ಡಿ.1ರಿಂದ ಅನಿಲ ಭಾಗ್ಯ ಯೋಜನೆ ಜಾರಿ: ಖಾದರ್

Posted In : ಬೆಂಗಳೂರು, ರಾಜ್ಯ

ಬೆಂಗಳೂರು: ರಾಜ್ಯ ಸರಕಾರದ ವತಿಯಿಂದ ಡಿ.1ರಿಂದ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಹೇಳಿದರು.

ವಿಧಾನಸೌಧದಲ್ಲಿ ನಡೆದ ಸಭೆ ಬಳಿಕ ಮಾತನಾಡಿ, ರಾಜ್ಯದಲ್ಲಿರುವ ಪ್ರತಿಯೊಬ್ಬರಿಗೂ ಎಲ್‌ಪಿಜಿ ಗ್ಯಾಸ್ ಒದಗಿಸುವ ಸಂಬಂಧ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಆರಂಭಿಸಲಾಗುವುದು. ಕೇಂದ್ರ ಸರಕಾರದ ಉಜ್ವಲ ಯೋಜನೆಯಲ್ಲಿ ಸಂಪರ್ಕ ಸಿಗದವರಿಗೆಂದು, ರಾಜ್ಯ ಸರಕಾರ ಅನಿಲ ಭಾಗ್ಯ ಯೋಜನೆ ಆರಂಭಿಸಲಿದೆ ಎಂದು ತಿಳಿಸಿದರು. ಅನಿಲ ಭಾಗ್ಯ ಯೋಜನೆಯಲ್ಲಿ ಅಡುಗೆ ಸಿಲಿಂಡರ್, ಗ್ಯಾಸ್ ಓಲೆ ಹಾಗೂ ಎರಡು ಉಚಿತ ರಿಫೀಲ್‌ಗಳನ್ನು ಒದಗಿಸಲಾಗುವುದು.

ರಾಜ್ಯದಲ್ಲಿರುವ ಸುಮಾರು 15 ಲಕ್ಷ ಕುಟುಂಬಗಳಿಗೆ ಈ ಯೋಜನೆಯಲ್ಲಿ ಗ್ಯಾಾಸ್ ಸಂಪರ್ಕ ಪಡೆಯುವ ಸಾಧ್ಯತೆಯಿದೆ. ಈ ತಿಂಗಳಿನಿಂದ ಗ್ರಾಮ ಪಂಚಾಯಿತಿಗಳಲ್ಲಿ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಪಡೆಯುವ ಪ್ರತಿಯೊಂದು ಸಂಪರ್ಕಕ್ಕೂ ಸುಮಾರು 4040 ರೂ ಖರ್ಚಾಗುತ್ತದೆ. ಯೋಜನೆಗೆ ಒಟ್ಟಾರೆಯಾಗಿ ಸುಮಾರು 1200 ಕೋಟಿ ಅಗತ್ಯವಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು ಎಂದರು.

Leave a Reply

Your email address will not be published. Required fields are marked *

16 + 9 =

 
Back To Top