About Us Advertise with us Be a Reporter E-Paper

Breaking Newsರಾಜ್ಯ

ಬಾಲಕಿ ಜತೆ ಓಡಿಹೋಗಿದ್ದಕ್ಕೆ ಯುವಕನ ಮನೆಗೆ ಬೆಂಕಿ!

ದಾವಣಗೆರೆ: ಅನ್ಯ ಸಮುದಾಯದಯ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಮನೆಗೆ ಬೆಂಕಿ ಇಟ್ಟು ಮತ್ತೊಂದು ಮನೆಯ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಯಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಯಲ್ಲಪುರ ಗ್ರಾಮದ ಸುನೀಲ್ ಅದೇ ಗ್ರಾಮದ ಬೇರೆ ಸಮುದಾಯದ ಅಪ್ರಾಪ್ತೆಯನ್ನ ಪ್ರೀತಿಸುತ್ತಿದ್ದ. ಮನೆಯವರ ವಿರೋಧದ ನಡುವೆಯೂ ಶನಿವಾರ ಬಾಲಕಿಯೊಂದಿಗೆ ಓಡಿ ಹೋಗಿದ್ದಾನೆ. ಈ ಸಂಬಂಧ ಬಾಲಕಿ ಪೋಷಕರು ಸುನೀಲ್ ವಿರುದ್ಧ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಸ್ಕೋ ಹಾಗೂ ಕಿಡ್ನಾಪ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುನೀಲ್ ನನ್ನು ಬಂಧಿಸಿದ್ದರು.

ಆದ್ರೆ ಕಳೆದ ರಾತ್ರಿ ಸುನೀಲ್ ಮನೆ ಮೇಲೆ ಬಾಲಕಿಯ ಪೋಷಕರು ದಾಳಿ ಮಾಡಿ ಮನೆಗೆ ಬೆಂಕಿ ಇಟ್ಟಿದ್ದಾರೆ. ಅಲ್ಲದೆ ಮತ್ತೊಂದು ಮನೆಯ ಬಾಗಿಲು ಸಾಮಾಗ್ರಿಗಳನ್ನು ಧ್ವಂಸ ಮಾಡಿದ್ದಾರೆ. ಈ ಸಂಬಂಧ ಸುನೀಲ್ ಪೋಷಕರು ಬಾಲಕಿ ಮನೆಯವರ 10 ಜನರ ಮೇಲೆ ಹರಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close