About Us Advertise with us Be a Reporter E-Paper

ಗುರು

ಗಣಪನಿಗೆ ಪ್ರಿಯವಾದ ಗೌರಿ ಹೂ

ಡಾ. ಶ್ರೀ ಲತಾ ಪದ್ಯಾಣ

ಳೆಗಾಲ ಬಂತೆಂದರೆ ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು, ಬಗೆಬಗೆಯ ಹೂವುಗಳು ಎದ್ದುಕಾಣುತ್ತವೆ. ಅದರಲ್ಲೂ ಬಣ್ಣ ಬಣ್ಣದ ಹೂವುಗಳು ಕಣ್ಣಿಗೆ ಆಕರ್ಷಣೀಯವಾಗಿದ್ದು ಹಬ್ಬಹರಿದಿನಗಳಲ್ಲಿ ಶ್ರೇಷ್ಠವೆನಿಸಿದೆ. ಪೂಜೆ ಪುನಸ್ಕಾರಗಳೆಂದರೆ ಹೂವುಗಳಿಲ್ಲದೆ ಸಾಗದು. ಅಂತೆಯೇ ಗೌರಿ ಗಣೇಶನ ಹಬ್ಬವನ್ನು ನೆನಪು ಮಾಡುವ ಹೂವೇ ಗೌರಿ ಹೂ. ಅಪರೂಪದ ಸುಂದರ ಹೂವು ಗಣೇಶನಿಗೆ ಅತ್ಯಂತ ಪ್ರಿಯವಾಗಿದ್ದು ಪೂಜೆಗೆ ಸಮರ್ಪಿಸ ಪಡುತ್ತದೆ.

ದಕ್ಷಿಣ ಕಾಡುಗಳಲ್ಲಿ,ಮಲೆನಾಡಿನ ತಪ್ಪಲಲ್ಲಿ ವಿಶೇಷವಾಗಿ ಕಂಡುಬರುವ ಗೌರಿ ಹೂವು ಪ್ರತಿ ವರ್ಷ ಮಳೆಗಾಲ ಬಂದೊಡನೆ ಚಿಗುರಿ ಬೆಳೆಯುವುದು. ಆಂಗ್ಲ ಭಾಷೆಯಲ್ಲಿ ಗ್ಲೋರಿಸಾ ಎಂದು ಕರೆಯಲ್ಪಡುವ ಇದು ಆರ್ಕಿಡ್ ವಂಶಕ್ಕೆ ಸೇರಿದೆ. ಇಂದ್ರನ ಬಳ್ಳಿ, ಕೆಂಡಹೂವು ಎಂದರೆ ಇದೇ ಹೂವಾಗಿದ್ದು, ಸಂಸ್ಕೃತದಲ್ಲಿ ಅಗ್ನಿಶಿಖಾ ಎನ್ನುತ್ತಾರೆ. ಇದು ಇತರೆ ಹೂಗಳಿಗಿಂತ ವಿಭಿನ್ನವಾಗಿದ್ದು ಔಷಧೀಯ ಗುಣಗಳನ್ನು ಸಹ ಹೊಂದಿದೆ. ಹದಿನೈದು ದಿನಗಳಿಂದ ಇಪ್ಪತ್ತು ದಿನಗಳವರೆಗೆ ದಿನಕ್ಕೊಂದರಂತೆ ಹೂ ಬಿಡುವ ಗೌರಿಯ ಬಣ್ಣ ಬಹು ಆಕರ್ಷಣೀಯವಾಗಿದೆ. ನಾಲ್ಕು ದಿನಗಳಲ್ಲಿ ಪೂರ್ಣವಾಗಿ ಅರಳುವ ಹೂವು ಎಂಟು ಹತ್ತು ದಿನಗಳ ಕಾಲ ಇರುವುದು.ಹೂವು ಆರಂಭದಲ್ಲಿ ಹಸಿರು ಬಣ್ಣದಿಂದ ಇದ್ದು ನಂತರ ಕೆಳ ಭಾಗದಲ್ಲಿ ಹಳದಿ ಹಾಗೂ ಮೇಲ್ಭಾಗದಲ್ಲಿ ಕೆಂಪು ಬಣ್ಣ ಆವರಿಸುತ್ತದೆ.ಆರು ಎಸಳುಗಳು ಇದ್ದು ಅವು ತಿರುಚಿ ನಿಂತಿರುತ್ತವೆ. ಅಂತಿಮವಾಗಿ ಹೂ ರಕ್ತವರ್ಣಕ್ಕೆ ತಿರುಗಿ ಉದುರುತ್ತದೆ. ಹೂವಿನ ವಿಶೇಷ ಆಕರ್ಷಣೆ ಎಂದರೆ ತಳಭಾಗದಲ್ಲಿರುವ ಹೂವಿನ ಕೇಸರಗಳು.

ಔಷಧೀಯ ಗುಣ: ಗೌರಿ ಹೂವಿನ ಗೆಡ್ಡೆಯು ಅತ್ಯಂತ ಉಪಕಾರಿಯಾಗಿದೆ. ಇದು ಶೋಧನ ಮಾಡದೆ ಉಪಯೋಗಿಸಬಾರದು. ಹುಣ್ಣುಗಳು, ಚರ್ಮರೋಗಗಳಿಗೆ ಲೇಪನವಾಗಿ ಉಪಯೋಗಿಸುವರು. ವಿಷಮ ಜ್ವರ, ಮೂಲವ್ಯಾಧಿ, ಕರುಳಿನ ಸೋಂಕು ಹೀಗೆ ಸುಮಾರು ಮೂವತ್ತು ವಿಧವಾದ ಕಾಯಿಲೆಗಳನ್ನು ವಾಸಿ ಮಾಡುವಲ್ಲಿ ಸಹಕಾರಿಯಾಗಿದೆ.

(ಲೇಖಕಿ, ಪ್ರಕೃತಿ ಚಿಕಿತ್ಸಾ ತಜ್ಞರು)

Tags

Related Articles

Leave a Reply

Your email address will not be published. Required fields are marked *

Language
Close