About Us Advertise with us Be a Reporter E-Paper

ವಿವಾಹ್

ನೀ ತಂದ ಕಾಣಿಕೆ…

- ಕೆ. ಶ್ರೀನಿವಾಸರಾವ್

ತನ್ಮಯಿ ಮತ್ತು ತರುಣ್‌ರ ಪ್ರೀತಿ ತುಂಬಾ ದಿನಗಳಿಂದ ನಡೆದಿತ್ತು. ಕಾಫಿ ಡೇನಲ್ಲಿ ಆರಂಭವಾಗಿದ್ದು, ಕೆ.ಎಫ್.ಸಿ ದಾಟಿ ಡೈರಿ ಡೇನಲ್ಲಿ ಮುಂದುವರೆದಿತ್ತು. ಇಬ್ಬರ ಮನೆಗಳಲ್ಲಿಯೂ ಗುಸುಗುಸು-ಪಿಸುಪಿಸು ಮುಗಿದು ಎಲ್ಲರೂ ಒಂದೆಡೆ ಸೇರಿ ವಿವಾಹದ ದಿನಾಂಕವನ್ನೂ ನಿಗದಿಗೊಳಿಸಿದರು. ಹೈಟೆಕ್ ಕಲ್ಯಾಣ ಮಂಟಪ, ದಿನಕ್ಕೆ ಐದಂಕಿ ಬಾಡಿಗೆ. ಭರ್ಜರಿ ಅಲಂಕಾರ, ಎಲ್ಲೆಡೆ ಝಗಮಗ, ಪುಷ್ಕಳ ಭೋಜನ ಮಧ್ಯಾಹ್ನ ಮದುವೆ ಮುಗಿದು ಸಂಜೆ ಆರತಕ್ಷತೆ. ಇಬ್ಬರೂ ಸಾಫ್‌ಟ್ವೇರ್‌ಗಳೆಂದ ಮೇಲೆ ಗೆಳೆಯರು ಬಂಧುಗಳಿಗೇನು ಬರವೇ? ಸಾಲುಗಟ್ಟಿ ಬಂದರು. ಕವರ್‌ಗಳು, ಬಾಕ್‌ಸ್ಗಳದ್ದೇ ಒಂದು ರಾಶಿ! ವರನ ಕೋಣೆಯಲ್ಲಿ ತುಂಬಿಟ್ಟರು. ಇಂದೊಂದು ರಾಜನ ಮದುವೆಯಂತೆ ಕಂಗೊಳಿಸುತ್ತಿತ್ತು.

ಮರುದಿನ ಸಂಜೆ ವರನ ಗೃಹದಲ್ಲಿ ಗಿಫ್‌ಟ್ಗಳ ಪರಿಶೀಲನೆ ನಡೆಯುತ್ತಿತ್ತು. ಸುತ್ತಲೂ ಮನೆಯವರೆಲ್ಲ ಸೇರಿದ್ದು ಎಲ್ಲರ ಕಣ್ಣಲ್ಲೂ ಕುತೂಹಲದ ಕಡಲು ಮನೆ ಮಾಡಿತ್ತು. ಕವರ್‌ಗಳನ್ನು ಒಡೆದು ಹಣ ಎಣಿಸಿ ಒಂದೆಡೆ ಇಟ್ಟಾಯ್ತು. ಇದೀಗ ಬಾಕ್‌ಸ್ಗಳ ಸರದಿ ಶುರುವಯ್ತು. ಗಡಿಯಾರ, ಶೋಪೀಸ್, ಇಸ್ತ್ರಿಪೆಟ್ಟಿಗೆ, ಮಿಕ್ಸಿ, ಹೂದಾನಿ ಒಂದೇ ಎರಡೇ! ಒಂದು ಬಾಕ್‌ಸ್ಗೆ ಮಾತ್ರ ಬಣ್ಣದ ಪೇಪರ್ ಬಲವಾಗಿ ದಾರ ಕಟ್ಟಿದ್ದರು. ಎರಡೂ ಬದಿ ಹೆಸರಿರಲಿಲ್ಲ. ಅನಾಮಧೇಯ ಗಿಫ್‌ಟ್ ಅದಾಗಿತ್ತು.

ಯಾರ ಕಡೆಯವರದ್ದಿರಬಹುದು?‘ಬಹುಶಃ ನಮ್ಮವರದ್ದೇ, ನಮ್ಮಲ್ಲಿ ಬಹಳ ಜನ ಪ್ರಚಾರ ಪ್ರಿಯರಲ್ಲ, ಹಾಗಾಗಿ ಹೆಸರು ಹಾಕಿಕೊಂಡಿಲ್ಲ’. ತರುಣ್‌ನ ಆತ್ಮ ಪ್ರಶಂಸೆಗೆ ತಲೆದೂಗಿದ ಅವನ ಭಾವಮೈದುನ ಬಾಕ್‌ಸ್ನ ರ್ಯಾಪರ್ ತೆಗೆದು ಪೆಟ್ಟಿಗೆ ತೆರೆದ. ಒಮ್ಮೆಲೆ ನೋಡುತ್ತಿದ್ದವರೆಲ್ಲರೂ ಘೊಳ್ಳೆಂದು ನಗಲಾರಂಭಿಸಿದರು. ಅದರಲ್ಲೇನಿತ್ತು ಗೊತ್ತ ‘ಕಿತ್ತು ಹೋದ ಹಳೆಯ ಚಪ್ಪಲಿಗಳು!’

ಹಿಂದಿನ ದಿನ ವರ ತರುಣ್ ಮದುವೆ ಮನೆಗೆ ಬರುವಾಗ ಹಳೆಯ ಮೆಟ್ಟಿಕೊಂಡು ಬಂದಿದ್ದ, ಆರತಕ್ಷತೆ ವೇಳೆಗೆ ಹೊಚ್ಚ ಹೊಸ ಶೂ ಧರಿಸಿದವನು ಆ ಚಪ್ಪಲಿಗಳನ್ನು ಮೂಲೆಗೆಸೆದಿದ್ದನು. ಅವರ ಮನೆ ಕೆಲಸದ ಆಳು ಅವುಗಳನ್ನು ಯಾವುದೋ ಬದಿಗೆಸೆದಿದ್ದ ಖಾಲಿ ಗಿಫ್‌ಟ್ ಬಾಕ್‌ಸ್ನಲ್ಲಿಟ್ಟು ರ್ಯಾಪರ್ ಸುತ್ತಿ ಇಟ್ಟಿದ್ದ. ಅದು ಹೇಗೋ ಆ ಬಾಕ್‌ಸ್ ಗಿಫ್‌ಟ್ಗಳ ಗುಂಪಲ್ಲಿ ಸೇರಿತ್ತು.

ತರುಣ್ ಮಂಕುತಿಮ್ಮನಂತಾಗಿಬಿಟ್ಟಿದ್ದ. ಇಂದಿಗೂ ಆಗಾಗ ತನ್ಮಯಿ ತನ್ನ ಗಂಡನನ್ನು ‘ನೀ ತಂದ ಕಾಣಿಕೆ, ಹಳೇ ಚಪ್ಲಿ ಮಾಲಿಕೆ’ ಎಂದು ಛೇಡಿಸುತ್ತಿರುತ್ತಾಳೆ. ಆ ಸನ್ನಿವೇಶವು ನಮ್ಮಿಬ್ಬರ ಪ್ರೀತಿಯನ್ನು ಇನ್ನಷ್ಟು ಜಾಸ್ತಿ ಮಾಡಿದೆ. ಆದರೆ ಹೀಗೆ ನನ್ನನ್ನು ಅವಳು ರೇಗಿಸುವಾಗ ಸುಂದರವಾಗಿ ಕಾಣುತ್ತಾಳೆ. ಅವಳೇ ನನ್ನ ಪ್ರೀತಿಯ ಅರ್ಧಾಂಗಿ.

Tags

Related Articles

Leave a Reply

Your email address will not be published. Required fields are marked *

Language
Close