About Us Advertise with us Be a Reporter E-Paper

Breaking Newsದೇಶಪ್ರಚಲಿತ

ತಲೆಗೆ ಎಣ್ಣೆ ಜಾಸ್ತಿ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿ…!

ಮುಂಬೈ: ಚಿಕ್ಕ ಚಿಕ್ಕ ಕಾರಣಗಳಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಮುಂಬೈನಲ್ಲಿ ಬಾಲಕಿಯೊಬ್ಬಳು  ತಾಯಿ ತಲೆ ಕೂದಲಿಗೆ ಎಣ್ಣೆ ಜಾಸ್ತಿ ಹಚ್ಚಿದ್ದರೆಂಬ ಕ್ಷುಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಮುಂಬೈನಲ್ಲಿ ನಡೆದಿದೆ.

ಬಾಲ್ಕಂನ ಭಗೀರಥ ಟವರ್ ನಿವಾಸಿ ವಿಜಯಾ ಬೋಯಿರ್ (13) ಮೃತ ಬಾಲಕಿ. ಬುಧವಾರ ಮುಂಜಾನೆ ಶಾಲೆಗೆ ತೆರಳಲು ಸಿದ್ಧಳಾಗುತ್ತಿದ್ದ ಬಾಲಕಿಯ ತಲೆಗೆ ಆಕೆಯ ತಾಯಿ ಎಣ್ಣೆ ಹಾಕುತ್ತಿದ್ದರು. ಆಗ ಆಚಾತುರ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆ ಹಾಕಿದ್ದಾರೆ. ಇಂಥ ಕ್ಷುಲಕ ಘಟನೆಯಿಂದ ಮನನೊಂದ ಬಾಲಕಿ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಕಪುರ್ಬವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close