About Us Advertise with us Be a Reporter E-Paper

Breaking Newsದೇಶಪ್ರಚಲಿತ

ಗಂಗಾ ನದಿಯ ನೀರು ಸ್ನಾನಕ್ಕೂ ಯೋಗ್ಯವಲ್ಲ!

ದೆಹಲಿ: ಗಂಗಾ ನದಿಯ ನೀರು ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಘೋಷಿಸಿದೆ.

ಹರಿದ್ವಾರದಿಂದ ಉತ್ತರ ಪ್ರದೇಶದ ಉನ್ನಾವೋ ವರೆಗಿನ ಗಂಗಾ ನದಿ ನೀರು ಕುಡಿಯಲು, ಸ್ನಾನ ಹಾಗೂ ಇತರೆ ಬಳಕೆಗೆ ಅರ್ಹವಾಗಿಲ್ಲ ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

ತಮ್ಮ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದ ಜನರು ಗಂಗೆಯ ನೀರನ್ನೇ ಕುಡಿಯುತ್ತಾರೆ, ಇಲ್ಲೇ ಸ್ನಾನವನ್ನು ಮಾಡುತ್ತಾರೆ. ಸಿಗರೇಟ್ ಪ್ಯಾಕ್ ಗಲಲ್ಲಿ ಹೇಗೆ ಎಚ್ಚರಿಕೆ ಸಂದೇಶವಿರುತ್ತದೆಯೋ ಹಾಗೆಯೇ ನದಿಯ ನೀರಿನ ಬಗೆಗೆ ಸಹ ಎಚ್ಚರಿಕೆ ಸಂದೇಶ ಸಾರಬೇಕಾಗುತ್ತದೆ ಎಂದು ಹಸಿರು ಪೀಠ ಅಭಿಪ್ರಾಯ ಪಟ್ಟಿದೆ.

ಎನ್‌ಜಿಟಿ ಮುಖ್ಯಸ್ಥ ಎ.ಕೆ. ಗೋಯೆಲ್ ನೇತೃತ್ವದ ಪೀಠವು ಗಂಗಾ ನದಿ ನೀರಿನ ಪರಿಶುದ್ದತೆ ಬಗೆಗೆ ಆತಂಕ ವ್ಯಕ್ತಪಡಿಸಿದೆ. ಅಲ್ಲದೆ ನದಿಯಿಂದ ನೂರು ಮೀಟರ್ ಅಂತರದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ ಗೆ ನಿರ್ದೇಶನನ ನೀಡಿದೆ.

ಎನ್ಎಂಸಿಜಿ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎರಡು ವಾರಗಳೊಳಗೆ ತಮ್ಮ ಅಧಿಕೃತ ವೆಬ್ ಸೈಟ್ ಗಳಲ್ಲಿ ಗಂಗೆಯಲ್ಲಿ ಸ್ನಾನ ಹಾಗೂ ಕುಡಿಯುವುದಕ್ಕೆ ಯೋಗ್ಯವಾದ ನಿರು ಎಲ್ಲೆಲ್ಲಿ ಸಿಗಲಿದೆ ಎನ್ನುವ ಕುರಿತು ಒಂದು ನಕ್ಷೆಯನ್ನು ಅಳವಡಿಸಬೇಕು ಎಂದು ಪೀಠವು ಆದೇಶಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close