About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ದೇವಾಲಯದ ಅಭಿವೃದ್ಧಿಗೆ ಸಹಾಯ ಭರವಸೆ: ಸುಧಾಮೂರ್ತಿ

Give to Help development of the temple: Sudamurthy

ಕೆ.ಆರ್.ನಗರ: ಚುಂಚನಕಟ್ಟೆೆ ಶ್ರೀರಾಮ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಬಗ್ಗೆೆ ಸರಕಾರದ ಜನಪ್ರತಿನಿಧಿಗಳೊಂದಿಗೆ ಮಾತನಾಡಿ, ದೇವಾಲಯದ ಅಭಿವೃದ್ಧಿಗೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭರವಸೆ ನೀಡಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಕ್ಕೆೆ ಆಗಮಿಸಿ ಇತಿಹಾಸ ಪ್ರಸಿದ್ಧ ತಾಲೂಕಿನ ಚುಂಚನಕಟ್ಟೆೆ ಶ್ರೀರಾಮ ದೇವಾಲಯಕ್ಕೆೆ ಭೇಟಿನೀಡಿ ದೇವರ ದರ್ಶನ ಪಡೆದರು.

ನಂತರ ಇಲ್ಲಿನ ದೇವತೆಗಳ ಇತಿಹಾಸ, ವಿಶೇಷತೆಗಳ ಬಗ್ಗೆೆ ದೇವಾಲಯದ ಅರ್ಚಕರು ಮತ್ತು ಹಿರಿಯ ನಾಗರಿಕರಿಂದ ಮಾಹಿತಿ ತಿಳಿದುಕೊಂಡು, ಗ್ರಾಮಸ್ಥರು ಮತ್ತು ಭಕ್ತಾಧಿಗಳ ಜತೆ ಮುಕ್ತವಾಗಿ ಮಾತುಕತೆ ನಡೆಸಿದರು. ರಾಮಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಉಪ-ತಹಸೀಲ್ದಾರ್ ಪುಟ್ಟಮಾದಯ್ಯ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಮೋಹನ್, ಮುಜರಾಯಿ ಇಲಾಖೆಯ ನಾಗಶ್ರೀ, ಸಾರ್ವಜನಿಕರು ಇದ್ದರು.

Tags

Related Articles

Leave a Reply

Your email address will not be published. Required fields are marked *

Language
Close