About Us Advertise with us Be a Reporter E-Paper

Breaking Newsದೇಶ

ಬಾಲಕಿಯರ ಮೇಲೆ 11 ಮಂದಿ ಯುವಕರಿಂದ ಸಾಮೂಹಿಕ ಅತ್ಯಾಚಾರ

ಜಾರ್ಖಂಡ್: ಸಹಾಯ ಕೇಳಿದ ಬಾಲಕಿಯರ ಮೇಲೆಯೇ 11 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್‌ನ ಲೋಹರ್‌ದಗ್ಗಾ ಎಂಬಲ್ಲಿ ನಡೆದಿದೆ.

ಅಪ್ರಾಪ್ತೆಯರು ನೀಡಿದ ದೂರಿನನ್ವಯ ಎಲ್ಲ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮ್ಮ ನೆರೆಮನೆಯವರ ಜತೆ ಬೈಕ್‍ನಲ್ಲಿ ತೆರಳಿದ್ದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ. ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ಇದ್ಕಕ್ಕಿದ್ದಂತೆ ಕೆಟ್ಟು ನಿಂತಿದೆ. ಹೀಗಾಗಿ ತಮ್ಮ ಸ್ನೇಹಿತನಿಗೆ ಮೆಕ್ಯಾನಿಕ್ ಕಳುಹಿಸುವಂತೆ ಬಾಲಕಿ ಕರೆ ಮಾಡಿದ್ದಳು.

ಆದ್ರೆ ಆರೋಪಿ ಸ್ನೇಹಿತ ಮೆಕ್ಯಾನಿಕ್ ಬದಲು ತನ್ನ ಸ್ನೇಹಿತರನ್ನು ಕಳುಹಿಸಿ ಈ ದುಷ್ಕೃತ್ಯ ಎಸಗಿದ್ದಾನೆ. ಬಾಲಕಿಯರನ್ನು ಬೆದರಿಸಿದ ಯುವಕರು, ನಿರ್ಜನ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಬಳಿಕ ಅವರ ಬಳಿಯಿದ್ದ ಮೊಬೈಲ್‌ ಕಸಿದುಕೊಂಡು ಬೆದರಿಕೆ ಹಾಕಿ ಕಳುಹಿಸಿದ್ದಾರೆ. ಬಾಲಕಿಯರು ಪೊಲೀಸರಿಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Tags

Related Articles

Leave a Reply

Your email address will not be published. Required fields are marked *

Language
Close