About Us Advertise with us Be a Reporter E-Paper

Breaking Newsದೇಶಪ್ರಚಲಿತ
Trending

ಮೈನವಿರೇಳಿಸಿದ ಗರುಡ್‌ ಕಮಾಂಡೋಗಳ ಸ್ಟಂಟ್‌ (ವಿಡಿಯೋ)

ಜಾಗತಿಕ ಮಿಲಿಟರಿ ರಂಗದ ಅತ್ಯಂತ ನಿಷ್ಣಾತ ಎಲೈಟ್‌ ಕಮಾಂಡೋ ಪಡೆಗಳಲ್ಲಿ ಒಂದಾದ ಭಾರತೀಯ ವಾಯುಪಡೆಯ ಗರುಡ್‌ ಕಮಾಂಡೋಗಳು ದೂರದ ಆಸ್ಟ್ರೇಲಿಯಾದಲ್ಲಿ ತಮ್ಮ ಪರಾಕ್ರಮ ಮೆರೆದಿದ್ದಾರೆ.

ಭಾರತ, ಆಸ್ಟ್ರೇಲಿಯಾ, ಅಮೆರಿಕ ಸೇರಿದಂತೆ ಅಗ್ರಗಣ್ಯ ದೇಶಗಳ ವಾಯುಪಡೆಗಳು  ಜಂಟಿ ಸಮರಾಭ್ಯಾಸ ಆಪರೇಷನ್‌ ಪಿಚ್‌ ಡಾರ್ಕ್‌‌ನಲ್ಲಿ ಭಾಗಿಯಾಗಿವೆ.

ಇದರ ಭಾಗವಾಗಿ, ವಾಯುಪಡೆಯ ಸಿ-130ಜೆ ವಿಮಾನದಿಂದ ಪ್ಯಾರಾಚೂಟ್‌ ಕಟ್ಟಿಕೊಂಡು ಬಾನೆತ್ತರದಿಂದ ಭೂಮಿಗೆ ಜಿಗಿದ ಕಮಾಂಡೋಗಳು ಎಲ್ಲರ ಹುಬ್ಬೇರಿಸಿದ್ದಾರೆ. ಈ ಡೇರ್‌ಡೆವಿಲ್‌ ಸಾಹಸದಲ್ಲಿ ಗರುಡ್‌ಗಳು ತಮ್ಮ ಅಪ್ರತಿಮ ಕೌಶಲ್ಯ ಹಾಗು ನೈಪುಣ್ಯತೆಯನ್ನು ಮೆರೆದಿದ್ದಾರೆ.

2004ರಲ್ಲಿ ಸ್ಥಾಪನೆಯಾದ ಗರುಡ್‌ ಕಮಾಂಡೋ ಪಡೆಯು ದೇಶದ ವಾಯುನೆಲೆಗಳಿಗೆ ಭದ್ರತೆ ಒದಗಿಸುತ್ತದೆ. ಅಗತ್ಯ ಬಿದ್ದಲ್ಲಿ, ಭಯೋತ್ಫಾದನೆ ನಿಗ್ರಹ ಕಾರ್ಯಾಚರಣೆಯಲ್ಲೂ ಭಾಗಿಯಾಗುವ ಗರುಡ್‌ ಕಮಾಂಡೋಗಳು ಶತ್ರು ನೆಲೆಗೂ ನುಗ್ಗಿ ದಾಳಿ ಮಾಡಲು ಸಮರ್ಥರಾಗಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close