ಪ್ರತ್ಯೇಕತಾವಾದಿ ನಾಯಕನ ಮೇಲೆ ಗಂಭೀರ್ ವಾಗ್ದಾಳಿ

Posted In : ಕ್ರೀಡೆ

ದೆಹಲಿ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ತಂಡಕ್ಕೆ ಶುಭಾಶಯ ಕೋರಿದ ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಮಿರ್ವೈಜ್ ಉಮರ್ ವಿರುದ್ಧ ಹಿರಿಯ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹರಿಹಾಯ್ದಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಫಾರೂಕ್‌ಗೆ ಸಂದೇಶ ಕಳಿಸಿರುವ ಗಂಭೀರ್, ಗಡಿ ದಾಟಿ ಹೋಗಿ ಶುಭ ಕೋರಿ ಬನ್ನಿ. ಚೆನ್ನಾಗಿ ಪಟಾಕಿ ಸಿಡಿಸಬಹುದು. ಜೊತೆಗೆ ಈದ್ ಆಚರಿಸಬಹುದು. ಅಗತ್ಯಬಿದ್ದರೆ ಲಗೇಜ್ ಪ್ಯಾಕ್ ಮಾಡಲು ಮಾಡ್ತೀನಿ’ಎಂದು ಗಂಭೀರ್ ಹೇಳಿದ್ದಾರೆ.

ಪಾಕಿಸ್ತಾನ ಗೆಲುವು ಸಾಧಿಸಿದ ಬಳಿಕ ಟ್ವೀಟ್ ಮಾಡಿದ್ದ ಫಾರೂಕ್, ಈದ್ ಬೇಗ ಆಚರಿಸಿದಂತೆ ಭಾಸವಾಗುತ್ತಿದೆ. ಉತ್ತಮ ತಂಡ ಇಂದಿನ ದಿನವನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನ ತಂಡಕ್ಕೆ ಶುಭಾಶಯಗಳು’ ಎಂದಿದ್ದರು. ಇದಕ್ಕೂ ಮುಂಚೆ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿಯೂ ಪಾಕಿಸ್ತಾನ ಗೆದ್ದಾಗ ಫಾರೂಕ್ ಅಭಿನಂದಿಸಿ ಟ್ವೀಟ್ ಮಾಡಿದ್ದರು.

ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ರಾಷ್ಟ್ರ ವಿರೋಧಿ ಹೇಳಿಕೆಗಳಿಗೆ ಪ್ರಚಾರ ಕೊಡಬೇಡಿ ಎಂದು ರಾಜಕಾರಣಿಗಳು ಸೇರಿದಂತೆ ಹಲವರು ಮಾಧ್ಯಮಗಳಿಗೆ ಸಲಹೆ ನೀಡಿದ್ದರು.

Leave a Reply

Your email address will not be published. Required fields are marked *

ten + eight =

 
Back To Top