About Us Advertise with us Be a Reporter E-Paper

ಯಾತ್ರಾ

ಈ ಟವರ್‌ನ ಪವರ್‌ ಗೊತ್ತಾ ನಿಮಗೆ?

ಸಂತೋಷ್ ರಾವ್. ಪೆರ್ಮುಡ

ಗೋವಾ ಎಂದಾಕ್ಷಣ ತಕ್ಷಣ ನೆನಪಾಗುವುದು ಇಲ್ಲಿನ ವೈವಿಧ್ಯಮಯ ಬೀಚ್‌ಗಳು, ವಿದೇಶೀಯರು ಮತ್ತು ಗೋವಾದ ಪೆನ್ನಿ. ಈ ಪ್ರವಾಸಿ ತಾಣದ ಕುರಿತಾದ ವಿವಿಧ ರೀತಿಯ ಕೈಪಿಡಿಗಳು ಮತ್ತು ಪ್ರವಾಸಿ ಮಾರ್ಗದರ್ಶಿಗಳಲ್ಲಿ ಗೋವಾದ ಅದ್ಭುತ ಸ್ಮಾರಕಗಳಲ್ಲೊಂದಾದ ಸೇಂಟ್ ಅಗಸ್ಟೀನ್ ಟವರ್‌ನ ಚಿತ್ರವನ್ನು ನಾವು ನೋಡದೇ ಇರಲು ಸಾಧ್ಯವೇ ಇಲ್ಲ. ಗೋವಾ ಎಂದಾಕ್ಷಣ ಈ ಟವರ್ ಗೋವಾದ ಹೆಗ್ಗುರುತಾಗಿ ಗೋಚರಿಸುತ್ತದೆ. ಇದರ ಎತ್ತರ ಸುಮಾರು 46 ಮೀಟರ್ ಇದ್ದು ಚರ್ಚ್‌ನ ಮುಂಭಾಗದ ಒಂದು ಮುಖ್ಯ ಭಾಗದಂತೆ ಕಂಡುಬರುತ್ತದೆ. ಈ ಸ್ಥಳ ಸುಮಾರು 3-4 ಕಿ.ಮೀ ದೂರದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಹಳೆಯ ಗೋವಾ ಪಟ್ಟಣದಲ್ಲಿ ಅಸ್ತಿತ್ವದಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಅದ್ಭುತ ಚರ್ಚ್‌ಗಳ ಪೈಕಿ ಈಗ ಉಳಿದಿರುವುದು ಕೇವಲ 10 ಚರ್ಚ್‌ಗಳು ಮಾತ್ರ. ಇವುಗಳಲ್ಲಿ 4 ಚರ್ಚ್‌ಗಳು ವಿಶೇಷ ಪ್ರಾರ್ಥನಾ ಮಂದಿರಗಳಾಗಿದ್ದು, ಈ ಚರ್ಚ್‌ಗಳು ವೆಲ್ಲಾ ಗೋವಾದ ಸುತ್ತ ಮುತ್ತಲಿನಲ್ಲಿರುವ ಏಳು ಗುಡ್ಡಗಳ ಮಧ್ಯದಲ್ಲಿದೆ. ಈ ಪವಿತ್ರವಾದ ಬೆಟ್ಟಗಳಲ್ಲಿ ಅಗಸ್ಟೀನ್ ಅನುಯಾಯಿ ಸನ್ಯಾಸಿಗಳ ಅಸಂಖ್ಯ ಸಂಖ್ಯೆಯ ಪ್ರಾರ್ಥನಾ ಮಂದಿರಗಳಿವೆ ಎಂದು ಹೇಳಲಾಗುತ್ತಿದೆ. ಅವುಗಳ ಪೈಕಿ ಈ ಸಂತ ಅಗಸ್ಟೀನ್ ಚರ್ಚ್‌ನ್ನು ಕ್ರಿ.ಶ 1587 ನೇ ಇಸವಿಯಲ್ಲಿ ಗೋವಾಕ್ಕೆ ಆಗಮಿಸಿದ ಸಂತ ಅಗಸ್ಟೀನ್‌ನ ಅನುಯಾಯಿಗಳು ಕ್ರಿ.ಶ 1602 ರಲ್ಲಿ ನಿರ್ಮಿಸಿದರೆಂಬ ಉಲ್ಲೇಖವಿದೆ.

ಈ ಗೋಪುರವು ಸಂತ ಅಗಸ್ಟೀನ್ ಚರ್ಚ್‌ನ 4 ಮುಖ್ಯ ಗೋಪುರಗಳ ಪೈಕಿ ಪ್ರಮುಖವಾದ ಗೋಪುರವಾಗಿದ್ದು ಈಗಲೂ ಗಟ್ಟಿಮುಟ್ಟಾಗಿ ಶಿಥಿಲವಾಗದೇ ನಿಂತ ಸ್ಥಿತಿಯಲ್ಲಿಯೇ ಇದೆ. ಈ ಚರ್ಚ್‌ನ ನಿರ್ಮಾಣದ ಇದನ್ನು ಜಂಬು ಮಣ್ಣಿನಿಂದ ಬೃಹತ್ ಗಾತ್ರದಲ್ಲಿ 46 ಮೀಟರ್ ಎತ್ತರದಲ್ಲಿ 4 ಮಹಡಿಯ ಕಟ್ಟಡವಾಗಿ ನಿರ್ಮಿಸಲಾಗಿತ್ತು. ಈ ಗೋಪುರವನ್ನು ದೂರದಿಂದಲೇ ಎಲ್ಲರಿಗೂ ಕಾಣುವಂತೆ ನಿರ್ಮಿಸಲಾಗಿದ್ದು ಚರ್ಚ್‌ನ ಒಳಗೆ ಎಂಟು ಸಮೃದ್ದವಾದ ಪ್ರಾರ್ಥನಾ ಮಂದಿರಗಳು, 4 ಪೂಜಾ ಸ್ಥಳ (ಬಲಿಪೀಠಗಳು), ಒಂದು ಮಹಿಳಾ ಧಾರ್ಮಿಕ ಸಂಘಟನಾ ಕೊಠಡಿ ಹಾಗೂ ಹಲವಾರು ಸಣ್ಣ ಸಣ್ಣ ಕೋಣೆಗಳು ಒಳಗೊಂಡಿದ್ದು ಇಂದು ಇವು ಕೇವಲ ಅವಶೇಷಗಳಾಗಿ ಗತ ವೈಭವವನ್ನು ಸಾರುತ್ತಿವೆ. ಈ ಪ್ರಾರ್ಥನಾ ಮಂದಿರದ ಅವಶೇಷಗಳನ್ನು ಇಂದೂ ಕಾಣಬಹುದಾಗಿದೆ.

ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 400 ವರ್ಷಗಳ ದೀರ್ಘ ಕಾಲಾವಧಿಯನ್ನು ತೆಗೆದುಕೊಂಡಿರಬಹುದೆಂದು ಇತಿಹಾಸಕಾರರು ಅಂದಾಜಿಸಿದ್ದು, ಇದು ಸುಮಾರು 1597 ಮತ್ತು 1602ನೇ ಇಸವಿಯ ಮಧ್ಯಭಾಗದಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಿರಬಹುದೆಂದು ತಜ್ಞರ ಅಂಬೋಣ. ಈ ಒಂದು ಅದ್ಭುತವಾದ ಕಟ್ಟಡದ ನಿರ್ಮಾತೃ ಅಥವಾ ಅದರ ನೀಲ ನಕ್ಷೆ ತಯಾರಿಸಿದಾತನ ಕುರಿತು ಇತಿಹಾಸದಲ್ಲಿ ಎಲ್ಲೂ ಉಲ್ಲೆಖವಿಲ್ಲವಾಗಿದ್ದು, ಈತ ಖಂಡಿತಾವಾಗಿಯೂ ಒಬ್ಬ ಇಟಾಲಿಯನ್ ವ್ಯಕ್ತಿಯಾ ಗಿರಬಹುದೆಂದು ಇಲ್ಲಿನ ಕಟ್ಟಡ ರಚನಾ ಗಮನಿಸಿ ಅಂದಾಜಿಸಲಾಗಿದೆ.

ಗೋವಾಕ್ಕೆ ಆಗಮಿಸಿದ ಜ್ಯೂಲಿಯೋ ಸಿಮಾವೋ ಎಂಬಾತನು ಸುಪ್ರಸಿದ್ದ ಸ್ಪಾನಿಶ್ ವಾಸ್ತು ಶಾಸ್ತ್ರಜ್ಞನಾದ ಜೂವಾನ್-ಡಿ-ಹೆರೇರಾರಿಂದ ಪ್ರಭಾವಿತನಾಗಿ ಆಕಸ್ಮಿಕವಾಗಿ ಈ ಗೋಪುರದ ರಚನೆಯನ್ನು ಪ್ರಾರಭಿಸಿದನೆಂದು ಹೇಳಲಾಗಿದೆ. ಈ ಜ್ಯೂಲಿ ಸಿಮಾವೋ ಸ್ಪೇನ್ ಮತ್ತು ಪೂರ್ಚುಗಲ್‌ನ ರಾಜ ಎರಡನೇ ಫಿಲಿಪ್ ಭಾರತದಲ್ಲಿ ಪೋರ್ಚುಗಲ್‌ನ ವಸಾಹತುಗಳ ಸ್ಥಾಪನೆಯ ಸಂದರ್ಭದಲ್ಲಿ ಮುಖ್ಯ ವಾಸ್ತು ಶಾಸ್ತ್ರಜ್ಞನಾಗಿದ್ದ ಎಂಬುವುದು ಗಮನಿಸಬೇಕಾದ ಅಂಶವಾಗಿದೆ. ಈ ಚರ್ಚ್ ಹಾಗೂ ಗೋಪುರದ ನಿರ್ಮಾಣ ಕಾರ್ಯವು 16ನೇ ಶತಮಾನದ ಆರಂಭದಲ್ಲಿ ಪೂರ್ಣಗೊಳ್ಳುವ ಗೋವಾದ ಈ ಱಛಿ ಎ್ಟ್ಞ ಘೆಟ ಖಛ್ಞ್ಟಿ ಎ್ಟ್ಚ ಇ್ಠ್ಟ್ಚಱ ನ್ನು ಅಗಸ್ಟೀನಿಯನ್ನರ ಅತ್ಯಂತ ಪ್ರಮುಖವಾದ ಮೂರು ಚರ್ಚ್‌ಗಳ ಪೈಕಿ ಒಂದು ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ (ಪ್ರಪಂಚದಾದ್ಯಂತ) ಘೋಷಿಸಲಾಯಿತು. ಉಳಿದೆರಡು ಚರ್ಚ್‌ಗಳನ್ನು ರಾಜ್ವಾಳಿಕೆಯ ಕಾಲದ ಸಭೆ ಅಥವಾ ನ್ಯಾಯಾಲಯಗಳಿಗೆ ಬಳಸುವ ಗೃಹಗಳೆಂದು ಘೋಷಿಸಲಾಗಿತ್ತು.

ಚರ್ಚ್‌ನ ಒಳ ಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಪೂಜಾಸ್ಥಳದಲ್ಲಿ (ಬಲಿಪೀಠ) ಮಿನುಗುವ ಎತ್ತರದ ಕಪಾಟನ್ನು ಅಳವಡಿಸಲಾಗಿದ್ದು, ಸ್ವರ್ಣಲೇಪಿತ ಕಮಾನುಗಳನ್ನು ಇಲ್ಲಿ ಅಳವಡಿಸಲಾಗಿತ್ತು. ಈ ಕಮಾನುಗಳ ಕುರುಹುಗಳು ವರ್ಷದ ಹಿಂದಿನವರೆಗೂ ಕಾಣಿಸುತ್ತಿತ್ತು. ಈ ಕಮಾನುಗಳು ಆಗಸ್ಟೀನ್ ಸನ್ಯಾಸಿಗಳ ಬೃಹತ್ ವಾದ್ಯಮೇಳಗಳ ಕಾರ್ಯಕ್ರಮಗಳನ್ನು ನೀಡಲು ವಿಶಾಲವಾದ ಸ್ಥಳಾವಕಾಶವನ್ನು ಒದಗಿಸುತ್ತಿದ್ದವು.

ಈಗ ಈ ಚರ್ಚ್‌ನ ಮೇಲ್ಚಾವಣಿಗಳೆಲ್ಲವು ಕಿತ್ತು ಹೋಗಿ ಆಕಾಶವನ್ನು ನೋಡುತ್ತಿದ್ದು, ಈಗ ಇದರ ಮುಂಭಾಗದ ಕಾಮಾನುಗಳನ್ನು ಸ್ಥಳೀಯರು ಕುಳಿತುಕೊಂಡು ಹರಟುವ ಸ್ಥಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶಾಲವಾದ ಚಾವಣಿಯು ನೋಡಲು ಕೊಳವೆಯಂತಿದ್ದು ಇದು ತನ್ನ ಅಗಾಧವಾದ ಭಾರವನ್ನು ತಾಳಲಾರದೆ ಪೂರ್ತಿಯಾಗಿ ಕುಸಿದು ಬಿದ್ದಿದ್ದು ಕೇವಲ ಇದರ ಅಡಿಪಾಯ ಹಾಗೂ ಹಿಂಭಾಗದ ಬೃಹತ್ ಮತ್ತು ವಿವಿಧ ಕೊಠಡಿಗಳನ್ನು ಮತ್ತು ವಾಸ್ತು ಶಿಲ್ಪಿಯ ಕೈಚಳಕವನ್ನು ಈಗಲೂ ವೀಕ್ಷಿಸಬಹುದಾಗಿದೆ.

1835ರಲ್ಲಿ ಭಾರತದಲ್ಲಿ ಪೋರ್ಚುಗೀಸ್ ಸರಕಾರದ ಧಾರ್ಮಿಕ ನೀತಿ ಮತ್ತು ನಿಯಮಾವಳಿಗಳ ಕಾರಣಗಳಿಂದಾಗಿ ಈ ಚರ್ಚ್ ಜನರಿಂದ ಪೂರ್ತಿ ನಿರ್ಲಕ್ಷ್ಯಕ್ಕೊಳಗಾಗಿ 1842ರಲ್ಲಿ ಇದರ ಛಾವಣಿಯೇ ಕುಸಿದು ಬಿದ್ದು ಚರ್ಚ್ ನಿಧಾನವಾಗಿ ಪೂರ್ತಿಯಾಗಿ ನೆಲ ಕಚ್ಚಲಾರಂಭಿಸಿತು. ಇಂದು ಚರ್ಚ್‌ನ ಬಹುಭಾಗ ಪೂರ್ತಿ ನಾಮಾವಶೇಷವಾಗಿದ್ದು ಇದರ ಮುಂಭಾಗದ ಗೋಪುರ ಈಗಲೂ ಚಳಿ, ಗಾಳಿ ಮತ್ತು ಮಳೆ ಬಿಸಿಲೆನ್ನದೆ ಗಟ್ಟಿಮುಟ್ಟಾಗಿ ನಿಂತಿದೆ. ಒಳ ಪ್ರಾಂಗಣ ಹಾಗೂ ಕೆಲ ಗೋಡೆಗಳಂತೂ ಹಳೆಯ ಕಾಲದ ವಾಸ್ತುಶಿಲ್ಪ ಹಾಗೂ ಪಳಗಿದ ಕೆಲಸಗಾರಿಕೆಯನ್ನು ಇನ್ನೂ ಗಟ್ಟಿಮುಟ್ಟಾಗಿ ಉಳಿಯುವ ಮೂಲಕ ಜಗತ್ತಿಗೆ ಸಾರುತ್ತಿವೆ.

ಈ ಚರ್ಚ್‌ನ ಬೃಹತ್ ಗಾತ್ರದ ಗಂಟೆಯನ್ನು 1842ರಲ್ಲಿ ಅಲ್ಲಿಂದ ಇಳಿಸಿ ಪಣಜಿಯ ಚರ್ಚ್‌ಗೆ ಸ್ಥಳಾಂತರಿಸಲಾಗಿದ್ದು ಇದನ್ನು ಈಗಲೂ ಪಣಜಿಯ ಚರ್ಚ್‌ನಲ್ಲಿ ವೀಕ್ಷಿಸಬಹುದಾಗಿದೆ. 1931 ರಲ್ಲಿ ಮುಂಬಾಗದ ಗೋಪುರದ ಅರ್ಧಭಾಗ ಹಾಗೂ ಇನ್ನುಳಿದ ಭಾಗಗಳು 1938 ರಲ್ಲಿ ಭಾಗಶಃ ಕುಸಿದು ಬಿತ್ತು. ಗೋಪುರದ ಉಳಿದಿರುವ ಅರ್ಧ ಇಂದು ಸಂತ ಅಗಸ್ಟೀನ್ ಟವರ್ ವೀಕ್ಷಿಸಲು ಬರುವ ಲಕ್ಷ ಲಕ್ಷ ಮಂದಿ ಪ್ರವಾಸಿಗರು ನೋಡಬಹುದಾಗಿದೆ.

ಸಂತ ಅಗಸ್ಟೀನ್ ಸನ್ಯಾಸಿಗಳಿಂದ ಸ್ಥಾಪಿತವಾಗಿ ಈಗ ಕೇವಲ ಅವಶೇಷವಾಗಿರುವ ಸಂತ ಅಗಸ್ಟೀನ್ ಗೋಪುರವು ಗೋವಾದಲ್ಲಿರುವ ಹೆಸರಾಂತ ಕಟ್ಟಡಗಳ ಪೈಕಿ ಒಂದಾಗಿ ಇಂದು ಹೆಸರನ್ನು ಗಳಿಸಿದ್ದು, ಸಂಜೆಯ ಹೊತ್ತು ಇಲ್ಲಿ ಸೂರ್ಯಾಸ್ತವನ್ನು ವಿಹಂಗಮವಾಗಿ ವೀಕ್ಷಿಸುವುದರ ಜತೆಗೆ ಛಾಯಾಚಿತ್ರ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ತಾಣವಾಗಬಹುದು.

Tags

Related Articles

Leave a Reply

Your email address will not be published. Required fields are marked *

Language
Close