕುಮಾರ್ ಇಬ್ಬರೂ ಜತೆಯಾಗಿ ನಟಿಸಿರುವ ‘ಗಂಧದ ಗುಡಿ’ ಚಿತ್ರ ಮತ್ತೊಮ್ಮೆ ತೆರೆ ಮೇಲೆ ಅಬ್ಬರಿಸಲು ಬರುತ್ತಿದೆ.


1973ರಲ್ಲಿ ಬಿಡುಗಡೆಯಾಗಿದ್ದ ‘ಗಂಧದ ಗುಡಿ’ ಚಿತ್ರವನ್ನು ವಿಜಯ್ ನಿರ್ದೇಶಿಸಿ, ಎಂ.ಪಿ.ಶಂಕರ್ ನಿರ್ಮಿಸಿದ್ದರು. ಕನ್ನಡದಿಂದ ಹಿಂದಿಗೆ ರಿಮೇಕ್ ಆಗಿದ್ದ ‘ಗಂಧದ ಗುಡಿ’ ಚಿತ್ರದಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್, ಕಲ್ಪನಾ ಮುಂತಾದವರು ಪ್ರಮುಖ ಪಾಥ್ರಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಸದ್ಯ ‘ಗಂಧದ ಗುಡಿ’ ಚಿತ್ರ ಮಲ್ಟಿಪ್ಲೆೆಕ್ಸ್‌ ಮತ್ತು ಸಿಂಗಲ್ ಸ್ಕ್ರೀನ್‌ಗಳಲ್ಲಿ ಮರುಬಿಡುಗಡೆಯಾಗುತ್ತಿದ್ದು ಸುಮಾರು 75ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಸಿನಿರಸಿಕರ ಕಣ್ಮನ ತುಂಬಲಿದೆ.