About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಗಣೇಶ ಚತುರ್ಥಿಗೆ ಊರಿಗೆ ಹೋಗ್ಬೇಕಾ: ಬೇಗ ಟಿಕೆಟ್‌ ಬುಕ್ ಮಾಡ್ಕೋಡ್ರೆ ಒಳ್ಳೆದು

ಬೆಂಗಳೂರು: ಗಣೇಶ ಚತುರ್ಥಿಗೆ ಊರಿಗೆ ಹೋಗ್ಬೇಕು ಅಂದ್ಕೊಂಡಿದೀರಾ ಹಾಗಾದ್ರೆ ಬೇಗ ಬಸ್‌ಗಳ ಸೀಟ್ ಬುಕ್ ಮಾಡಿ, ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ಬುಕ್ ಆಗಿದ್ದು, ಖಾಸಗಿ ಬಸ್‌ಗಳ ಪ್ರಯಾಣ ದರ ಗಗನಕ್ಕೇರಿದೆ.

ಗಣೇಶ ಚತುರ್ಥಿಗೆ ಬೆಂಗಳೂರಿನಿಂದ ಸ್ವಂತ ಊರಿಗೆ ತೆರಳಲು ಎಲ್ಲರೂ ಭರದ ಸಿದ್ಧತೆ ನಡೆಸಿದ್ದು, ಕಳೆದ ಒಂದು ತಿಂಗಳಿಂದ ಬಸ್, ರೈಲು ಟಿಕೇಟ್ ಬುಕ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈಗಾಗಲೇ ಬಸ್‌ಗಳೂ ಸಂಪೂರ್ಣ ಬುಕ್ ಆಗಿದ್ದು, ವಿಶೇಷ ಬಸ್‌ಗಳೂ ಸಹ ಫುಲ್ ಆಗಿವೆ. ನೀವು ಇನ್ನೂ ಬುಕ್ ಮಾಡುವ ಪ್ಲಾನ್‌ನಲ್ಲಿದ್ದರೆ ಇಂದೇ ನಿಮ್ಮ ಸೀಟ್ ಕಾಯ್ದಿರಿಸಿಕೊಳ್ಳಿ. ಇಷ್ಟು ಬಸ್‌ಗಳಿವೆ ಯಾವುದಾದರೂ ಒಂದು ಬಸ್ ನಲ್ಲಿ ಸೀಟ್ ಸಿಕ್ಕೇ ಸಿಗುತ್ತೆ ಎಂದು ಊರಿಗೆ ಹೊರಡುವ ಎರಡು, ಮೂರು ದಿನ ಮುಂದೆ ಬುಕ್ ಮಾಡಿದರಾಯಿತು ಎಂದುಕೊಂಡರೆ, ನಿಂತು ಹೋಗುವುದಿರಲಿ, ಬಸ್‌ನಲ್ಲಿ ಕಾಲಿಡಲೂ ಸಹ ಜಾಗ ಸಿಗುವುದಿಲ್ಲ.

ಕೆಎಸ್‌ಆರ್‌ಟಿಸಿ ಬಸ್‌ಗಳದ್ದು, ಈ ಕಥೆಯಾದರೆ, ಖಾಸಗಿ ಇನ್ನೊಂದು ರೀತಿಯ ವ್ಯಥೆಯಾಗಿದೆ. ಖಾಸಗಿ ಬಸ್‌ಗಳು ಈಗಾಲೇ ದರ ಹೆಚ್ಚಳಕ್ಕೆ ಪೈಪೋಟಿ ನಡೆಸಿದ್ದು, ಮೂರು ಪಟ್ಟು ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿವೆ. ಹಬ್ಬಕ್ಕೆ ಇನ್ನೂ ಒಂದು ವಾರವಿರುವಾಗಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೇಟ್ ಫುಲ್ ಆಗಿದ್ದು, ಖಾಸಗಿ ಬಸ್‌ಗಳ ಪ್ರಯಾಣ ದರ ದುಪ್ಪಟ್ಟಾಗಿದೆ.

ಕಳೆದ ಒಂದು ತಿಂಗಳಿಂದ ಟಿಕೆಟ್ ಬುಕ್ ಮಾಡುವುದರಲ್ಲಿ ನಿರತರಾಗಿರುವ ಸಿಲಿಕಾನ್ ಸಿಟಿ ಜನತೆ, ಯಾವ ಸಮಯಕ್ಕೆ ಯಾವ ಬಸ್, ಯಾವ ಸೀಟ್ ಎಂದು ಹುಡುಕುವುದರಲ್ಲೇ ನಿರತರಾಗಿದ್ದಾರೆ. ಉತ್ತರ ಕರ್ನಾಟಕ, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ಎಲ್ಲ ಬಸ್‌ಗಳ ಟಿಕೇಟ್ ಬುಕ್ ಆಗಿವೆ.

ಇನ್ನೂ ಖಾಸಗಿ ಬಸ್‌ಗಳು ಪ್ರಯಾಣಿಕರ ಸುಲಿಗೆಗೆ ಮುಂದಾಗಿದ್ದು, 600-700 ಇದ್ದ ಟಿಕೆಟ್ ದರ 1500-2000 ರು. ದಾಟಿದೆ. ಒಟ್ಟಾರೆ 600-700ರು. ಹೆಚ್ಚಳವಾಗಿದೆ. ಹೋಗಲಿ ಸೀಟ್ ಸಿಕ್ಕರೆ ಸಾಕು ಎಂದು ಅಷ್ಟು ಹಣ ನೀಡಲು ಸಿದ್ಧವಿದ್ದರೂ ಸಹ ಸೀಟ್ ಸಿಗದೆ ಪರದಾಡುವಂತಾಗಿದೆ. ಸಾಕಷ್ಟು ಖಾಸಗಿ ಬಸ್‌ಗಳಿಗೆ ಆನ್‌ಲೈನ್ ಇಲ್ಲ ಜಯನಗರ, ಮೆಜೆಸ್ಟಿಕ್, ಬನಶಂಕರಿ ಇನ್ನಿತರೆ ಕಚೇರಿಗೆ ತೆರಳಿ ಕಾಯ್ದಿರಿಸಬೇಕಿದೆ. ಆದರೆ ಪ್ರಯಾಣ ದರ ದುಪ್ಪಟ್ಟಾಗಿರುವುದು ಪ್ರಯಾಣಿಕರಿಗೆ ಬೇಸರವನ್ನುಂಟು ಮಾಡಿದೆ.

Tags

Related Articles

Leave a Reply

Your email address will not be published. Required fields are marked *

Language
Close