About Us Advertise with us Be a Reporter E-Paper

Breaking Newsದೇಶಪ್ರಚಲಿತ

ನನಗೂ ಒಂದು ಗೋವು ನೀಡಿ: ಓವೈಸಿ

ಹೈದರಾಬಾದ್: ಪ್ರತಿ ವರ್ಷ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ತೆಲಂಗಾಣದ ಮತದಾರರಿಗೆ ಸುಮಾರು ಒಂದು ಲಕ್ಷ ಉಚಿತ ಗೋವುಗಳನ ಪೂರೈಸುವ ಭರವಸೆ ನೀಡಿದ್ದು, ಬಿಜೆಪಿಯವರು ನನಗೂ ಸಹ ಒಂದು ಗೋವು ನೀಡುತ್ತಾರೆಯೇ? ಎಂದು ಎಐಎಂಐಎಂ ಮುಖ್ಯಸ್ಥ , ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.

ಬಿಜೆಪಿ ತೆಲಂಗಾಣದ ಮತದಾರರಿಗೆ ಉಚಿತವಾಗಿ ಸುಮಾರು 1 ಗೋವು ಕೊಡುವುದಾಗಿ ಭರವಸೆ ನೀಡಿದೆ. ಅವರು ನನಗೂ ಒಂದು ಗೋವನ್ನು ಕೊಟ್ಟರೆ ನಾನು ಗೌರವದಿಂದ ಸಲಹುವುದಾಗಿ ಭರವಸೆ ನೀಡುತ್ತೇನೆ. ಇದನ್ನು ತಮಾಷೆಗಾಗಿ ಹೇಳುತ್ತಿಲ್ಲ. ನನ್ನ ಬೇಡಿಕೆ ಕುರಿತು ಯೋಚಿಸಿ’ ಎಂದು ಓವೈಸಿ ಗಂಭೀರವಾಗಿಯೇ ಹೇಳಿದ್ದಾರೆ.

ಬಿಜೆಪಿಯ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಎನ್‌ವಿಎಸ್‌ಎಸ್ ಪ್ರಭಾಕರ್ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣ ಮತದಾರರಿಗೆ ಹಬ್ಬ ಮತ್ತು ಇತರ ಸಂದರ್ಭಗಳಲ್ಲಿ, ಪ್ರತಿ ವರ್ಷ ಒಂದು ಲಕ್ಷ ಗೋವುಗಳನ್ನು ಉಚಿತವಾಗಿ ಭರವಸೆ ನೀಡುತ್ತೇವೆ ಎಂದು ಹೇಳಿದ್ದರು.

Tags

Related Articles

Leave a Reply

Your email address will not be published. Required fields are marked *

Language
Close